More

    ರಸ್ತೆ ಸುರಕ್ಷತಾ ನಿಯಮ ಎಲ್ಲರೂ ಪಾಲಿಸಿ

    ಬೆಳಗಾವಿ: ಸಾರ್ವಜನಿಕರು ವಾಹನಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ವಾಹನ ಚಾಲನಾ ಸಂದರ್ಭದಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಹೇಳಿದರು.

    ನಗರದಲ್ಲಿನ ಡ್ರೈವಿಂಗ್ ಸ್ಕೂಲ್ ಮಾಲೀಕರ ಒಕ್ಕೂಟದ ವತಿಯಿಂದ ಕನ್ನಡ ಸಾಹಿತ್ಯಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡ್ರೈವಿಂಗ್ ಸ್ಕೂಲ್ ದಿನ ಆಚರಣೆಯಲ್ಲಿ ಮಾತನಾಡಿದರು. ನಗರ ಪ್ರದೇಶ ಹಾಗೂ ಹೆದ್ದಾರಿಗಳಲ್ಲಿ ಅಳವಡಿಸಿರುವ ಎಚ್ಚರಿಕೆ ಹಾಗೂ ಸೂಚನಾ ಫಲಕಗಳನ್ನು ಗಮನಿಸಿ, ಸುರಕ್ಷಿತ ಪ್ರಯಾಣಕ್ಕೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು ಎಂದರು.

    ಬೈಕ್ ಸವಾರರು, ವಾಹನ ಚಾಲಕರು ಯಾರೇ ಇರಲಿ ಮೊದಲು ಸುರಕ್ಷತೆಗೆ ಆದ್ಯತೆ ನೀಡಬೇಕು. ಒತ್ತಡದ ಬದುಕಿನಲ್ಲಿ ಮತ್ತಷ್ಟು ಅವಸರ ಮಾಡಿ, ಅಪಘಾತಗಳಿಗೆ ಅವಕಾಶ ನೀಡಬಾರದು. ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಧರಿಸುವುದು ಜೀವ ಉಳಿಸಿಕೊಳ್ಳಲು ಅತ್ಯುತ್ತಮ ಕ್ರಮಗಳಾಗಿವೆ. ಜತೆಗೆ ನಿಯಮಾನುಸಾರ ವಾಹನದ ಸಾಮರ್ಥ್ಯ ತಪಾಸಣೆಗೊಳಪಡಿಸುವ ಮೂಲಕ ಕಾರ್ಯಕ್ಷಮತೆ ತಿಳಿದಿರಬೇಕು ಎಂದರು.
    ಡ್ರೈವಿಂಗ್ ಸ್ಕೂಲ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಸವರಾಜ ಕಡ್ಲಿ ಮಾತನಾಡಿ, ಬೆಳಗಾವಿ ಮಹಾನಗರದ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಬಗ್ಗೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಮನವಿ ಮಾಡಿದರು.

    ಇದಕ್ಕೂ ಮುನ್ನ, ಇಲ್ಲಿನ ಆರ್‌ಟಿಒ ಕಚೇರಿಯಿಂದ ಆರಂಭಿಸಿದ ಕಾರ್ ರ‌್ಯಾಲಿ ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಬೋಗಾರವೇಸ್ ಮಾರ್ಗವಾಗಿ ಮತ್ತೆ ಚನ್ನಮ್ಮ ವೃತ್ತಕ್ಕೆ ಆಗಮಿಸುವ ಮೂಲಕ ಸಂಪನ್ನಗೊಂಡಿತು. ಪಿಎಸ್‌ಐ ಮಹಾಂತೇಶ ಮಠಪತಿ, ಹಿರಿಯ ನಾಗರಿಕ ಜಾಫರ್ ತೋರಗಲ್, ಉಪಾಧ್ಯಕ್ಷ ಇಜಾಜ್ ತೋರಗಲ್, ಕಾರ್ಯದರ್ಶಿ ಸುನಿಲ ಮೇತ್ರಿ ಹಾಗೂ ಎಸ್.ಎಸ್.ಟಕ್ಕಣ್ಣವರ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts