More

    ಮುಂದುವರಿದ ಕಾಡಾನೆಗಳ ಹಾವಳಿ

    ಕಾಮಸಮುದ್ರ; ಹೋಬಳಿಯ ಗಡಿ ಗ್ರಾಮಗಳಲ್ಲಿ ಕಾಡಾನೆಗಳ ಪುಂಡಾಟಿಕೆ ಮತ್ತೆ ಮುಂದುವರಿದಿದೆ. ಕೇತಗಾನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹಲವು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶಗೊಳಿಸಿದೆ.

    2 ದಿನಗಳಿಂದ ಕೇತಗಾನಹಳ್ಳಿ ವ್ಯಾಪ್ತಿಯ ಶ್ರೀನಿವಾಸನಗರದಲ್ಲಿ ಬೀಡುಬಿಟ್ಟಿರುವ 8 ಆನೆಗಳ ಹಿಂಡು ಅಡ್ಡಾ ದಿಡ್ಡಿ ಓಡಾಡುತ್ತ 25ರಿಂದ 30 ಎಕರೆಯಷ್ಟು ರಾಗಿ ಬೆಳೆ, ಟೊಮ್ಯಾಟೊ, ಆಲೂಗಡ್ಡೆ ಸೇರಿ ವಿವಿಧ ಬೆಳೆ, ಕೊಳವೆಬಾವಿ ಹಾಗೂ ತೋಟಗಳ ತಡೆಬೇಲಿ ತುಳಿದು ನಾಶ ಪಡಿಸಿವೆ.

    ಆನೆಗಳು ಈಚೆಗಷ್ಟೇ ಮರಿಗಳಿಗೆ ಜನ್ಮ ನೀಡಿರುವುದರಿಂದ ರೈತರು ಬೆಂಕಿ ಹಾಕುವುದು, ಪಟಾಕಿ ಹಚ್ಚುವುದು ಮತ್ತು ಶಬ್ಧ ಮಾಡಿದರೆ ಮರಿಗಳ ಆರೈಕೆಯಲ್ಲಿರುವ ಆನೆಗಳು ಕೆರಳಿ ಮತ್ತಷ್ಟು ತೊಂದರೆ ನೀಡುವ ಸಂಭವವಿದೆ. ಕೆಲವು ದಿನಗಳ ಮಟ್ಟಿಗೆ ಸಂಜೆ 6 ಗಂಟೆ ನಂತರ ಜಮೀನಿನ ಕಡೆ ಮತ್ತು ಕಾಲುದಾರಿಗಳಲ್ಲಿ ಓಡಾಡುವುದನ್ನು ಕಡಿಮೆ ಮಾಡಬೇಕು ಎಂದು ವಲಯ ಅರಣ್ಯಾಧಿಕಾರಿ ಸಂತೋಷ್ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

    ಹಾನಿಗೊಳಗಾಗಿರುವ ರೈತರ ತೋಟಗಳಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಳ್ಳಿ ಗೋವಿಂದರಾಜು, ಪಿಎಲ್‌ಡಿ ಬ್ಯಾಂಕ್ ಉಪಾದ್ಯಕ್ಷ ಶಶಿಧರರೆಡ್ಡಿ, ಗ್ರಾಪಂ ಮಾಜಿ ಸದಸ್ಯ ಗೋಪಾಲರೆಡ್ಡಿ, ಬಾಲರೆಡ್ಡಿ ಇತರರು ಭೇಟಿ ನೀಡಿ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts