More

    ಮೋದಿ ಸರ್ಕಾರದಿಂದ ಬಡತನ ನಿರ್ಮೂಲನೆ

    ಐನಾಪುರ: ಕಳೆದ 50 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಗರೀಬಿ ಹಟಾವೋ ಘೋಷಣೆ ಮಾಡಿತೇ ಹೊರತು ಬಡತನ ನಿರ್ಮೂಲನೆ ಮಾಡಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದಿಂದ ಬಡತನ ನಿರ್ಮೂಲನೆ ಆಗುತ್ತಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

    ಐನಾಪುರ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ಬಹತ್ ರೋಡ್ ಷೋ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲರು ಸಾವಿರಾರು ಕೋಟಿ ಅನುದಾನ ತಂದು ಸರ್ವಾಂಗೀಣ ಅಭಿವದ್ಧಿ ಮಾಡಿದ್ದಾರೆ. ಮೂಲಸೌಕರ್ಯಗಳ ಸಮಸ್ಯೆಗಳಿಗೆ ಆದ್ಯತೆ ಕೊಡುವುದರ ಜತೆಗೆ ನೀರಾವರಿಗೆ ಮಹತ್ವ ನೀಡಿದ್ದಾರೆ ಅವರಿಗೆ ಕ್ಷೇತ್ರದ ಜನರು ಆಶೀರ್ವದಿಸಬೇಕು ಎಂದರು. ಶಾಸಕ ಶ್ರೀಮಂತ ಪಾಟೀಲ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು 3ಸಾವಿರ ರೂ. ಕೋಟಿ ಅನುದಾನ ತಂದಿದ್ದೇನೆ. ಕ್ಷೇತ್ರದಲ್ಲಿ ರಸ್ತೆ, ಅಂಗನವಾಡಿ, ಶಾಲಾ ಕೋಣೆ, ಸಮುದಾಯ ಭವನ ಕಾಮಗಾರಿ ಕೈಗೊಂಡಿರುವೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಸ್ವಭಾವ ತಮ್ಮದು ಎಂದರು.

    ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಮತಕ್ಷೇತ್ರಕ್ಕೆ ಶ್ರೀಮಂತ ಪಾಟೀಲರಂತಹ ಶಾಸಕರು ದೊರಕಿರುವುದರಿಂದ ಅಭಿವದ್ಧಿ ಕಾರ್ಯಗಳಾಗುತ್ತಿವೆ. ಅವರ ಕೆಲಸಗಳೇ ಅವರಿಗೆ ಕೈಹಿಡಿಯಲಿವೆ ಎಂದರು. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ಶಾಸಕರು ಕ್ಷೇತ್ರದಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದು, ಕ್ಷೇತ್ರದ ಜನರ ಕನಸಾಗಿರುವ ಬಸವೇಶ್ವರ ಏತ ನೀರಾವರಿ ಯೋಜನೆ ಬೇಗ ಮುಗಿಸಿ ಮುಖ್ಯಮಂತ್ರಿಗಳಿಂದ ಬೇಗ ಉದ್ಘಾಟಿಸಲಾಗುವುದು ಎಂದರು.

    ವಿಪ ಮಾಜಿ ಸದಸ್ಯ ಅರುಣ ಶಹಾಪುರ , ಶ್ರೀನಿವಾಸ ಪಾಟೀಲ, ಜಿಲ್ಲಾಧ್ಯಕ್ಷ ರಾಜೇಶ ನೇರ್ಲಿ, ಮಂಡಲ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ನಿಂಗಪ್ಪ ಖೋಕಲೆ, ದಾದಾಗೌಡ ಪಾಟೀಲ, ರಾಜೇಂದ್ರ ಪೋತರಾದ, ದೀಪಕ ಪಾಟೀಲ, ಮಹಾದೇವ ಕೋರೆ, ಅಪ್ಪಾಸಾಬ ಅವತಾಡೆ, ನಾನಾಸಾಬ ಅವತಾಡೆ, ಆರ.ಎಂ .ಪಾಟೀಲ, ಭೂತಾಳಿ ತರತರೆ ಇತರರು ಇದ್ದರು. ಪಟ್ಟಣದ ಸಿದ್ದೇಶ್ವರ ದೇವಸ್ಥಾನದಿಂದ ಬಹತ್ ರೋಡ್ ಷೋ ಆರಂಭವಾಗಿ ಬಸವೇಶ್ವರ ಸರ್ಕಲ್ ನಡು ಪೇಟೆ, ಶಾಸೀ ಚೌಕ, ಗಾಂಧಿ ಚೌಕ, ಸರ್ದಾರ್ ವಲ್ಲಭಾಯ್ ಪಟೇಲ್ ಚೌಕನಲ್ಲಿ ಸಮಾರೋಪಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts