More

    ಮುಂದುವರಿದ ಜ್ಞಾನ ವೈಭವ ಮೇಳ

    ಚಿಕ್ಕಮಗಳೂರು: ವಿವಿಧ ತಳಿಯ ಗೋವುಗಳು, ಗಜಪಡೆ, ವರ್ಣರಂಜಿತ ಫಲಪುಷ್ಪಗಳ ಕಲಾಕೃತಿಗಳು, ಕೃಷಿ ವಸ್ತು ಪ್ರದರ್ಶನವನ್ನು ಕಳೆದ ಐದು ದಿನಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿ ಸಂಭ್ರಮಿಸಿ ಮನಸೋತ ಹಿನ್ನೆಲೆಯಲ್ಲಿ ಜ್ಞಾನ ವೈಭವ ಮೇಳವನ್ನು ಸೋಮವಾರವೂ ಮುಂದುವರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

    ಚಿಕ್ಕಮಗಳೂರು ಹಬ್ಬದಲ್ಲಿ ನೂರಾರು ಸ್ಟಾಲ್ ಹೊಂದಿರುವ ಆಹಾರ ಮೇಳ, ಯುವಕ, ಯುವತಿಯರಿಗೆ ಡಿಜೆ ಕುಣಿತ, ಕಲಾಸಕ್ತರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ, ಕ್ರೀಡಾಭಿಮಾನಿಗಳಿಗೆ ಹಲವು ಪ್ರಕಾರಗಳ ಜಲ ಹಾಗೂ ಇತರೆ ಕ್ರೀಡೆಗಳು, ಶ್ವಾನ ವೈಭವ, ಹೆಲಿ ಟೂರಿಸಂ, ನಾಟಕ, ಸಾಹಿತ್ಯ ಲೋಕ ಜನಮನ ಸೆಳೆಯುತ್ತಿದೆ. ರಂಗು ರಂಗಿನ ವಿದ್ಯುತ್ ದೀಪಾಲಂಕಾರದೊಂದಿಗೆ ಜಗಮಗಿಸುತ್ತಿರುವ ಜಿಲ್ಲಾ ಆಟದ ಮೈದಾನದಲ್ಲಿ ನಡೆಯುತ್ತಿರುವ ದೇಶದ ವಿವಿಧ ಭಾಗದ ಕಲಾ ಸಾಂಸ್ಕೃತಿಕ ನೃತ್ಯಗಳ ವೈಭವವನ್ನು ಸಹಸ್ರಾರು ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ನಗರದ 11 ವೇದಿಕೆಗಳಲ್ಲಿ ವಿವಿಧ ಬಗೆಯ ಸಾಂಸ್ಕೃತಿಕ ತಂಡಗಳ ಕಲಾ ಪ್ರದರ್ಶನಗಳನ್ನು ರಾತ್ರಿ 12 ಗಂಟೆವರೆಗೂ ಜನರು ವೀಕ್ಷಿಸುತ್ತಿರುವುದು ಕಲಾ ವೈಭವಕ್ಕೆ ಸಾಕ್ಷಿಯಾಗಿದೆ.

    ಸಿರಿ ಧಾನ್ಯಗಳಲ್ಲಿ ಮೂಡಿ ಬಂದಿರುವ 8 ಅಡಿ ಎತ್ತರದ ಯುವರತ್ನ ಪುನೀತ್ ರಾಜ್ ಕುಮಾರ್ ಕಲಾಕೃತಿ ಗಮನ ಸೆಳೆಯುತ್ತಿದೆ. ಇದೇ ರೀತಿ ಮೂರ್ನಾಲ್ಕು ಕಡೆ ಅಪ್ಪು ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶೃಂಗೇರಿ ಶ್ರೀ ಶಾರದಾಂಬೆ, ಮರ್ಲೆ ಶ್ರೀ ಚೆನ್ನಕೇಶವ ದೇವಾಲಯದ ಕಲಾಕೃತಿ, ಜಗನ್ಮಾತೆ ಶ್ರೀ ಅನ್ನಪೂರ್ಣೆಶ್ವರಿ, ಕನ್ನಡಾಂಬೆ ಶ್ರೀ ಭುವನೇಶ್ವರಿ, ಕನ್ನಡ ಸಾಹಿತ್ಯ ಲೋಕದ ಕವಿಶ್ರೇಷ್ಠರಾದ ಸರ್ವಜ್ಞ, ಭಕ್ತ ಕನಕದಾಸ, ಸಂತ ಶಿಶುನಾಳ ಶರೀಫರ ಕಲಾಕೃತಿಗಳು ಪ್ರದರ್ಶನದ ಆಕರ್ಷಕ ಕೇಂದ್ರ ಬಿಂದುವಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts