More

    ಯೋಗೀಶಗೌಡ ಹತ್ಯೆಯಲ್ಲಿ ರಾಜಕಾರಣಿಯೊಬ್ಬರ ಪಾತ್ರ ?

    ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣ ಹೊಸ ತಿರುವು ಪಡೆಯುವ ಲಕ್ಷಣ ಕಂಡು ಬಂದಿದ್ದು, ಕೊಲೆ ಹಿಂದೆ ರಾಜಕಾರಣಿಯೊಬ್ಬರ ಪಾತ್ರ ಇರುವ ಬಗ್ಗೆ ಸಿಬಿಐ ಅನುಮಾನ ವ್ಯಕ್ತಪಡಿಸಿದೆ.

    ರಾಜಕಾರಣಿ ಆಪ್ತರು ಹಾಗೂ ಸಂಬಂಧಿಕರನ್ನು ವಿಚಾರಣೆ ನಡೆಸಿ ಹತ್ಯೆಯ ಹಿಂದಿನ ರಹಸ್ಯ ಭೇದಿಸಲು ಮುಂದಾಗಿದ್ದಾರೆ. ರಿಯಲ್ ಎಸ್ಟೇಟ್ ಹಾಗೂ ರಾಜಕೀಯ ದುರುದ್ದೇಶದಿಂದ ಹತ್ಯೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಯೋಗೀಶ ಗೌಡ ಅವರ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಈ ರಾಜಕಾರಣಿ, ಬೇರೆ ವ್ಯಕ್ತಿಗಳ ಮೂಲಕ ಹತ್ಯೆ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.

    ಈಗಾಗಲೇ ಐಪಿಎಸ್ ಅಧಿಕಾರಿಗಳು ಸೇರಿ ಹಲವು ಜನರನ್ನು ವಿಚಾರಣೆ ನಡೆಸಿರುವ ಸಿಬಿಐ, ಹತ್ಯೆಗೆ ಸಂಬಂಧಿಸಿದಂತೆ ಸಾಕ್ಷ್ಯ ಕಲೆ ಹಾಕುವಲ್ಲಿ ನಿರತವಾಗಿದೆ. ಈ ರಾಜಕಾರಣಿಯ ಆಪ್ತರನ್ನು ಸದ್ಯದಲ್ಲೇ ವಿಚಾರಣೆ ನಡೆಸಲಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿರುವ ಸಿಬಿಐ ನಡೆಯಿಂದ ಹತ್ಯೆಯಲ್ಲಿ ಪರೋಕ್ಷವಾಗಿ ಶಾಮೀಲಾದವರು ಆತಂಕಕ್ಕೊಳಗಾಗಿದ್ದು, ಪ್ರಕರಣದಿಂದ ಪಾರಾಗಲು ಪ್ರಭಾವಿ ರಾಜಕಾರಣಿಗಳ ಮೊರೆ ಹೋಗಿದ್ದಾರೆ. ಸಿಸಿ ಕ್ಯಾಮರಾ, ಆರೋಪಿಗಳ ಮೊಬೈಲ್ ಕರೆಗಳ ಆಧಾರದ ಮೇಲೆ ತನಿಖೆ ನಡೆಸಿ ಯೋಗೀಶಗೌಡ ಹತ್ಯೆ ಮಾಡಿದವರನ್ನು ಪತ್ತೆ ಹಚ್ಚಿ ಪ್ರಾಥಮಿಕ ಹಂತದ ದೋಷಾರೋಪ ಪಟ್ಟಿಯನ್ನು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆರೋಪಿಗಳು ಹತ್ಯೆ ಮಾಡಲು ರೂಪಿಸಿದ ಸಂಚಿನ ಬಗ್ಗೆ ಚಾರ್ಜ್​ಶೀಟ್​ನಲ್ಲಿ ಎಳೆ ಎಳೆಯಾಗಿ ಉಲ್ಲೇಖಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts