More

    ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ

    ಅಣ್ಣಿಗೇರಿ: ಸರ್ಕಾರ ಮತ್ತು ಸಚಿವರು ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆಯಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ, ತಾಲೂಕಿನಲ್ಲಿ ಮಾತ್ರ ರೈತರಿಗೆ ಸಮರ್ಪಕ ಗೊಬ್ಬರ ಸಿಗದೇ ಪರದಾಡುತ್ತಿದ್ದಾರೆ.

    ಈಗಾಗಲೇ ಖಾಸಗಿ ರಸಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ಖಾಲಿಯಾಗಿದೆ. ಇಂತಹ ಸಂದರ್ಭದಲ್ಲಿ ಮಧ್ಯಮ ಹಾಗೂ ಸಣ್ಣ ರೈತರು ದಿನವೂ ಗೊಬ್ಬರದಂಗಡಿಗಳಿಗೆ ಅಲೆದಾಡುವಂತಾಗಿದೆ. ಕಳೆದ ಮುಂಗಾರು ಹಂಗಾಮಿನಲ್ಲಿ 220 ಟನ್ ಯೂರಿಯಾ ಗೊಬ್ಬರ ದಾಸ್ತಾನಿತ್ತು. ಆದರೆ, ಈ ಬಾರಿ 190 ಟನ್​ನಷ್ಟು ಮಾತ್ರ ದಾಸ್ತಾನು ಮಾಡಲಾಗಿದೆ. ಅದರಲ್ಲಿ ಎಲ್ಲವೂ ಖಾಲಿಯಾಗಿದೆ. ರೈತರಿಗೆ ಈಗ ಯೂರಿಯಾ ಗೊಬ್ಬರ ಅವಶ್ಯಕತೆ ಇದೆ. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಗೊಬ್ಬರ ಇದೆ ಎಂದು ಹೇಳಿಕೆ ನೀಡುತ್ತಿದ್ದಾರೆಯೇ ಹೊರತೂ ರೈತರ ನೆರವಿಗೆ ಧಾವಿಸುತ್ತಿಲ್ಲ.

    ಕೂಡಲೆ ಸರ್ಕಾರ ಸಮರ್ಪಕವಾಗಿ ರೈತರಿಗೆ ಯೂರಿಯಾ ಗೊಬ್ಬರ ತಲುಪುವಂತೆ ಸೂಕ್ತ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

    ಕಳೆದ 15 ದಿನಗಳಿಂದ ಯೂರಿಯಾ ಗೊಬ್ಬರ ಬಂದಿದೆ. ಅದನ್ನು ಈಗಾಗಲೇ ರೈತರಿಗೆ ಪೂರೈಸಲಾಗಿದೆ. ಇನ್ನೂ 100 ಟನ್ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಇಡಲಾಗಿದೆ. ಆದರೆ, ಸರ್ಕಾರ ಅದನ್ನೂ ಪೂರೈಸಿಲ್ಲ. ಶೀಘ್ರದಲ್ಲಿ ಪೂರೈಸಲಿದೆ.

    | ಬಸನಗೌಡ ಕುರಹಟ್ಟಿ ಸೊಸೈಟಿ ಚೇರ್ಮನ್

    ಪಟ್ಟಣದ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಬಿತ್ತನೆ ಕಾರ್ಯ ಸಂಪೂರ್ಣವಾಗಿ ಮುಗಿದಿದ್ದು, ಬೆಳೆಗೆ ನೀಡಲು ಯೂರಿಯಾ ಗೊಬ್ಬರ ಅತ್ಯವಶ್ಯಕವಾಗಿ ಬೇಕಾಗಿದೆ. ಆದರೆ, ಸಕಾಲಕ್ಕೆ ದೊರೆಯುತ್ತಿಲ್ಲ. ಕೂಡಲೆ, ಸರ್ಕಾರ, ಜಿಲ್ಲಾಡಳಿತ ರೈತರಿಗೆ ಯೂರಿಯಾ ಗೊಬ್ಬರವನ್ನು ಸಮರ್ಪಕವಾಗಿ ಪೂರೈಸಬೇಕು.

    | ನಾಗರಾಜ ದಳವಾಯಿ ರೈತ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts