More

    ಮೌಢ್ಯ ಹೋಗಲಾಡಿಸಲು ಶಿಕ್ಷಣ ಅಗತ್ಯ

    ಬಾಗಲಕೋಟೆ: ದೇಶದಲ್ಲಿ ಮೂಲಭೂತವಾದಿಗಳಿಗೆ ಶ್ರೀರಾಮ ಬೇಕಾಯಿತು. ಆದರೇ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಬೇಡವಾದರು ಎಂದು ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

    ನವನಗರದ ಕಲಾಭವನದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದಿಂದ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ವಾಲ್ಮೀಕಿ ಜನಜಾಗೃತಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.

    ಶಿಕ್ಷಣ, ಸಾಂಸ್ಕೃತಿ, ಸಾಮಾಜಿಕವಾಗಿ ಪ್ರಗತಿ ಸಾಧಿಸಲು ನಮ್ಮ ಸಮಾಜದ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಎಲ್ಲ ರಂಗದಲ್ಲಿ ನಮ್ಮ ಸಮಾಜದವರು ಅಪೂರ್ವ ಸಾಧನೆ ಮಾಡಬೇಕು ಎಂದರು.

    ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಹರಿಜನರನ್ನು ಹಾಗೂ ವಾಲ್ಮೀಕಿ ಸಮುದಾಯದವರನ್ನು ಭಯದಲ್ಲಿಡುವುದಕ್ಕಾಗಿ ಮೌಢ್ಯ ಬಿತ್ತಲಾಯಿತು. ದೇವರು, ದೆವ್ವಗಳ ಹೆಸರಿನಲ್ಲಿ ಭಯದ ವಾತಾವರಣ ಸೃಷ್ಟಿಸಲಾಯಿತು. ಮೌಢ್ಯ ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಇತಿಹಾಸ ಅರಿತು ಸಾಗದಿದ್ದರೇ ಭವಿಷ್ಯ ಕಷ್ಟವಾಗಲಿದೆ ಎಂದು ಹೇಳಿದರು.

    ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಮಾತನಾಡಿ, ಕೆಆರ್‌ಎಸ್ ನಿರ್ಮಾಣದ ವಿಚಾರದಲ್ಲಿ ವಿಶ್ವೇಶ್ವರಯ್ಯ ಅವರನ್ನು ಸ್ಮರಿಸುತ್ತೇವೆ ಆದರೆ ಅದಕ್ಕಾಗಿ ತ್ಯಾಗ ಮಾಡಿದ ಅಂದಿನ ರಾಜ ಮನೆತನ್ನವನ್ನು ಮರೆತಿದ್ದೇವೆ. ಇತಿಹಾಸವನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಕೆಲಸವಾಗಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಕೆಲಸವಾಗಬೇಕು. ಅಂಬೇಡ್ಕರ್ ಅವರು ಎಲ್ಲ ವರ್ಗಕ್ಕೂ ಸಮಾನವಾಗಿ ಮತದಾನದ ಹಕ್ಕು ನೀಡಿದ್ದಾರೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

    ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ಪಿ.ಎಚ್.ಪೂಜಾರ, ಜಿಪಂ ಸಿಇಒ ಶಶಿಧರ ಕುರೇರ, ಸಮಾಜದ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ರಕ್ಷಿತಾ ಈಟಿ, ಮುಖಂಡರಾದ ಪೀರಪ್ಪ ಮ್ಯಾಗೇರಿ, ಆರ್.ಜಿ.ಸನ್ನಿ, ಯಲ್ಲಪ್ಪ ಕ್ಯಾದಿಗೇರಿ, ಶಂಭುಗೌಡ ಪಾಟೀಲ, ಹಣಮಂತ ಡೋಣಿ, ಜಯರಾಜ ಹಾದಿಕರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts