More

    ಮೈಸೂರು ಜಿಲ್ಲೆಗೆ 272 ಕೋಟಿ ರೂ. ಬಿಡುಗಡೆ : ಸಿ.ಸಿ.ಪಾಟೀಲ್

    ಮೈಸೂರು: ರಸ್ತೆ ಅಭಿವೃದ್ಧಿ, ರಸ್ತೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಮೈಸೂರು ಜಿಲ್ಲೆಗೆ 272 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 16 ಸಾವಿರ ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಲಿ ಬಜೆಟ್‌ನಲ್ಲಿ ಪಿಡಬ್ಲುೃಡಿಗೆ ನೀಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ ಅಂಗವಾಗಿ ನಗರದ ವಿದ್ಯಾರಣ್ಯಪುರಂನಲ್ಲಿ ಶನಿವಾರ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಆಯೋಜಿಸಿದ್ದ ಮೋದಿ ಯುಗ ಉತ್ಸವದಲ್ಲಿ ಮಾತನಾಡಿದರು.

    ಕೇಂದ್ರ ಸರ್ಕಾರದ ವಸತಿ ಯೋಜನೆಗಳಡಿ 6 ಸಾವಿರ ಮನೆಗಳು ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿವೆ. ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದುವುದು ಹೆಮ್ಮೆಯ ಹಾಗೂ ಗೌರವದ ಸಂಕೇತ. ಈ ನಿಟ್ಟಿನಲ್ಲಿ ವಸತಿರಹಿತರಿಗೆ ಸೂರು ಸೌಲಭ್ಯ ಕಲ್ಪಿಸುವ ಕೆಲಸ ಕೆ.ಆರ್. ಕ್ಷೇತ್ರದಲ್ಲಿ ನಡೆದಿದೆ. ಈ ರೀತಿ ಸರ್ಕಾರಿ ಸೌಲಭ್ಯವನ್ನು ಅರ್ಹರಿಗೆ ಪ್ರತಿಯೊಬ್ಬ ಜನಪ್ರತಿನಿಧಿಯೂ ತಲುಪಿಸಿದರೆ ನಾಡು ನಂದನವನ ಆಗಲಿದೆ ಎಂದರು.

    ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಸೇರಿದಂತೆ ಅನೇಕರು ಟೀಕೆ ಮಾಡುತ್ತಾರೆ. ಇದು ಸೂಟ್ ಬೂಟಿನ ಸರ್ಕಾರ ಎಂದು ಲೇವಡಿ ಮಾಡುತ್ತಾರೆ. ಇದೀಗ ಅದೇ ಸರ್ಕಾರ 6 ಸಾವಿರ ಮನೆಗಳನ್ನು ಮಂಜೂರು ಮಾಡಿದೆ. ಆದರೆ, ನೀವು ಏನು ಮಾಡಿದ್ದೀರಿ? ಅಧಿಕಾರದಲ್ಲಿದ್ದಾಗ ಕೆ.ಆರ್.ಕ್ಷೇತ್ರಕ್ಕೆ ಏನು ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದರು.
    ಮೋದಿ ವಿರುದ್ಧ ಟೀಕೆ ಮಾಡುವವರು ತಮ್ಮ ಆತ್ಮವನ್ನು ಮುಟ್ಟಿಕೊಂಡು ನಿಜ ಹೇಳಲಿ. ಮೋದಿ ಅವರು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಸದೃಢ ಭಾರತ, ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts