More

    ರಸ್ತೆಯಲ್ಲೇ ಕಾಡು ಪ್ರಾಣಿಗಳ ಓಡಾಟ

    ಸಿದ್ದಾಪುರ: ಲಾಕ್ ಡೌನ್​ನಿಂದ ಜನರ ಓಡಾಟ ಹಾಗೂ ವಾಹನ ಸಂಚಾರ ಸ್ಥಗಿತಗೊಂಡಿದ್ದರೆ ಇತ್ತ ಕಾಡು ಪ್ರಾಣಿಗಳು ನಿರಾತಂಕವಾಗಿ ರಸ್ತೆಯ ಮೇಲೆ ಸಂಚಾರ ಮಾಡುತ್ತಿವೆ. ಸಿದ್ದಾಪುರ ತಾಲೂಕಿನ ಜೋಗ ಜಲಪಾತದ ಸೀತಾಕಟ್ಟೆ ಸೇತುವೆ ಸಮೀಪದ ರಸ್ತೆಯಲ್ಲಿ ಹಗಲು ವೇಳೆ ಕಾಡುಪ್ರಾಣಿಗಳು ಓಡಾಡುತ್ತಿವೆೆ.

    ಕಳೆದ ಮೂರು ದಿನದಿಂದ ಚಿರತೆಯೊಂದು ಓಡಾಡುತ್ತಿರುವುದನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೆ, ರಾತ್ರಿ ಸಮಯದಲ್ಲಿ ಸ್ಥಳೀಯ ಪರಿಮಳ ಹೋಟೆಲ್ ಹತ್ತಿರದ ಮನೆಯೊಂದರಲ್ಲಿ ಸಾಕಿದ್ದ ನಾಯಿಯನ್ನು ಹಿಡಿದುಕೊಂಡು ಹೋದ ದೃಶ್ಯ ಹೊಟೇಲ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಾವಾಗಲೂ ಈ ರಸ್ತೆಯಲ್ಲಿ ವಾಹನ ಸಂಚಾರ ಮಾಡುತ್ತಿರುವುದರಿಂದ ಕಾಡುಪ್ರಾಣಿಗಳ ಹಾವಳಿ ಕಡಿಮೆ ಇತ್ತು. ಆದರೆ, ಈಗ ಲಾಕ್ ಡೌನ್​ನಿಂದ ವಾಹನ ಸಂಚಾರ ವಿರಳವಾಗಿದ್ದರಿಂದ ಕಾಡು ಪ್ರಾಣಿಗಳ ಓಡಾಟ ಹೆಚ್ಚಾಗಿದೆ. ಚಿರತೆಯಂತೆ ಕಾಡು ಕೋಣಗಳು ಸಂಜೆಯ ಸಮಯದಲ್ಲಿ ರಸ್ತೆಯ ಮೇಲೆ ಸಂಚಾರ ಮಾಡುತ್ತಿರುವುದಲ್ಲದೆ ಸಮೀದಪ ಗದ್ದೆ-ತೋಟಗಳಿಗೆ ಧಾವಿಸಿ ಬೆಳೆಗಳನ್ನು ನಾಶ ಮಾಡುತ್ತಿವೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕಾಡು ಪ್ರಾಣಿಗಳ ಹಾವಳಿ ತಡೆಯಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts