More

    ಮುದುಡಿತು ಹೂವು ಕೃಷಿಕರ ಬದುಕು…

    ಶಿವಪ್ರಭು ಈಸರಗೊಂಡ ಉಪ್ಪಿನಬೆಟಗೇರಿ

    ಯುಗಾದಿ, ಮದವೆಯಂತಹ ಶುಭ ಕಾರ್ಯಗಳು ನಡೆದಿದ್ದರೆ ರೈತರ ಬದಕು

    ತುಸು ಚೇತರಿಕೆ ಕಾಣತ್ತಿತ್ತು. ಆದರೆ, ಕರೊನಾ ಎಂಬ ಹೆಮ್ಮಾರಿಯಿಂದಾಗಿ ರೈತರು ಬೆಳೆದ ಸೇವಂತಿಗೆ, ಗಲಾಟೆ ಹೂವುಗಳನ್ನು ಕೊಳ್ಳುವವರಿಲ್ಲದೇ ಹೊಲ ದಲ್ಲೇ ಕೊಳೆಯುತ್ತಿರವುದರಿಂದ ಅವರ ಬದಕು ಮೂರಾಬಟ್ಟೆಯಂತಾಗಿದೆ.

    ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದಲ್ಲಿ ಸೇವಂತಿಗೆ, ಗಲಾಟೆ ಸೇರಿ ಸುಮಾರು ಏಳೆಂಟು ತರಹದ ಬೇರೆ, ಬೇರೆ ಹೂವಿನ ಕೃಷಿ ಮಾಡುವ ರೈತರಿದ್ದಾರೆ. ಈ ಒಂದೇ ಗ್ರಾಮದಲ್ಲಿ ಸುಮಾರು 300-400 ಎಕರೆ ಪ್ರದೇಶದಲ್ಲಿ ಈ ಹೂವುಗಳನ್ನು ಬೆಳೆಯಲಾಗಿದೆ. ಆದರೆ, ಮಾರುಕಟ್ಟೆಯೇ ಬಂದ್ ಆಗಿರುವ ಹಿನ್ನೆಲೆಯಲ್ಲಿ ತಾವು ಬೆಳೆದ ಹೂವುಗಳನ್ನು ಕಟಾವು ಮಾಡಿ ಹೊಲದಲ್ಲೇ ಚೆಲ್ಲುವ ಪರಿಸ್ಥಿತಿ ಬಂದಿದೆ. ಕುರುಬಗಟ್ಟಿ ಗ್ರಾಮದ ರೈತ ವಿರೂಪಾಕ್ಷಪ್ಪ ಗಾಣಿಗೇರ ಸೇರಿ ಅನೇಕ ರೈತರು ತಾವು ಬೆಳೆದ ಸೇವಂತಿಗೆ ಹೂವುಗಳನ್ನು ಕಟಾವು ಮಾಡಿ ಮಾರಾಟ ಮಾಡಲಾಗದೇ ತಮ್ಮ ಹೊಲದಲ್ಲೇ ಚೆಲ್ಲಿದ್ದಾರೆ. ಬಿತ್ತನೆ, ಗೊಬ್ಬರ, ಆಳು, ಔಷಧ… ಹೀಗೆ ಸಾಕಷ್ಟು ಪ್ರಮಾಣದಲ್ಲಿ ಖರ್ಚು ಮಾಡಿ ಬೆಳೆದ ಹೂವುಗಳನ್ನು ಖರೀದಿಸುವವರು ಇಲ್ಲದಂತಾಗಿದೆ. ಪ್ರತಿ ಕೆಜಿಗೆ 250-280 ರೂಪಾಯಿವರೆಗೆ ಹೂವುಗಳು ಮಾರಾಟವಾಗುತ್ತಿದ್ದವು. ಆದರೆ, ಈಗ ಹೂವುಗಳನ್ನು ಕೊಳ್ಳುವವರು ಇಲ್ಲದ ಪರಿಣಾಮ 3-4 ಲಕ್ಷ ರೂಪಾಯಿ ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ರೈತರು.

    ಇರುವ ಅಲ್ಪ ಹೊಲದಲ್ಲಿ ವಿವಿಧ ಮಾದರಿಯ ಹೂವಿನ ಕೃಷಿ ಮಾಡಿ ಜೀವನ ನಡೆಸುತ್ತಿದ್ದೇವು. ಆದರೆ, ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಎಲ್ಲವೂ ಬಂದ್ ಆಗಿ ಹೂವುಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಗುತ್ತಿಲ್ಲ. ಹೂವಿನ ಕೃಷಿಯಿಂದಾಗಿ ನಾವು ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಯುಗಾದಿ ಹಬ್ಬ ಸೇರಿ ಮದುವೆ, ಮುಂಜಿ ಹಾಗೂ ಜಾತ್ರೆ ವೇಳೆ ಅಧಿಕವಾಗಿ ಹೂವು ಮಾರಾಟವಾಗುತ್ತಿತ್ತು. ಆದರೆ, ಕರೊನಾ ಸೋಂಕಿನಿಂದಾಗಿ ಖರ್ಚು ಮಾಡಿದ ಹಣವೂ ಹಿಂದಿರುಗದಂತಾಗಿದೆ. | ಮಾರುತಿ ಶಿರೂರ ರೈತ

    ಕುರುಬಗಟ್ಟಿ ಗ್ರಾಮದಲ್ಲಿ ಸಾಕಷ್ಟು ರೈತರು ಹೂವು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದರು. ಆದರೆ, ಕರೊನಾ ಸೋಂಕಿನಿಂದಾಗಿ ಶುಭ ಸಮಾರಂಭಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಹೀಗಾಗಿ, ಹೂವಿನ ಕೃಷಿ ಮಾಡಿಕೊಂಡು ಬಂದಿದ್ದ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಕೂಡಲೆ ಕೃಷಿ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಅವರಿಗೆ ಪರಿಹಾರ ನೀಡಬೇಕು. | ರುದ್ರಪ್ಪ ಅರಿವಾಳದ ಕುರುಬಗಟ್ಟಿ ಗ್ರಾಮಸ್ಥ

    ಹೂವು, ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ರೈತರು ತಾವು ಬೆಳೆದ ಹೂವುಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಅವಕಾಶವಿದೆ. ಆದರೆ, ಕೃಷಿ ಇಲಾಖೆಯಿಂದ ಅದಕ್ಕೆ ಪರಿಹಾರ ನೀಡುವ ಬಗ್ಗೆ ಯಾವುದೇ ಆದೇಶವಿಲ್ಲ. | ರಾಮಚಂದ್ರ ಮಡಿವಾಳ ತೋಟಗಾರಿಕೆ ಉಪ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts