More

    ಮೌಲ್ಯ ಸಾರುವುದೇ ಪ್ರವಚನ – ಮರುಳಸಿದ್ದ ಸ್ವಾಮೀಜಿ

    ಅಥಣಿ: ಮುರುಂದ್ರ ಶಿವಯೋಗಿಗಳ ಆಧ್ಯಾತ್ಮಿಕ ಚಿಂತನೆ, ನುಡಿ, ಸಂದೇಶ ತಿಳಿಸುವ ಉದ್ದೇಶದಿಂದ ಮತ್ತು ಶರಣರ ಮೌಲ್ಯ ಜಗಕ್ಕೆ ಸಾರಬೇಕಿರುವುದೇ ಪ್ರವಚನ ಮೂಲ ಆಶಯ ಎಂದು ಅಥಣಿ ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಹೇಳಿದರು.

    ತಾಲೂಕಿನ ಕಟಗೇರಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಹಮ್ಮಿಕೊಂಡಿರುವ ಚರಿತಾಮೃತ ಪ್ರವಚನ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ನಾಡಿನ ಅಗ್ರಪಂಕ್ತಿ ಮಠಗಳಲ್ಲಿ ಅಥಣಿ ಶಿವಯೋಗಿ ಮಠ ಗುರುತಿಸಿಕೊಂಡಿದೆ ಎಂದರು.

    ಮಾಜಿ ಸೈನಿಕರ ಸಂದ ಅಧ್ಯಕ್ಷ ಗುರಪ್ಪ ಮಗದುಮ್ಮ ಮಾತನಾಡಿ, ಜ್ಞಾನ ದಾಸೋಹ ಎಲ್ಲಕ್ಕಿಂತ ಶ್ರೇಷ್ಠವಾದದ್ದು. ನಾವು ಮಾಡುವ ಕೆಲಸದ ಮೇಲೆ ನಮ್ಮ ಜನ್ಮ ರೂಪಗೊಳ್ಳುತ್ತದೆ ಎಂದರು.


    ಇಂಗಳಗಾಂವ ಗುರುದೇವರಮಠದ ಸಿದ್ಧಲಿಂಗ ಸ್ವಾಮೀಜಿ ಅವರು ಮುರುಂದ್ರ ಶಿವಯೋಗಿಗಳ ಚರಿತಾಮೃತ ಪ್ರವಚನ ನೀಡಿದರು.
    ಬಿಜೆಪಿ ಮುಖಂಡ ಅಶೋಕ ಮಗದುಮ್ಮ, ಶಿವಾನಂದ ಖೋತ, ಬಸಪ್ಪ ಮಗದುಮ್ಮ, ಗುರುಪಾದ ಸವದಿ, ಮಹಾದೇವ ಪೂಜಾರಿ, ಮಲ್ಲಪ್ಪ ಕಳ್ಳಿ, ಪಂಡಿತಗೌಡ ಪಾಟೀಲ, ಬಸಪ್ಪ ಗಣಿ, ಆಲಗೌಡ ಪಾಟೀಲ, ಗುರುಶಾಂತ ಕರಡಿಮಠ, ಲಕ್ಷ$್ಮಣ ಮರೆಗುದ್ದಿ, ಸುರೇಶ ಸವದಿ, ಮಹಾಂತೇಶ ಸಂಕೇಶ್ವರ, ಪಿ.ಎಲ್​.ಪೂಜಾರಿ, ಈಶ್ವರ ಸೊನ್ನದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts