More

    ಮುಳ್ಳು-ಕಂಟಿಗಳಲ್ಲೇ ನಿತ್ಯ ಸಂಚಾರ!

    ಮುಳಗುಂದ: ಪಟ್ಟಣದ ಬಯಲು ಬಸವೇಶ್ವರನಗರದಲ್ಲಿ ಮನೆಗಳು ನಿರ್ವಣವಾಗಿ ಒಂದೂವರೆ ದಶಕ ಕಳೆದರೂ ಈವರೆಗೂ ಮೂಲಸೌಲಭ್ಯ ಮರೀಚಿಕೆಯಾಗಿದೆ. ನಗರದ ಬಹುತೇಕ ರಸ್ತೆಗಳು ಈವರೆಗೂ ಡಾಂಬರ್ ಕಂಡಿಲ್ಲ.

    ಈ ಪ್ರದೇಶದಲ್ಲಿ 380ಕ್ಕೂ ಹೆಚ್ಚು ಮನೆಗಳಿದ್ದು, ಮನೆಗಳ ಸುತ್ತಮುತ್ತ ಹುಲ್ಲು, ಮುಳ್ಳು-ಕಂಟಿಗಳು ಬೆಳೆದಿವೆ. ಇಲ್ಲಿ ರಸ್ತೆ ಯಾವುದು ಎಂಬುದೇ ಗೊತ್ತಾಗುವುದಿಲ್ಲ. ವಿಷಜಂತುಗಳ ಹಾವಳಿ ಹೆಚ್ಚಾಗಿದ್ದರಿಂದ ಜನರು ಸಂಚರಿಸಲು ಭಯ ಪಡುವಂತಹ ಸ್ಥಿತಿ ನಿರ್ವಣವಾಗಿದೆ. ರಸ್ತೆಗಳ ಅಕ್ಕಪಕ್ಕದಲ್ಲಿ ಚರಂಡಿಗಳಿಲ್ಲದೆ, ಎಲ್ಲ ಮನೆಗಳ ಶೌಚಗೃಹದ ನೀರು ರಸ್ತೆಯ ಮೇಲೆ ಹರಿಯುತ್ತವೆ.

    ಈ ಕುರಿತು ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

    ಅಧಿಕಾರಿಗಳು ಇಲ್ಲಿರುವ ಅವ್ಯವಸ್ಥೆಯತ್ತ ಸ್ವಲ್ಪ ಗಮನ ಹರಿಸಬೇಕು. ರಸ್ತೆಗಳಲ್ಲಿ ಹುಲ್ಲು, ಮುಳ್ಳು-ಕಂಟಿ ಬೆಳೆದು ಹಾವು, ಚೇಳುಗಳ ಆಗರವಾಗಿವೆ. ಈ ರಸ್ತೆಗಳಲ್ಲಿ ಸಂಚರಿಸುವುದಾದರೂ ಹೇಗೆ?

    | ಮೈಲಾರಪ್ಪ ಭಂಗಿ ಬಯಲು ಬಸವೇಶ್ವರ ನಿವಾಸಿ

    ಸದ್ಯ ಜೆಸಿಬಿ ರಿಪೇರಿ ಇದ್ದ ಕಾರಣ ರಸ್ತೆ ದುರಸ್ತಿ ಮಾಡಿಸಿಲ್ಲ. ಜೆಸಿಬಿ ಬಂದ ತಕ್ಷಣ ರಸ್ತೆಯಲ್ಲಿ ಬೆಳೆದಿರುವ ಹುಲ್ಲು ಹಾಗೂ ಕಂಟಿಗಳನ್ನು ತೆಗೆಯಿಸಿ ದುರಸ್ತಿ ಮಾಡಿಸಲಾಗುವುದು.

    | ಎಂ.ಎಸ್. ಬೆಂತೂರ, ಪಪಂ ಮುಖ್ಯಾಧಿಕಾರಿ, ಮುಳಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts