More

    ಯಲಗೂರದಲ್ಲಿ ಹನುಮ ಜಯಂತಿ

    ಆಲಮಟ್ಟಿ: ಸಮೀಪದ ಸುೇತ್ರ ಯಲಗೂರು ಗ್ರಾಮದ ಯಲಗೂರೇಶ್ವರನ ದೇವಸ್ಥಾನದಲ್ಲಿ ಮಂಗಳವಾರ ಹನುಮ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

    ಬೆಳಗ್ಗೆ 4ಕ್ಕೆ ಉತ್ಸವ ಮೂರ್ತಿಗೆ ಕೃಷ್ಣಾ ನದಿಯಲ್ಲಿ ಅಭಿವ್ರತ ಸ್ನಾನ ಮಾಡಿಸಲಾಯಿತು. ನದಿ ತೀರದಿಂದ ದೇವಸ್ಥಾನದವರೆಗೆ ವಿವಿಧ ವಾದ್ಯ ವೈಭವಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು. ದೇವಸ್ಥಾನ ಆವರಣದಲ್ಲಿ ಸೂಯೋರ್ದಯ ಸಮಯದಲ್ಲಿ ಹನುಮನ ತೊಟ್ಟಿ ತೊಟ್ಟಿಲೋತ್ಸವ ಜರುಗಿತು. ನಂತರ ಪಾನಕ ಕೋಸಂಬರಿ ವಿತರಿಸಲಾಯಿತು.

    ವೇದ ಮಂತ್ರಗಳೊಂದಿಗೆ ಪೂಜೆ ನೆರವೇರಿದ ಮೇಲೆ ಅನೇಕ ಮಹಿಳೆಯರು ಹನುಮನ ಭಕ್ತೀಗಿತೆಗಳನ್ನು ಹಾಡಿದರು. ಯಲಗೂರೇಶನಿಗೆ ಸಾಮೂಹಿಕ ಪಂಚಾಮೃತ ಅಭಿಷೇಕ, ಮಹಾಪೂಜೆ, ಅಲಂಕಾರ, ಮಹಾನೈವೇದ್ಯ, ಅನ್ನ ಸಂತರ್ಪಣೆ ಜರುಗಿತು.

    ಹನುಮನಿಗೆ ಮಾವಿನ ಹಣ್ಣಿನ ಅಲಂಕಾರ ಭಕ್ತರ ಗಮನ ಸೆಳೆಯಿತು.

    ದೇವಸ್ಥಾನ ಟ್ರಸ್ಟ್​ ಅಧ್ಯ ಅನಂತ ಓಂಕಾರ, ಯಲಗೂರೇಶ್ವರ ಅನ್ನದಾಸೋಹ ಸಮಿತಿಯ ಅಧ್ಯ ಶ್ಯಾಮ ಪಾತರದ, ಯಲಗೂರದಪ್ಪ ಪೂಜಾರ, ಸಂಜೀವ ಜಾರ, ಗುರುರಾಜ ಪರ್ವತಿಕರ, ಸಂತೋಷ ಪೂಜಾರ, ಬದರಿನಾರಾಯಣ ಚಿಮ್ಮಲಗಿ, ಭೀಮಪ್ಪ ಪೂಜಾರಿ, ಅನಘಾ ಓಂಕಾರ, ಪಂಕಜಾ ಹಿಪ್ಪರಗಿ, ವಾಣಿ ಒಡೆಯರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts