More

    ಮೋದಿ ಸರ್ಕಾರದಿಂದ ಎಲ್ಲರ ಹಿತರಕ್ಷಣೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ

    ಹುಬ್ಬಳ್ಳಿ: ಕೊಬ್ಬರಿ ಸೇರಿ ಎಲ್ಲ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ದೇಶದ 80 ಕೋಟಿ ಜನರಿಗೆ ತಿಂಗಳಿಗೆ ಕನಿಷ್ಠ 5 ಕೆಜಿ ಉಚಿತ ಆಹಾರ ವಿತರಣೆ ಹಾಗೂ ಒನ್ ನೇಶನ್ ಒನ್ ಪೆನ್ಶನ್ ಜಾರಿ ಮೂಲಕ ರೈತರು, ಬಡವರು ಮತ್ತು ಸೈನಿಕರ ಹಿತ ಕಾಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ಇಲ್ಲಿಯ ಬಿಡ್ನಾಳದ ಆರ್.ಕೆ. ಪಾಟೀಲ ಶಾಲೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಬೆಂಬಲ ಬೆಲೆ ನಿಲ್ಲಿಸುತ್ತಾರೆ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದರು. ಇದು ನಿಲ್ಲುವುದಿಲ್ಲ ಎಂಬುದನ್ನು ಪ್ರಧಾನಿ ಮತ್ತೆ ತೋರಿಸಿಕೊಟ್ಟಿದ್ದಾರೆ. ನಿವೃತ್ತ ಸೈನಿಕರಿಗೆ 19 ಸಾವಿರ ಕೋಟಿ ಅರಿಯರ್ಸ್ ಜತೆಗೆ ಪಿಂಚಣಿ ನೀಡಲಾಗುತ್ತಿದೆ. ಹೀಗೆ ಎಲ್ಲ ವರ್ಗದವರ ಕಲ್ಯಾಣಕ್ಕೆ ಒಂದೇ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಅಭಯ ನೀಡಿದೆ ಎಂದರು.

    ಅವಧಿ ಪೂರ್ವ ಚುನಾವಣೆ ಇಲ್ಲ

    ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ತಡೆಯುವ ಪ್ರಶ್ನೆಯೇ ಇಲ್ಲ. ಅವರು ಎಲ್ಲೆಲ್ಲಿ ಓಡಾಡುತ್ತಾರೆಯೋ ಅಲ್ಲಿ ಕಾಂಗ್ರೆಸ್ ಸೋತಿದೆ. ಹಾಗಾಗಿ ಅವರು ಎಲ್ಲ ಕಡೆ ಸಂಚರಿಸಲಿ ಎನ್ನುವುದು ನಮ್ಮ ಇಚ್ಛೆ. ಆದರೆ, ಕೋವಿಡ್ ನಿಯಮ ಪಾಲನೆ ಮಾಡಿ ಎಂಬುದಷ್ಟೇ ಕೋರಿಕೆ. ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯುವುದಿಲ್ಲ ಎಂದು ಜೋಶಿ ಹೇಳಿದರು.

    ಮಹದಾಯಿ ವಿಚಾರದಲ್ಲಿ ಫೇಲ್ ಆದವರು ಕಾಂಗ್ರೆಸ್ ಹಾಗೂ ಎಚ್.ಕೆ. ಪಾಟೀಲ್ ಅವರು. ಅವರೇ ನ್ಯಾಯಾಧೀಕರಣಕ್ಕೆ ಹೋದವರು. ಯೋಜನೆ ಜಾರಿ ಸಂಬಂಧ ಇದೀಗ ಎಲ್ಲ ಪ್ರಕ್ರಿಯೆ ಮುಗಿದಿದೆ. ಕೇಂದ್ರ ಸರ್ಕಾರ ಡಿಪಿಆರ್ ಕ್ಲೀಯರ್ ಮಾಡಲಿದೆ. ಇಂತಹ ಸಂದರ್ಭದಲ್ಲಿ ಕೆಲವರಿಗೆ ಕ್ರೆಡಿಟ್ ತೆಗೆದುಕೊಳ್ಳುವ ಆಸೆ. ಇದಕ್ಕಾಗಿ ಸಮಾವೇಶ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts