More

    ಯೋಜನಾ ವರದಿ ಕೇಂದ್ರಕ್ಕೆ ಸಲ್ಲಿಸಲು ನಿರ್ಧಾರ

    ಯಾದಗಿರಿ: ಜೇವರ್ಗಿ -ಶಹಾಪುರ-ಸುರಪುರ ರಾಷ್ಟ್ರೀಯ ಹೆದ್ದಾರಿ ಹಾಗೂ ಶಹಾಪುರ ಬೈಪಾಸ್ ರಸ್ತೆ ನಿಮರ್ಾಣಕ್ಕೆ ಸಂಬಂಸಿದ ಯೋಜನಾ ವರದಿ ಕೇಂದ್ರ ಸರಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದ್ದಾರೆ.

    ಶುಕ್ರವಾರ ನಗರದ ಜಿಲ್ಲಾಕಾರಿ ಕಚೇರಿಯ ಸಭಾಂಗಣದಲ್ಲಿ ಕರೆದಿದ್ದ ಕೇಂದ್ರ ಸರಕಾರದ ಪ್ರಮುಖ ಯೋಜನೆಗಳ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳಡಿಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೇಂದ್ರಕ್ಕೆ ಸಲ್ಲಿಸಲಾಗುವ ಈ ಪ್ರಸ್ತಾವನೆಯಿಂದ ಬಿಜಾಪುರ- ಹೈದರಾಬಾದ್ ಹಾಗೂ ಸೋಲ್ಲಾಪುರ-ಭೀ.ಗುಡಿ ಬೆಂಗಳೂರ ಮಾರ್ಗಕ್ಕೂ ಹಾಗೂ ಅಭಿವೃದ್ಧಿ ಹೊಂದಿಲ್ಲದ ಪ್ರದೇಶಗಳಿಗೂ ಸಹಕಾರಿಯಾಗಲಿದೆ ಎಂದು ಹೇಳಿದರು.

    ಅದರಂತೆ ರಾಜ್ಯ ಪುರಸ್ಕೃತ ಸಿಂದಗಿ- ಹೈದರಾಬಾದ್- ಕೊಡಂಗಲ್ ಹೊಸ ರಸ್ತೆ ನಿಮರ್ಾಣಕ್ಕೆ ಸಂಬಂಸಿದಂತೆ ಸರ್ವೆಕಾರ್ಯ ಆರಂಭಿಸಬೇಕು. ಅದರಂತೆ ಕೇಂದ್ರ ಸರಕಾರದಿಂದ ಜೇವರ್ಗಿ – ಸುರಪುರ ಮಧ್ಯದ ರಸ್ತೆಗೆ ಸಂಬಂಧಪಟ್ಟಂತೆ ಬಾಕಿ ಸವರ್ೆ ಕಾರ್ಯಗಳು ಸಹ ಆಗಬೇಕಿದ್ದು, ಹುಲಕಲ್, ಭೀಮರಾಯನ ಗುಡಿ, ಸಗರ, ಬಿಜಾಸಪುರ ವ್ಯಾಪ್ತಿಯಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಬಾಕಿ ಸರ್ವೆ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

    ಸುರಪುರ -ತಿಂಥಣಿ ರಸ್ತೆ ನಿಮರ್ಾಣಕ್ಕೆ ಸಂಬಂಸಿದಂತೆ ರಾಜ್ಯ ಸರಕಾರದ ಅನುದಾನದಡಿ ರಸ್ತೆ ನಿರ್ಮಿಸಬೇಕಾಗಿದ್ದು, ಸರ್ವೆಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯ ಯಾದಗಿರಿಗೆ ಈಗಾಗಲೇ ಸೈನಿಕ ಶಾಲೆ ಮಂಜೂರಾಗಿದ್ದು ಶಾಲೆಗೆ ಅವಶ್ಯವಿರುವ ಆವರಣಗೋಡೆ ಮತ್ತು ಇತರೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಕುರಿತ ಪ್ರಸ್ತಾವನೆ ಸಲ್ಲಿಸಬೇಕು. ಅದರಂತೆ ಹುಣಸಗಿ ಏಕಲವ್ಯ ಶಾಲೆಗಾಗಿ ಸೂಕ್ತ ಪ್ರಸ್ತಾವನೆ ಸಂಬಂಸಿದ ಶಾಸಕರೊಂದಿಗೆ ಚಚರ್ಿಸಿ ಸಲ್ಲಿಸುವಂತೆ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts