More

    ಮೈಮರೆತು ಕೂರದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ಕೆಲಸ ಮಾಡಿ


    ಚಿತ್ರದುರ್ಗ: ಗಣಿತ ವಿಷಯದಲ್ಲಿ ನಿಖರತೆ ಹೆಚ್ಚು,ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ವಿದ್ಯಾರ್ಥಿಗಳು ಉತ್ತರಿಸ ಬೇಕೆಂದು ಜಿಲ್ಲಾ ಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು. ಶಿಕ್ಷಣ ಇಲಾಖೆ ನಗರದ ತರಾಸು ರಂಗಮಂದಿರದಲ್ಲಿ ಬುಧವಾರ,ಪೈಥಾಗೊರಸ್ ಪ್ರಮೇ ಯದ ಮಾದರಿ ಅನಾವರಣದ ಮೂಲಕ ಪ್ರೌಢಶಾಲಾ ಗಣಿತ ಶಿಕ್ಷಕರ ಜಿಲ್ಲಾಮಟ್ಟದ ಕಾರ‌್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಗಣಿತ ವಿಷಯದಲ್ಲಿ ಜಿಲ್ಲೆಯ ಮಕ್ಕಳು ಉತ್ತಮ ಸಾಧನೆ ತೋರಿಸಿದ್ದಾರೆ. ಇದರ ಫಲವಾಗಿ ಜಿಲ್ಲೆಗೆ, ಗಣಿತದ ವಿಷಯದಲ್ಲಿ ರಾಜ್ಯಕ್ಕೆ 2ನೇ ಹಾಗೂ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಲಭಿಸಿದೆ. ಇದಕ್ಕೆ ಶ್ರಮಿಸಿದ ಎಲ್ಲ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸು ವುದಾಗಿ ಹೇಳಿದರು.

    ಗುರಿ ತಲುಪಲು ಕುದುರೆಯಂತೆ ಓಡಿದರೆ ಸಾಲದು,ಅದಕ್ಕಿಂತ ವೇಗವಾಗಿ ಓಡುವುದನ್ನು ರೂಢಿಸಿಕೊಂಡರೆ ಸಾಧನೆ ಸಾಧ್ಯ. ಗಣಿತ ಕಬ್ಬಿಣದ ಕಡಲೆಯಲ್ಲ.ಏಕಾಗ್ರತೆಯಿಂದ ಕಲಿಯ ಬೇಕು. ಉತ್ತಮ ಫಲಿತಾಂಶಕ್ಕೆ ಶಿಕ್ಷಕರ ಪರಿಶ್ರಮವೂ ಮುಖ್ಯ.ಈ ಬಾರಿ ಗಣಿತದಲ್ಲೂ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಲು ಪ್ರಯತ್ನಿಸಬೇಕು.
    ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಾವು ನಂ.ಒನ್ ಸ್ಥಾನದಲ್ಲಿದ್ದೇವೆ ಎಂದು ಮೈಮರೆಯದೆ,ಮುಂದಿನ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಸಾಧನೆಗೆ ಶಿಕ್ಷಕರು,ಅಧಿಕಾರಿಗಳು ಜಾಗೃತರಾಗಿ ಕಾರ‌್ಯ ನಿರ್ವಹಿಸಬೇಕು. ದೇಶದಲ್ಲಿ ಸಾಂಪ್ರದಾಯಿಕವಾಗಿ ಗಣಿತದ ಬೋಧನಾ ಕ್ರಮವಿದೆ. ಕ್ಯಾಲ್ಯುಕಲೇಟರ್ ಇಲ್ಲದೆ ಗಣಿತದ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲ್ಯನಮ್ಮ ವಿದ್ಯಾರ್ಥಿಗಳಲ್ಲಿದೆ. ತಂತ್ರಜ್ಞಾನ ಬಳಸಿಕೊಂಡು ಶಿಕ್ಷಕರು ಗಣಿತವನ್ನು ಪರಿಣಾಕಾರಿಯಾಗಿ ಬೋಧಿಸಬೇಕೆಂದರು.

    ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ ಮಾತನಾಡಿ,ಮಕ್ಕಳಲ್ಲಿರುವ ಕಲಿಕಾ ನೂನ್ಯತೆಗಳನ್ನು ಗುರುತಿಸಿ ಸರಿಪಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿ ದೆ ಎಂದರು. ಗಣಿತ ವಿಷಯದ ಪರಿವೀಕ್ಷಕಿ ಸವಿತಾ ಪ್ರಾಸ್ತಾವಿಕವಾಗಿ ಮಾತನಾಡಿ,ಉತ್ತಮ ಫಲಿತಾಂಶಕ್ಕೆ ಇಂಥ ಕಾರ‌್ಯಾಗಾರಗಳು ಸಹಕಾ ರಿಯಾಗಿವೆ ಎಂದರು.

    ಸಂಭ್ರಮ,ಸುಪ್ರಭ ಹಾಗೂ ವಿನೋದ ಗಣಿತ ಕೈಪಿಡಿಗಳನ್ನು ಬಿಡುಗಡೆಗೊಳಿಸಲಾಯಿತು. ಮೈಸೂರಿನ ಗಣಿತ ಶಿಕ್ಷ ಕರಾದ ಹರ್ಷ ಹಾಗೂ ಸತೀಶ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.

    ಹಿರಿಯೂರು ಬಿಇಒ ನಾಗಭೂಷಣ್,ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ,ತಿಪ್ಪೇಸ್ವಾಮಿ,ವಿಷಯ ಪರಿವೀಕ್ಷಕರಾದ ಗೋವಿಂದ ಪ್ಪ,ಚಂದ್ರಣ್ಣ,ಬಸವರಾಜ್‌ಓಲೇಕಾರ,ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ,ತಾಲೂಕು ಸಂಘದ ಅಧ್ಯಕ್ಷ ಮೃತ್ಯುಂಜಯ ಮತ್ತಿ ತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts