More

    ರಸ್ತೆ ಸುಧಾರಣೆಗೆ 96 ಕೋಟಿ ರೂ. ಮಂಜೂರು

    ಹೊಳೆಆಲೂರ: 2019ರಲ್ಲಿ ಜರುಗಿದ ಭೀಕರ ಮಲಪ್ರಭಾ ಪ್ರವಾಹ ಹಾಗೂ ಮರಳು ಲಾರಿಗಳ ಸಂಚಾರದಿಂದ ಹೊಳೆಆಲೂರ ಭಾಗದ ರಸ್ತೆಗಳು ಹಾಳಾಗಿರುವುದು ನಿಜ. ಮತಕ್ಷೇತ್ರದಲ್ಲಿ ಸುಸಜ್ಜಿತ ರಸ್ತೆ ನಿರ್ವಿುಸುವ ಉದ್ದೇಶದಿಂದ ನಾನು ಲೋಕೋಪಯೋಗಿ ಸಚಿವನಾದ ಅಲ್ಪ ಅವಧಿಯಲ್ಲೇ 96 ಕೋಟಿ ರೂಪಾಯಿಗಳನ್ನು ರಸ್ತೆ ಸುಧಾರಣೆಗಾಗಿ ತಂದಿದ್ದೇನೆ ಎಂಬುದನ್ನು ಪಾದಯಾತ್ರೆ ಮಾಡುವವರು ಅರಿತುಕೊಳ್ಳಬೇಕು ಎಂದು ಸಚಿವ ಸಿ.ಸಿ. ಪಾಟೀಲ ಟಾಂಗ್ ನೀಡಿದರು.

    96 ಲಕ್ಷ ರೂಪಾಯಿ ವೆಚ್ಚದ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆ, 84 ಲಕ್ಷ ರೂ. ವೆಚ್ಚದ ಹೆಣ್ಣು ಮಕ್ಕಳ ಮಾದರಿಯ ಕೇಂದ್ರ ಶಾಲೆ, 21 ಲಕ್ಷ ವೆಚ್ಚದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಒಟ್ಟು 17 ನೂತನ ಕೊಠಡಿಯ ಉದ್ಘಾಟನೆ ಹಾಗೂ 45. 5 ಕೋಟಿ ರೂಪಾಯಿ ವೆಚ್ಚದ ಕೊಣ್ಣೂರ- ಹುನಗುಂಡಿ ರಸ್ತೆ ಸುಧಾರಣೆ ಕಾಮಗಾರಿಗೆ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣಗಳಿದ್ದು, ಒಬ್ಬರು ಕೊಣ್ಣೂರ ಭಾಗದಲ್ಲಿ ಪಾದಯಾತ್ರೆ ಮಾಡಿದರೆ, ಇನ್ನೊಬ್ಬರು ಹೊಳೆಆಲೂರ ಭಾಗದಲ್ಲಿ ಪಾದಯಾತ್ರೆ ಮಾಡುತ್ತಾರೆ ಎಂದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಸಿ. ಪಾಟೀಲ ಮಾತನಾಡಿದರು. ಯಚ್ಚರಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಮಂಡಲ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಜಿಲ್ಲಾ ಹಿಂದುಳಿದ ವರ್ಗದ ಮೋರ್ಚಾ ಅಧ್ಯಕ್ಷ ಅಶೋಕ ಹೆಬ್ಬಳ್ಳಿ, ಜಿಪಂ ಮಾಜಿ ಸದಸ್ಯ ಶಿವಕುಮಾರ ನೀಲಗುಂದ, ತಾಪಂ ಮಾಜಿ ಸದಸ್ಯ ಜಗದೀಶ ಬ್ಯಾಡಗಿ, ಗ್ರಾಪಂ ಅಧ್ಯಕ್ಷ ಸಂಗಪ್ಪ ದುಗಲದ, ಜಿಲ್ಲಾ ಎಸ್​ಟಿ ಮೋರ್ಚಾ ಕಾರ್ಯದರ್ಶಿ ಬಸವಂತಪ್ಪ ತಳವಾರ, ವೀರಸಂಗಯ್ಯ ಮಹಕಾಶಿಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts