More

    ಮೊಳಕೆ ಬಾರದ ಬೀಜ, ಚಿಂತೆಯಲ್ಲಿ ರೈತರು

    ಬಸವಕಲ್ಯಾಣ: ತಾಲೂಕಿನಲ್ಲಿ ಮುಂಗಾರು ಮಳೆ ಉತ್ತಮವಾಗಿ ಬಿದ್ದು ರೈತರಲ್ಲಿ ಭರವಸೆ ಮೂಡಿಸಿತ್ತು. ಆದರೆ ಕೆಲವೆಡೆ ಬಿತ್ತಿದ ಸೋಯಾಬೀನ್ ಬೀಜ ವಾರ ಕಳೆದರೂ ಸಮರ್ಪಕ ಮೊಳಕೆ ಬಾರದಿರುವುದು ರೈತರನ್ನು ಚಿಂತೇಗೀಡು ಮಾಡಿದೆ.
    ಧನ್ನೂರಾ, ಹುಲಸೂರ ತಾಲೂಕಿನ ಗೋಟರ್ಾ(ಬಿ), ಬೇಲೂರ ಗ್ರಾಮದ ವ್ಯಾಪ್ತಿಯ ಕೆಲ ಹೊಲಗಳಲ್ಲಿ ಬಿತ್ತಿದ ಬೀಜ ಸಮರ್ಪಕ ಮೊಳಕೆ ಇಲ್ಲದೇ ರೈತ ಸಮಸ್ಯೆಗೆ ಸಿಲುಕುವಂತಾಗಿದೆ. ತಾಲೂಕಿನ ಧನ್ನೂರ ವ್ಯಾಪ್ತಿಯಲ್ಲಿಯೂ ಕೆಲ ಹೊಲಗಳಲ್ಲಿ ಬೀಜ ಮೊಳಕೆ ಬಂದಿಲ್ಲ ಎನ್ನುವ ದೂರು ವಾರದ ಹಿಂದೆ ಕೇಳಿ ಬಂದಿತ್ತು.
    ಹುಲಸೂರ ತಾಲೂಕಿನ ಗೋರ್ಟಾ(ಬಿ)ಗ್ರಾಮದ ವ್ಯಾಪ್ತಿಯಲ್ಲಿಯ ಓಂಕಾರ ಕಣಜೆ ಎನ್ನುವರ 4.27ಎಕರೆ ಪ್ರದೇಶದಲ್ಲಿ ಸೋಯಾಬೀನ್ ಬೀಜ ಬಿತ್ತಿದ್ದು, ಉತ್ತಮ ಮಳೆಯಾಗಿದೆ. ಇನ್ನೇನೂ ಮೊಳಕೆ ಬರಲಿವೆ ಎನ್ನುವ ನಿರೀಕ್ಷೆಯಲ್ಲಿದ್ದ ಅವರಿಗೆ ನಿರಾಶೆ ಕಾದಿದೆ.
    ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ ಮೂರು ಬ್ಯಾಗ್ ಸೋಯಾಬೀನ್ ಬೀಜ ಭಾಲ್ಕಿಯಿಂದ ಖರೀದಿಸಿದ್ದು, ಮೊಳಕೆ ಒಡೆಯದ ಹಿನ್ನೆಲೆಯಲ್ಲಿ ಕಳಪೆ ಬೀಜ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಭೂಮಿಯಲ್ಲಿ ತೇವಾಂಶ ಇರುವದನ್ನು ಗಮಮಿಸಿ ಕಳೆದ ಜೂನ್ 17ರಂದು ಬಿತ್ತಿದ್ದು, ಇನ್ನು ಬೀಜ ಮೊಳಕೆ ಒಡೆದಿಲ್ಲ ಎಂದು ಗಮನಕ್ಕೆ ತಂದಿದ್ದರು. ಹೊಲಕ್ಕೆ ಬಂದು ಪರಿಶೀಲನೆ ನಡೆಸಬೇಕು. ಮತ್ತೆ ಬಿತ್ತನೆಗೆ ಹೊಸ ನೀಡಬೇಕು. ಜತೆಗೆ ಬಿತ್ತನೆ ಮಾಡಿದ ಬೀಜ ಮೊಳಕೆ ಒಡೆಯದ ಸಂಬಂಧ ಪರಿಹಾರ ನೀಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
    ವಿಜ್ಞಾನಿಗಳ ತಂಡ ಭೇಟಿ: ಕಲಬುರಗಿ ಕೃಷಿ ಸಂಶೋಧನಾ ಮತ್ತು ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಮಲ್ಲಿಕಾರ್ಜುನ ಕೆಂಗನಾಳ, ಡಾ.ಡಿಎಚ್.ಪಾಟೀಲ್, ಡಾ.ಲೋಕೇಶ, ಡಾ.ಶೀಲಾ ಅವರನ್ನೊಳಗೊಂಡ ತಂಡದಿಂದ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಭೇಟಿ ನೀಡಿದ ಹೊಲಗಳಲ್ಲಿ ಸಮರ್ಪಕ ಬೀಜ ಬರದಿರುವದನ್ನು ಗಮನಿಸಿದ್ದಾರೆ. ಈ ಹೊಲಗಳಲ್ಲಿ ಬಿತ್ತಿದ ಭೂಮಿಯಲ್ಲಿಯ ಬೀಜ ಸಂಗ್ರಹಿಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ, ಬಸವಕಲ್ಯಾಣ ಕೃಷಿ ಅಧಿಕಾರಿ ಕೈಲಾಸ, ಹುಲಸೂರ ಆರ್​ಎಸ್​ಕೆ ಕೃಷಿ ಅಧಿಕಾರಿ ಮನಿಷಾ, ಸಹಾಯಕ ಕೃಷಿ ಅಧಿಕಾರಿ ಆಕಾಶ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts