More

    ಯುವಜನತೆ ದೇಶ ಕಟ್ಟುವ ಚಿಂತನೆ ಮಾಡಲಿ

    ರಬಕವಿ/ಬನಹಟ್ಟಿ: ಯುವ ಜನತೆ ಶಿಕ್ಷಣದ ಜತೆಗೆ ಅಧ್ಯಾತ್ಮ ಮತ್ತು ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕು. ದೇಶ ಕಟ್ಟುವ ವಿಚಾರ ಮತ್ತು ತತ್ವ ಮೈಗೂಡಿಸಿಕೊಂಡಾಗ ಮಾತ್ರ ಒಬ್ಬ ವ್ಯಕ್ತಿ ಪರಿಪೂರ್ಣನಾಗುತ್ತಾನೆ ಎಂದು ಚಟ್ಟರಕಿಯ ಶಂಕ್ರಯ್ಯ ಹಿರೇಮಠ ಶಾಸಿಗಳು ಹೇಳಿದರು.

    ಬನಹಟ್ಟಿ ಹಿರೇಮಠದಲ್ಲಿ ಬುಧವಾರ ಜರುಗಿದ ಲಿಂ.ಶಾಂತವೀರ ಶಿವಾಚಾರ್ಯ ಸ್ವಾಮಿಗಳ 33ನೇ ಚಿರಲಿಂಗಾಂಗ ಸಾಮರಸ್ಯ ದಿನೋತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ, ಬೆಳಕು ಚಿಂತನ ಧಾರ್ಮಿಕ ಕಾರ್ಯಕ್ರಮ, ಪ್ರವಚನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

    ಸದ್ಯ ಕುರುಡು ಕಾಂಚಾಣ, ಅಧಿಕಾರದ ಮದ ತಲೆಗೇರಿಸಿಕೊಂಡು ಮಾನವ ಅಲ್ಪನಾಗಿದ್ದಾನೆ. ಅತೃಪ್ತಿಯಲ್ಲೇ ಜೀವನ ಸವೆಸುತ್ತಿದ್ದಾನೆ. ಆದ್ದರಿಂದ ಇಂಥ ಪುರಾಣ ಪ್ರವಚನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅಂತರಂಗವನ್ನು ಶುದ್ಧಿಗೊಳಿಸಿಕೊಳ್ಳಬೇಕು ಎಂದರು.

    ಕೊಣ್ಣೂರ ಹೊರಗಿನಮಠದ ಡಾ.ವಿಶ್ವಪ್ರಭು ಶಿವಾಚಾರ್ಯರು ಸಮ್ಮುಖ ವಹಿಸಿ ಮಾತನಾಡಿ, ಗುರು ಜ್ಞಾನಿಯಾದರೆ ಶಿಷ್ಯರು ಸುಜ್ಞಾನಿಯಾಗಬೇಕು. ಗುರು ಮರವಾದರೆ ಶಿಷ್ಯ ಹೆಮ್ಮರವಾಗಬೇಕು. ಹೀಗೆ ಗುರು-ಶಿಷ್ಯರಲ್ಲಿ ಆರೋಗ್ಯಕರ ಬೆಳವಣಿಗೆಯಾದಾಗ ಮಾತ್ರ ಅಧ್ಯಾತ್ಮದ ಅರಿವನ್ನು ಜನತೆಗೆ ಹಂಚಲು ಸಾಧ್ಯ. ಸದ್ಯ ಮನುಷ್ಯ ಸಾರ್ಥಕತೆ ಅರಿವಿಲ್ಲದೆ ಬದುಕುತ್ತಿದ್ದಾನೆ, ಸರ್ಕಾರ ಕೊಡುವ ಉಚಿತ ಯೋಜನೆಗಳಿಂದ ಸೋಮಾರಿಯಾಗುತ್ತಿದ್ದಾನೆ ಎಂದರು.
    ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಮಾತನಾಡಿ, ನೂರು ಗುಡಿಗಳು ಒಂದು ಮಠಕ್ಕೆ ಸಮಾನವೆಂದು ಹಿರಿಯರು ಹೇಳುತ್ತಾರೆ. ಆದ್ದರಿಂದ ಇದ್ದ ಒಂದು ಮಠವನ್ನು ದಾನ ಧರ್ಮದ ಮೂಲಕ ಉಳಿಸಿ ಬೆಳೆಸಬೇಕು ಎಂದರು.

    ಜಮಖಂಡಿ ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀಗಳು, ಶ್ರೀಮಠದ ಶರಣಬಸವ ಶಿವಾಚಾರ್ಯರು ಮಾತನಾಡಿದರು.
    ಬನಹಟ್ಟಿಯ ಹಿರಿಯರಾದ ಸಿದ್ದನಗೌಡ ಪಾಟೀಲ, ಶಂಕರ ಜುಂಜಪ್ಪನವರ, ಹುನ್ನೂರಿನ ವಿಶ್ವನಾಥ ಶಾಸಿಗಳು, ಜಗದಾಳ ಶಿವಲಿಂಗಯ್ಯ ಹಿರೇಮಠ ಶಾಸಿಗಳು, ಪ್ರಕಾಶ ದೇಸಾಯಿ, ಸೋಮವಾರಪೇಠ ದೈವಮಂಡಳಿಯ ಅಧ್ಯಕೆ ಮಲ್ಲಿಕಾರ್ಜುನ ತುಂಗಳ, ಮಂಗಳವಾರ ಪೇಠ ದೈವ ಮಂಡಳಿ ಅಧ್ಯಕ್ಷ ಶ್ರೀಶೈಲ ದಬಾಡಿ, ವಿಶ್ವಜ ಕಾಡದೇವರ, ಸುರೇಶ ಕೋಲಾರ, ಶ್ರೀಪಾದ ಬಾಣಕಾರ, ರಾಜಶೇಖರ ಮಾಲಾಪುರ ಸೇರಿದಂತೆ ಅನೇಕರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts