More

    ಯಥಾಸ್ಥಿತಿಯಲ್ಲಿ ಮಹಾಬಲೇಶ್ವರ ಮಂದಿರದ ನಿರ್ವಹಣೆ

    ಗೋಕರ್ಣ: ಸುಪ್ರೀಂ ಕೋರ್ಟ್ ಆದೇಶದಂತೆ ರಚಿಸಲಾದ ಮಹಾಬಲೇಶ್ವರ ಮಂದಿರದ ನೂತನ ಮೇಲ್ವಿಚಾರಣೆ ಸಮಿತಿಯ ಮೊದಲ ಸಭೆ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ನೇತೃತ್ವದಲ್ಲಿ ಬುಧವಾರ ನಡೆಯಿತು. ಸಭೆಯಲ್ಲಿ ಸಮಿತಿ ಸದಸ್ಯರುಗಳಾದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಲ್ಲಾ ಪೊಲೀಸ್ ವರಿಷ್ಠ ಶಿವಪ್ರಕಾಶ ದೇವರಾಜು, ಸ್ಥಳೀಯರಾದ ವೇ.ಪರಮೇಶ್ವರ ಮಾರ್ಕಾಂಡೆ, ವೇ.ಮಹಾಬಲ ಉಪಾಧ್ಯಾಯ, ದತ್ತಾತ್ರೇಯ ಹಿರೇಗಂಗೆ, ಮುರಳೀಧರ ಪ್ರಭು ಕುಮಟಾ ಮತ್ತು ಸಮಿತಿ ಕಾರ್ಯದರ್ಶಿ ವಿಭಾಗೀಯ ಅಧಿಕಾರಿ ಅಜಿತ ಎಂ. ಇತರರು ಪಾಲ್ಗೊಂಡರು.

    ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಸಭೆಯಲ್ಲಿ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಕೃಷ್ಣ ಅವರು, ಮಂದಿರದ ಸದ್ಯದ ನಿರ್ವಹಣೆ, ನೈಮಿತ್ತಿಕವಾಗಿ ನಡೆಯುವ ಪೂಜಾದಿಗಳ ವಿವರ ಪಡೆದುಕೊಂಡರು. ಇವುಗಳ ಬಗ್ಗೆ ಸಮಿತಿ ಕಾರ್ಯದರ್ಶಿ ಅಜಿತ ಎಂ. ವಿವರಣೆ ನೀಡಿದರು. ಸಮಿತಿಯ ಸ್ಥಳೀಯ ಸದಸ್ಯರು ಮಂದಿರದಲ್ಲಿ ನಡೆಯುತ್ತ ಬಂದ ನಿತ್ಯದ ಪೂಜಾದಿಗಳನ್ನು ಸಂಕ್ಷಿಪ್ತದಲ್ಲಿ ತಿಳಿಸಿದರು.

    ಸಭೆಯ ವಿವರವನ್ನು ಪತ್ರಿಕೆಗೆ ನೀಡಿದ ಸಮಿತಿ ಕಾರ್ಯದರ್ಶಿ ಅಜಿತ ಎಂ. ಸದ್ಯ ಜಾರಿಯಲ್ಲಿರುವ ಲಾಕ್​ಡೌನ್ ಹಿನ್ನೆಲೆಯಲ್ಲಿ ಮಂದಿರ ಭಕ್ತರಿಗೆ ಮುಕ್ತವಾಗಿಲ್ಲ. ಹೀಗಾಗಿ ಮಂದಿರಕ್ಕೆ ವಿಶೇಷ ಆದಾಯವಿಲ್ಲ. ಈಗಿರುವ ಹಣದಿಂದ ಸಿಬ್ಬಂದಿ ಸಂಬಳ ಮತ್ತು ಪೂಜಾ ನಿರ್ವಹಣೆ ವೆಚ್ಚ ಭರಿಸಲಾಗುತ್ತಿದೆ. ಇವುಗಳ ಎಲ್ಲ ವಿವರವನ್ನು ಸಮಿತಿ ಸಭೆಯಲ್ಲಿ ಸಲ್ಲಿಸಲಾಗಿದೆ. ಈಗ ಮಂದಿರದಲ್ಲಿ ನೈಮಿತ್ತಿಕ ಪೂಜೆಗಳನ್ನು ಮಾತ್ರ ಕೈಗೊಳ್ಳಲಾಗುತ್ತಿದೆ. ಲಾಕ್​ಡೌನ್ ತೆರವಾಗಿ ಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತವಾದ ನಂತರ ಉಳಿದ ವಿಷಯಗಳನ್ನು ರ್ಚಚಿಸಲಾಗುವುದು. ಅಲ್ಲಿಯವರೆಗೆ ಮಂದಿರದ ನಿರ್ವಹಣೆ ಈಗಿರುವಂತೆ ಮುಂದುವರಿಯಲಿದೆ ಎಂದು ಅಜಿತ ಎಂ. ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts