More

    ಯಲ್ಲಾಪುರ ತಾಲೂಕಿನಲ್ಲಿ ಸಂಭ್ರಮಾಚರಣೆ

    ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ ಅವರು ಗುರುವಾರ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ತಾಲೂಕಿನ ವಿವಿಧೆಡೆ ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಿಸಿದರು.

    ಹೆಬ್ಬಾರರ ಊರಾದ ಅರಬೈಲ್ ಸಮೀಪದ ಗುಳ್ಳಾಪುರದಲ್ಲಿ ಹಾಗೂ ಪಟ್ಟಣದ ಅಂಬೇಡ್ಕರ್ ಸರ್ಕಲ್, ಗಾಂಧಿ ಚೌಕದ ಬಳಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿದರು. ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಪ್ರಮುಖರಾದ ಜಿ.ಆರ್. ಭಟ್ಟ, ಆನಂದರಾಯ ಗೊಳಸಂಗಿ, ವಿಶ್ವ ಭಟ್ಟ, ಹರೀಶ ಹೆಬ್ಬಾರ, ರಾಘು ಶೆಟ್ಟಿ, ಧನಂಜಯ ಪಿಳ್ಳೆ, ಮಹಾಬಲೇಶ್ವರ ಭಟ್ಟ, ರಾಮು ನಾಯ್ಕ, ಶ್ಯಾಮಿಲಿ ಪಾಟಣಕರ್, ವಿನೋದ ತಳೆಕರ್, ಡಾ. ರವಿ ಭಟ್ಟ ಬರಗದ್ದೆ, ಮಹೇಶ ನಾಯ್ಕ, ಪ್ರದೀಪ ಯಲ್ಲಾಪುರಕರ್, ನರಸಿಂಹ ಬೋಳಪಾಲ, ಶಕೀಲ ಅಹ್ಮದ್, ರವಿ ದೇವಾಡಿಗ ಇತರರಿದ್ದರು.

    ಬಸವಣ್ಣ ಗುಡಿಯಲ್ಲಿ ವಿಶೇಷ ಪೂಜೆ

    ಮುಂಡಗೋಡ: ಶಿವರಾಮ ಹೆಬ್ಬಾರ ಅವರು ಸಚಿವರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಪಟ್ಟಣದ ಬಸವಣ್ಣ ದೇವಸ್ಥಾನದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

    ತಾಲೂಕಾಧ್ಯಕ್ಷ ನಾಗಭೂಷಣ ಹಾವಣಗಿ ಮಾತನಾಡಿ, ತಾಲೂಕಿಗೆ ಮೊದಲ ಬಾರಿ ಸಚಿವ ಸ್ಥಾನ ದೊರೆತಿರುವುದು ಸಂತಸದ ವಿಷಯ. ನೂತನ ಸಚಿವರಿಂದ ತಾಲೂಕಿನ ಅಭಿವೃದ್ಧಿಯಾಗಲಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಎಲ್​ಎಸ್​ಎಂಪಿ ಸೊಸೈಟಿ ಅಧ್ಯಕ್ಷ ಉಮೇಶ ಬಿಜಾಪುರ ಮಾತನಾಡಿದರು. ತಾಪಂ ಸದಸ್ಯ ಜ್ಞಾನದೇವ ಗುಡಿಯಾಳ, ಮುಖಂಡರಾದ ಶಿವಾನಂದ ಕುರುಬರ, ನಾಗರಾಜ ಕುನ್ನೂರ, ಸುನೀಲ ವೆರ್ಣೆಕರ, ನಾಗರಾಜ ಗುಬ್ಬಕ್ಕನವರ, ಮಂಜು ಕೋಣನಕೇರಿ, ಚಂದ್ರಶೇಖರ ಗಾಣಿಗೇರ, ವೆಂಕಟೇಶ ತಳವಾರ, ಮಹಮ್ಮದಶರೀಫ ಕರೀಂಸಾಬನವರ ಇತರರಿದ್ದರು.

    ಸಚಿವ ಹೆಬ್ಬಾರ ಪ್ರವಾಸ ಇಂದಿನಿಂದ

    ಯಲ್ಲಾಪುರ: ನೂತನ ಸಚಿವ ಶಿವರಾಮ ಹೆಬ್ಬಾರ ಫೆ. 7ರಿಂದ 10ರವರೆಗೆ ಕ್ಷೇತ್ರದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.7ರಂದು ಮಧ್ಯಾಹ್ನ 2ಕ್ಕೆ ಹುಬ್ಬಳ್ಳಿ ಮೂಲಕ ಯಲ್ಲಾಪುರಕ್ಕೆ ಆಗಮಿಸುವರು.

    ಸಂಜೆ 4ಕ್ಕೆ ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವರು. ಅಲ್ಲಿಂದ ಬನವಾಸಿಗೆ ತೆರಳಿ ಮಧುಕೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕದಂಬೋತ್ಸವದ ಸಿದ್ಧತೆಗಳನ್ನು ಪರಿಶೀಲಿಸುವರು. ಫೆ.8ರಂದು ಬೆಳಗ್ಗೆ 9.30ಕ್ಕೆ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ನೂತನ ರಾಜಹಂಸ ಬಸ್ ಉದ್ಘಾಟನೆ, ಅರಬೈಲ್ ಮಾರುತಿ ದೇವಸ್ಥಾನದಲ್ಲಿ ಪೂಜೆ ಬಳಿಕ ಯಲ್ಲಾಪುರದಲ್ಲಿ ಸಾರ್ವಜನಿಕರ ಕುಂದು-ಕೊರತೆ ಆಲಿಸುವರು. ಮಧ್ಯಾಹ್ನದ ನಂತರ ಬನವಾಸಿಯಲ್ಲಿ ಮುಖ್ಯಮಂತ್ರಿಯೊಂದಿಗೆ ಕದಂಬೋತ್ಸವದಲ್ಲಿ ಪಾಲ್ಗೊಳ್ಳುವರು.

    9ರಂದು ಮಾವಳ್ಳಿ ಜಾತ್ರೆಯಲ್ಲಿ ಹಾಗೂ ಸಂಜೆ ಕದಂಬ ಉತ್ಸವದ ಸಮಾರೋಪದಲ್ಲಿ ಭಾಗವಹಿಸುವರು. 10 ರಂದು ಬೆಳಗ್ಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಧ್ಯಾಹ್ನ ಮುಂಡಗೋಡಿನಲ್ಲಿ ಸಾರ್ವಜನಿಕರು, ಕಾರ್ಯಕರ್ತರನ್ನು ಭೇಟಿ ಮಾಡುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts