More

    ರಂಗಭೂಮಿ ಪರಿಕಲ್ಪನೆ ಅತ್ಯಂತ ವಿಶಾಲ

    ರಿಪ್ಪನ್‍ಪೇಟೆ: ಎಲ್ಲ ಭೇದಗಳನ್ನು ಅಳಿಸಿ, ಸಮತೆಯ ಕಣ್ಣಲ್ಲಿ ಒಡೆದ ಮನಸ್ಸುಗಳನ್ನು ಕಟ್ಟುವ ಸಮರ್ಥ ಮಾಧ್ಯಮವೇ ರಂಗಭೂಮಿ. ರಂಗಭೂಮಿಯ ಮುಖಾಂತರ ಆರೋಗ್ಯಕರ ಮನಸ್ಸುಳ್ಳ ಯುವಜನತೆಯನ್ನು ರೂಪಿಸುವ ಅಗತ್ಯವಿದೆ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ ಸಿ.ಕುನುಗೋಡು ತಿಳಿಸಿದರು.
    ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ದಿ. ರೇಣುಕಪ್ಪಗೌಡ ಪ್ರತಿಷ್ಠಾನ, ಮಲೆನಾಡು ಕಲಾತಂಡ ಮಸರೂರು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಂಗಭೂಮಿ ಅಂದು ಮತ್ತು ಇಂದು ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಅಂದಿನ ರಂಗಕ್ರಿಯೆಗಳು ಹಸಿವು, -Àಲವತ್ತತೆ, ಚರಿತ್ರೆಯ ಪ್ರಸರಣ, ಆರಾಧನೆ ಹಾಗೂ ಆಧ್ಯಾತ್ಮಿಕತೆಯ ಅಂಶಗಳನ್ನು ಒಳಗೊಂಡ ಪ್ರಕ್ರಿಯೆಯಾಗಿ, ಮನುಕುಲದ ಅವಿಭಾಜ್ಯ ಅಂಗವಾಗಿ ಬೆಳೆದುಬಂದಿವೆ. ರಂಗಭೂಮಿಯ ಪರಿಕಲ್ಪನೆ ವಿಶಾಲವಾಗಿದ್ದು, ಇಂದು ನಾನಾ ರೂಪಾಂತರಗಳ ಮೂಲಕ ತನ್ನ ಜೀವಂತಿಕೆಯನ್ನು ಕಾಪಿಟ್ಟುಕೊಂಡಿದೆ ಎಂದರು.
    ಹಿರಿಯ ಸಾಹಿತಿ ಅ.ಹ.ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಗೀತಾ ರಂಗಗೀತೆಗಳನ್ನು ಪ್ರಸ್ತುತ ಪಡಿಸಿದರು. ಲಕ್ಷ್ಮೀ ಭದ್ರಾವತಿ ಅವರು ಕಲ್ಯಾಣ ಕ್ರಾಂತಿಯ ತುಣುಕು ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನ ನೀಡಿದರು. ಪಿಡಿಒ ಚಂದ್ರಶೇಖರ, ಹರೀಶ್ ಇತರರಿದ್ದರು.
    ಪ್ರತಿವರ್ಷ ಮಕ್ಕಳ ರಂಗ ಹಬ್ಬ: ಪ್ರತಿವರ್ಷ ಜಗತ್ತಿನ ಶ್ರೇಷ್ಠ ರಂಗ ದಿಗ್ಗಜರು ವಿಶ್ವಕ್ಕೆ ರಂಗ ಸಂದೇಶ ನೀಡುತ್ತಾರೆ. ಪ್ರಸಕ್ತವಾಗಿ ಈಜಿಪ್ಟ್‍ನ ರಂಗ ನಟಿ ಸಮಿಹಾ ಅಯೂಬ್ ಸಂದೇಶ ನೀಡಿದ್ದಾರೆ. ರಂಗಭೂಮಿಯು ಸಮಾಜದ ಎಲ್ಲ ಕಂದಕಗಳನ್ನು ತೊಡೆದು ಹಾಕಲು ಚಿಕಿತ್ಸಕ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ರಂಗಕರ್ಮಿ ಗಣೇಶ್ ಕೆಂಚನಾಲ ಹೇಳಿದರು. ಇಂದು ಆಧುನಿಕ ತಂತ್ರಜ್ಞಾನದಿಂದ ಜಗತ್ತು ಹತ್ತಿರವಾಗಿದೆ. ಆದರೆ ಮಾನವೀಯ ಸಂಬಂಧವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ನಡುವೆ ಇರುವ ಕಂದಕಗಳನ್ನು ತೊಡೆದು ಹಾಕಲು ರಂಗಭೂಮಿ ಪ್ರಬಲ ಸಾಧನ. ಇದಕ್ಕಾಗಿ ಯುವಜನತೆ ರಂಗ ಕ್ಷೇತ್ರದೆಡೆ ಮುಖ ಮಾಡಬೇಕು. ನಗರ ಪ್ರದೇಶದ ಮಕ್ಕಳಿಗೆ ಸಿಗುವ ಅವಕಾಶಗಳು ಗ್ರಾಮೀಣ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಸಿಗುವಂತೆ ಮಾಡುವ ಉದ್ದೇಶದಿಂದ ಪ್ರತಿವರ್ಷ ಹಳ್ಳಿ ಮಕ್ಕಳ ರಂಗ ಹಬ್ಬವನ್ನು ರಿಪ್ಪನಪೇಟೆಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಆಯೋಜಿಸಲಾಗುತ್ತದೆ. ಎಲ್ಲ ಮಕ್ಕಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts