More

    ಮ್ಯೂಚುವಲ್​ ಫಂಡ್​ಗಳ ಹೂಡಿಕೆ ಹೆಚ್ಚಳ: ಇವು ಖರೀದಿಸಿದ ಪಿಎಸ್​ಯು ಷೇರುಗಳು ಯಾವವು ಗೊತ್ತೆ?

    ಮುಂಬೈ: ಕಳೆದೊಂದು ವಾರದಲ್ಲಿ ಷೇರು ಪೇಟೆಯಲ್ಲಿ ಸಾಕಷ್ಟು ಕುಸಿತವಾಗಿದೆ. ಇಂತಹ ಸಂದರ್ಭದಲ್ಲಿಯೇ ಮ್ಯೂಚುವಲ್ ಫಂಡ್‌ಗಳು ಸಾಕಷ್ಟು ಖರೀದಿ ಚಟುವಟಿಕೆಯಲ್ಲಿ ತೊಡಗುತ್ತವೆ.

    ಮ್ಯೂಚುವಲ್​ ಫಂಡ್​ಗಳು ಅತಿ ಹೆಚ್ಚು ಖರೀದಿ ಮಾಡಿದ ಟಾಪ್​ 10 ಪಿಎಸ್‌ಯು (ಸರ್ಕಾರಿ ಕಂಪನಿ) ಷೇರುಗಳ ಪಟ್ಟಿಯನ್ನು ಎಲಾರಾ ಕ್ಯಾಪಿಟಲ್‌ ನೀಡಿದೆ..

    1) NLC ಇಂಡಿಯಾ ಲಿ:

    ಇದರಲ್ಲಿ ಮ್ಯುಚೂವಲ್​ ಫಂಡ್​ಗಳ ಷೇರುಗಳ ಸಂಖ್ಯೆಯು ಮಾರ್ಚ್ 2024 ರಲ್ಲಿ 4.7 ಕೋಟಿ ಷೇರುಗಳಿಂದ ಸುಮಾರು 10 ಕೋಟಿ ಷೇರುಗಳಿಗೆ ದ್ವಿಗುಣಗೊಂಡಿದೆ, ಇದು ತಿಂಗಳಿನಿಂದ ತಿಂಗಳಿಗೆ 115% ಬೆಳವಣಿಗೆಯನ್ನು ತೋರಿಸುತ್ತದೆ.

    2) ಭಾರತೀಯ ಜೀವ ವಿಮಾ ನಿಗಮ:

    ಎಲ್​ಐಸಿ ಷೇರುಗಳ ಖರೀದಿಯನ್ನು ಮ್ಯೂಚುವಲ್ ಫಂಡ್​ಗಳು 7% ಪ್ರತಿ ತಿಂಗಳು ಹೆಚ್ಚಿಸಿವೆ. ಫೆಬ್ರವರಿಯಲ್ಲಿ 2.8 ಕೋಟಿ ಷೇರುಗಳನ್ನು ಹೊಂದಿದ್ದರೆ, ಮಾರ್ಚ್‌ನಲ್ಲಿ 3 ಕೋಟಿ ಷೇರುಗಳಿಗೆ ಏರಿದೆ. ಮ್ಯೂಚುವಲ್ ಫಂಡ್​ಗಳು ಹೊಂದಿರುವ ಎಲ್‌ಐಸಿ ಷೇರುಗಳ ಒಟ್ಟು ಮೌಲ್ಯ ಈಗ 2,731 ಕೋಟಿ ರೂ.

    3) ಗೇಲ್ (ಭಾರತ) ಲಿಮಿಟೆಡ್:

    ಮ್ಯೂಚುವಲ್ ಫಂಡ್​ಗಳು ಮಾರ್ಚ್ ತಿಂಗಳಲ್ಲಿ GAIL ನ 37.3 ಕೋಟಿ ಷೇರುಗಳನ್ನು ಖರೀದಿಸಿವೆ. ಇದು ಫೆಬ್ರವರಿ ತಿಂಗಳಿಗಿಂತ 4% ಹೆಚ್ಚಳವಾಗಿದೆ.

    4) REC ಲಿಮಿಟೆಡ್:

    ಮ್ಯೂಚುವಲ್ ಫಂಡ್​ಗಳು ಖರೀದಿಸಿದ ಈ ಷೇರುಗಳು 1.44 ಕೋಟಿಗಳಿಗೆ ಏರಿಕೆಯಾಗಿದೆ, ಫೆಬ್ರವರಿ 2024 ರಿಂದ 6% ರಷ್ಟು ಹೆಚ್ಚಳವಾಗಿದೆ.

    5) ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿ:

    ಮ್ಯೂಚುವಲ್ ಫಂಡ್​ಗಳು ಹೊಂದಿರು ಈ ಕಂಪನಿಯ ಒಟ್ಟು ಷೇರುಗಳ ಮೌಲ್ಯ 1,805 ಕೋಟಿ ರೂ. ಫೆಬ್ರವರಿಯಲ್ಲಿ 1.3 ಕೋಟಿ, ಮಾರ್ಚ್ ತಿಂಗಳಲ್ಲಿ 1.34 ಕೋಟಿ ಹೊಸ ಷೇರುಗಳನ್ನು ಖರೀದಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts