More

    ರತಿ-ಮನ್ಮಥರ ನಗಿಸುವ ಸ್ಪರ್ಧೆ

    ರಾಣೆಬೆನ್ನೂರ: ಹೋಳಿ ಹುಣ್ಣಿಮೆ ನಿಮಿತ್ತ ಸ್ಥಳೀಯ ಶ್ರೀ ಶಕ್ತಿ ಯುವಕ ಮಂಡಳ, ರಾಮಲಿಂಗೇಶ್ವರ ಸಮಿತಿ ವತಿಯಿಂದ ನಗರದ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಜೀವಂತ ರತಿ-ಮನ್ಮಥರ ನಗಿಸುವ ಸ್ಪರ್ಧೆ ನಡೆಯಿತು.

    ದಾವಣಗೆರೆ, ಹುಬ್ಬಳ್ಳಿ, ಹಾವೇರಿ, ಸವಣೂರ, ಶಿಗ್ಗಾಂವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜನರು ನಗೆ ಚಟಾಕಿಗಳು ಹಾಸ್ಯದ ತುಣುಕುಗಳನ್ನು ಹೇಳುತ್ತ, ಮಹಿಳೆಯರ ಸೋಗು ಹಾಕುತ್ತ ಕಾಮಣ್ಣರನ್ನು ನಗಿಸಲು ಪ್ರಯತ್ನಿಸಿದರು.

    ವಿವಿಧ ಸಂಘಟನೆಗಳ ವತಿಯಿಂದ ರತಿ-ಮನ್ಮಥರನ್ನು ನಗಿಸಿದವರಿಗೆ 1 ಲಕ್ಷರೂ.ಗೂ ಅಧಿಕ ಮೊತ್ತದ ಬಹುಮಾನ ಘೊಷಿಸಲಾಗಿತ್ತು. ತಲತಲಾಂತರದಿಂದ ರತಿ-ಮನ್ಮಥರನ್ನು ನಗಿಸಿದ ಉದಾಹರಣೆಗಳಿಲ್ಲ. ಆದರೆ ಈ ಬಾರಿ ಯಾರಾದರೂ ನಗಿಸುವರೇ ಎಂಬ ಕುತೂಹಲದಿಂದ ಬಿಟ್ಟ ಕಣ್ಣು ಮುಚ್ಚದಂತೆ ಸ್ಥಳೀಯರು ಕಾಯ್ದು ಕುಳಿತಿದ್ದರು. ಇನ್ನೊಂದು ಬದಿಯಲ್ಲಿ ಬಹುಮಾನ ಘೊಷಣೆ ಮಾಡಿದ ಸಂಘಟನೆಗಳು ತಮ್ಮ ಹಣದ ಚೀಲವನ್ನು ಗಟ್ಟಿಯಾಗಿ ಹಿಡಿದು ಕುಳಿತಿದ್ದರು.

    ಕಾಮನ ವೇಷವನ್ನು ಗದಿಗೆಪ್ಪ ರೊಡ್ಡನವರ ಹಾಗೂ ರತಿ ವೇಷದಲ್ಲಿರುವ ಕುಮಾರ ಹಡಪದ ಈ ಬಾರಿಯೂ ತುಟಿ ಪಿಟ್ ಎನ್ನದೆ ಕುಳಿತುಕೊಂಡಿರುವುದು ವಿಶೇಷವಾಗಿತ್ತು.

    ಇಂದು ಓಕುಳಿ: ಮಾ. 11ರಂದು ನಗರ ಸೇರಿ ತಾಲೂಕಿನಾದ್ಯಂತ ಹೋಳಿ ನಿಮಿತ್ತ ಓಕಳಿ ನಡೆಯಲಿದೆ. ನಗರದ ದುರ್ಗಾ ವೃತ್ತ, ಸಂಗಮ್ ವೃತ್ತ, ದೊಡ್ಡಪೇಟೆ, ವಿನಾಯಕ ನಗರ, ಮೃತ್ಯುಂಜಯ ನಗರದಲ್ಲಿ ಸೇರಿ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ ಕಾಮಣ್ಣ ಮೂರ್ತಿ ದಹನ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts