More

    ಮೂಲಸೌಲಭ್ಯ ಕಲ್ಪಿಸಲು ಬ.ಕುಡಚಿ ನಿವಾಸಿಗಳ ಒತ್ತಾಯ

    ಬೆಳಗಾವಿ: ತಾಲೂಕಿನ ಬಸವನ ಕುಡಚಿ ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ಥಳೀಯ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

    ಬಸವನ ಕುಡಚಿ ಗ್ರಾಮದ ವಾರ್ಡ್ ನಂ.48ರಲ್ಲಿ ಚರಂಡಿ, ರಸ್ತೆಗಳ ಸೌಕರ್ಯ ಇಲ್ಲ. ಕೊಳಚೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಸ್ಥಳೀಯರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಬೀದಿ ದೀಪಗಳು ಉರಿಯದ ಕಾರಣ ರಾತ್ರಿ ಸಮಯದಲ್ಲಿ ಓಡಾಡುವುದು ಕಷ್ಟವಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

    ಸಮಯಕ್ಕೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ವಾರಕ್ಕೊಮ್ಮೆಯೂ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ಇದರಿಂದ ಜನರು ನೀರಿಗಾಗಿ ಅಲೆದಾಡುತ್ತಿದ್ದಾರೆ. ಮಳೆಗಾಲ ಆರಂಭವಾದರೂ ರಸ್ತೆಗಳ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ. ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ರಸ್ತೆಯ ಮೇಲೆ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿ ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ಮನವಿ ಮೂಲಕ ಸ್ಥಳೀಯರು ಆಗ್ರಹಿಸಿದರು. ವಿಜಯ ಕದಂ, ಮಹಾವೀರ ಪಾಟೀಲ, ಮಾಣಿಕ್ಯ ಇಟಗಿ, ತವನೆಪ್ಪ ಪಾಟೀಲ, ತಮ್ಮಣ್ಣ ಪಾಟೀಲ, ಭೂಪಾಲ ದೇಸಾಯಿ, ಕಲ್ಲಪ್ಪ ಮುಡಗಿ, ಸುನಂದ ಮುನವಳ್ಳಿ, ಶಾಮಲಾ ಪೂಜಾರಿ ಇತರರಿದ್ದರು.

    ಬಸವನ ಕುಡಚಿ ಗ್ರಾಮಕ್ಕೆ ಅಗತ್ಯ ಸೌಲಭ್ಯ

    ಕಲ್ಪಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಗುರುವಾರ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ಅಧಿಕಾರಿಗೆ ಮನವಿ ಸಲ್ಲಿಸಿದರು. ವಿಜಯ ಕದಂ, ಮಹಾವೀರ ಪಾಟೀಲ, ಮಾಣಿಕ್ಯ ಇಟಗಿ, ತವನೆಪ್ಪ ಪಾಟೀಲ, ತಮ್ಮಣ್ಣ ಪಾಟೀಲ, ಭೂಪಾಲ ದೇಸಾಯಿ, ಕಲ್ಲಪ್ಪ ಮುಡಗಿ, ಸುನಂದ ಮುನವಳ್ಳಿ, ಶಾಮಲಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts