More

    ಮುಂದುವರಿದ ದೊಡ್ಡಕುಂಟೆ ಸ್ವಚ್ಛತಾ ಕಾರ್ಯ

    ಶ್ರೀನಿವಾಸಪುರ: ಯಲ್ದೂರು ಗ್ರಾಮದ ದೊಡ್ಡಕುಂಟೆ ಸ್ವಚ್ಚತಾ ಕಾರ್ಯ ಎರಡನೇ ದಿನವೂ ಮುಂದುವರಿದಿದ್ದು ಸುಮಾರು 800 ವರ್ಷದ ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ದೊಡ್ಡಕುಂಟೆ ಸ್ವಚ್ಛತಾ ಕಾರ್ಯದಲ್ಲಿ ಸಂಸದ ಎಸ್. ಮುನಿಸ್ವಾಮಿ ತೊಡಗಿದ್ದಾರೆ. ಸುಮಾರು 3 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದ ದೊಡ್ಡಕುಂಟೆ ಒತ್ತುವರಿದಾರರ ಆಕ್ರಮಣದಿಂದ ಈಗ 1 ಎಕರೆಗೆ ಸೀಮಿತವಾಗಿದ್ದು, ಕುಂಟೆಯ ಸುತ್ತಮುತ್ತಲಿದ್ದ ಜಾಗವನ್ನು ಗ್ರಾಮಸ್ಥರು ಆಕ್ರಮಿಸಿಕೊಂಡು ಅಂಗಡಿ ಮತ್ತು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ.

    ಇರುವ 1 ಎಕರೆ ಕುಂಟೆ ಸ್ವಚ್ಛಗೊಳಿಸಿ ನೀರಿನಲ್ಲಿದ್ದ ತ್ಯಾಜ್ಯವನ್ನು ಟ್ರ್ಯಾಕ್ಟರ್ ಮೂಲಕ ಹೊರಹಾಕಿದ್ದಾರೆ. ನೀರನ್ನು ಹೊರತೆಗೆದು ಕಲ್ಲುಕಟ್ಟಡ ನಿರ್ಮಾಣ ಮಾಡಿ ಸುತ್ತಲೂ ತಡೆಗೋಡೆಯೊಂದಿಗೆ ೆನ್ಸಿಂಗ್ ನಿರ್ಮಾಣ ಮಾಡಿ ವಾಕಿಂಗ್ ಪಾರ್ಕ್ ಮಾಡುವುದಾಗಿ ಸಂಸದರು ಭರವಸೆ ನೀಡಿದ್ದಾರೆ.

    ತ್ಯಾಜ್ಯ ಹೊರಹಾಕಲು ಟ್ಯಾಕ್ಟರ್ ಹಾಗೂ ತ್ಯಾಜ್ಯ ಎತ್ತುವ ಸಲಕರಣೆಗಳನ್ನು ಅಭಿವೃದ್ಧಿ ಅಧಿಕಾರಿ ಚಿನ್ನಪ್ಪ ಒದಗಿಸಿದ್ದು, ಸ್ವಚ್ಛತಾ ಕಾರ್ಯದಲ್ಲಿ ದಿನಕ್ಕೆ ಸುಮಾರು 250 ಜನ ಸ್ವಯಂ ಸೇವಾ ಕಾರ್ಯಕರ್ತರು, ಬಿಜೆಪಿ, ಆರ್‌ಎಸ್‌ಎಸ್ ಹಾಗೂ ರೋಟರಿ ಸಂಘದವರು, ಬಿಜೆಪಿ ಕೋಲಾರ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ತಾಲೂಕು ಅಧ್ಯಕ್ಷ ಅಶೋಕ್‌ರೆಡ್ಡಿ, ಕೆಜಿಎಫ್ ತಾಲೂಕು ಅಧ್ಯಕ್ಷ ಕೃಷ್ಣಾರೆಡ್ಡಿ, ಮುಳಬಾಗಿಲು ತಾಲೂಕು ಅಧ್ಯಕ್ಷ ಅಶೋಕ್‌ರೆಡ್ಡಿ, ಮಾಲೂರು ತಾಲೂಕು ಅಧ್ಯಕ್ಷ ಪುರನಾರಾಯಣಸ್ವಾಮಿ ಭಾಗವಹಿಸಿದ್ದರು.

    ಶ್ರೀನಿವಾಸಪುರ ಪಟ್ಟಣ ಸೇರಿ ದೊಡ್ಡ-ದೊಡ್ಡ ಗ್ರಾಮಗಳಲ್ಲಿರುವ ಕಲ್ಯಾಣಿಗಳು ಮಾಯವಾಗಿವೆ. ಸಂಸದರು ಇನ್ನಾದರು ಕಲ್ಯಾಣಿಗಳ ಪಟ್ಟಿ ಪಡೆದು ಮುಚ್ಚಿಹೋಗಿರುವ ಕಲ್ಯಾಣಿಗಳನ್ನು ತೆರವುಗೊಳಿಸಿ ಅಭಿವೃದ್ಧಿ ಪಡಿಸಿದರೆ ನೀರು ಶೇಖರಣೆಗೆ ಅನುಕೂಲವಾಗುತ್ತದೆ.
    ಟಿ. ನಾರಾಯಣಸ್ವಾಮಿ, ಬಿಜೆಪಿ ಹಿರಿಯ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts