More

    ಮೋದಿ ಸರ್ಕಾರದ ಸಾಧನೆ ತಿಳಿಸಿ

    ಶಿರಸಿ: ಮನೆಗಳಿಗೆ ಭೇಟಿ ನೀಡುವಾಗ ಪರಸ್ಪರ ಅಂತರದ ಪಾಲನೆಯಾಗಬೇಕು. ಕಾರ್ಯಕರ್ತರು ಕಡಿಮೆ ಸಂಖ್ಯೆಯಲ್ಲಿ ತೆರಳಿ ಎಲ್ಲ ಮನೆಗಳನ್ನು ಸಂರ್ಪಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.

    ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಮನೆ-ಮನೆ ಸಂಪರ್ಕ ಅಭಿಯಾನದ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

    ಮೋದಿ ಸರ್ಕಾರದ ಸಾಧನೆಗಳನ್ನು ತಿಳಿಸುವ ಕರಪತ್ರ, ಪ್ರಧಾನಿಯವರು ಜನತೆಗೆ ಬರೆದಿರುವ ಪತ್ರದ ಪ್ರತಿಗಳನ್ನು ಕಾರ್ಯಕರ್ತರು ಮನೆ-ಮನೆಗೆ ತಲುಪಿಸಬೇಕು ಎಂದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ ಮಾತನಾಡಿ, ರಾಜ್ಯ ಹಾಗೂ ವಿಭಾಗ ಮಟ್ಟದಲ್ಲಿ ನಡೆಯುವ ಫಲಾನುಭವಿಗಳ ಪರೋಕ್ಷ ಸಮಾವೇಶಕ್ಕೆ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಜಿಲ್ಲಾ ಘಟಕದ ಉಪಾಧ್ಯಕ್ಷೆ ರೇಖಾ ಅಂಡಗಿ, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಕೋಶಾಧ್ಯಕ್ಷ ಶ್ರೀಕಾಂತ ನಾಯ್ಕ, ಮಂಡಲ ಅಧ್ಯಕ್ಷ ರಾಜೇಶ್ ಶೆಟ್ಟಿ, ಗಣಪತಿ ನಾಯ್ಕ, ಶಿರಸಿ ನಗರ ಮಂಡಲದ ಪದಾಧಿಕಾರಿಗಳು ಇದ್ದರು. ನಂತರ ನಾಡಿಗ ಗಲ್ಲಿಯ ಕೆಲ ಮನೆಗಳಿಗೆ, ಅಂಗಡಿಗಳಿಗೆ ತೆರಳಿ ಕರಪತ್ರ ನೀಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

    ಬನವಾಸಿಯಲ್ಲಿ ಚಾಲನೆ: ತಾಲೂಕಿನ ಬನವಾಸಿಯ ಬಿಜೆಪಿ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ ಪಟ್ಟಿಯನ್ನು ಮತದಾರರ ಮನೆಮನೆಗೆ ತಲುಪಿಸುವ ಕೆಲಸಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಮಹಾಶಕ್ತಿ ಕೇಂದ್ರದ ಉಸ್ತುವಾರಿ ದ್ಯಾಮಣ್ಣ ದೊಡ್ಮನಿ ಚಾಲನೆ ನೀಡಿದರು. ಕೇಂದ್ರದ ಅಧ್ಯಕ್ಷ ಶಿವಕುಮಾರ ಗೌಡ, ಮಂಡಲದ ಉಪಾಧ್ಯಕ್ಷ ಅರವಿಂದ ಶೆಟ್ಟಿ, ಗಣಪತಿ ನಾಯಕ, ಡಿ.ಜಿ. ನಾಡಿಗೇರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ, ಪ್ರಕಾಶ ಬಂಗ್ಲೆ, ಸಾಯಿರಾಮ ಕಾನಳ್ಳಿ, ಚಂದ್ರ ಗೌಡ, ದತ್ತು ಭಟ್ಟ, ರಾಜುಗೌಡ ಗುಡ್ನಾಪುರ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts