More

    ಯೋಗದಿಂದ ಕರೊನಾ ದೂರ

    ಹುಬ್ಬಳ್ಳಿ: ನಿತ್ಯ ಯೋಗಾಭ್ಯಾಸ ಮಾಡುವ ಮೂಲಕ ವಿಶ್ವವನ್ನು ಕಾಡುತ್ತಿರುವ ಕರೊನಾ ಮಹಾಮಾರಿ ತಡೆಯಬಹುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    6ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪತಂಜಲಿ ಯೋಗ ಸಮಿತಿಯಿಂದ ನಗರದ ಕೇಶ್ವಾಪುರ ಬಾಫ್ನಾ ಭವನದ ಪತಂಜಲಿ ರಾಜ್ಯ ಕಾರ್ಯುಲಯದಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

    ಯೋಗ ಒಂದು ಸ್ವಸ್ಥ ಜೀವನ ಪದ್ಧತಿಯಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ಯೋಗ, ಸರ್ವತೋಮುಖ ಬೆಳವಣಿಗೆಗೂ ಸಹಕಾರಿಯಾಗಿದೆ. ಯೋಗವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಪತಂಜಲಿಯ ಅಶ್ವಗಂಧ, ತುಳಸಿ, ಅಮೃತಬಳ್ಳಿ, ಚವನಪ್ರಾಶ ಸೇವನೆಯಿಂದ ಕರೊನಾ ಸೋಂಕು ಹೊಡೆದೋಡಿಸಬಹುದು ಎಂದರು.

    ಪ್ರತಿಯೊಬ್ಬರಿಗೂ ಯೋಗ ಪರಿಚಯಿಸುವಲ್ಲಿ ಬಾಬಾ ರಾಮದೇವ ಗುರೂಜಿ ಪಾತ್ರ ಮಹತ್ವದ್ದು. ಬಹುರಾಷ್ಟ್ರಗಳ ಒಕ್ಕೂಟದಲ್ಲಿ ಯೋಗ ಪ್ರಸ್ತಾಪಿಸುವ ಮೂಲಕ ಅದಕ್ಕೆ ಜಾಗತಿಕ ಮನ್ನಣೆ ಸಿಗುವಂತೆ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು.

    ಯೋಗಗುರು ಬಾಬಾ ರಾಮದೇವ ಗುರೂಜಿ ಅವರು ಗುಣಮಟ್ಟದ ದಿನಬಳಕೆ ಮತ್ತು ಆಯುರ್ವೆದಿಕ್ ವಸ್ತುಗಳನ್ನು ತಯಾರಿಸಿ ಮನೆ ಮನೆಗೆ ತಲುಪಿಸುವುದರ ಮೂಲಕ ಸ್ವದೇಶಿ ಬಳಕೆ ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.

    ಪತಂಜಲಿ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಮಾತನಾಡಿ, ಯೋಗ ಪ್ರಾಚೀನ ಪರಂಪರೆಯಾಗಿದೆ. ಯೋಗ ಎಂದರೆ ಕೂಡುವುದು, ಆತ್ಮ ಮತ್ತು ಪರಮಾತ್ಮ ಒಂದಾಗುವಿಕೆ. ಯೋಗ ಸಾಧನೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಿತ್ಯ ಒಂದು ಗಂಟೆ ಅಭ್ಯಾಸ ಮಾಡಬೇಕು ಎಂದರು.

    ಜೈನ್ ಇಂಟರ್​ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ ಅಧ್ಯಕ್ಷ ಭವರಲಾಲ್ ಜೈನ್, ಸುರೇಶ ಜೈನ್, ಬಸವರಾಜ ಹಿರೇಮಠ, ಜಿಲ್ಲಾ ಪ್ರಭಾರಿ ಎಂ.ಡಿ. ಪಾಟೀಲ, ಯೋಗ ಸಾಧಕರಾದ ಕಲ್ಲಯ್ಯ, ಹರ್ಷಿತ, ಕೃಷ್ಣಾಜಿ ಇತರರಿದ್ದರು.

    ಪತಂಜಲಿ ಯೋಗ ಸಮಿತಿಯಿಂದ ಕಳೆದ 15 ದಿನಗಳಿಂದ ಫೇಸ್​ಬುಕ್ ಮೂಲಕ ಲೈವ್ ಯೋಗ ತರಗತಿ ನಡೆಸಲಾಗಿತ್ತು. ರಾಜ್ಯಾದ್ಯಂತ 5 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts