More

    ಮುಂದುವರಿದ ಆನೆಗಳ ಉಪಟಳ

    ಕಾಮಸಮುದ್ರ: ಬಂಗಾರಪೇಟೆ ತಾಲೂಕು ದೋಣಿಮಡಗು ಪಂಚಾಯಿತಿ ವ್ಯಾಪಿಯ ಗ್ರಾಮಗಳಲ್ಲಿ ಹಲವು ದಿನಗಳಿಂದ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಲಕ್ಷಾಂತರ ರೂ. ಮೌಲ್ಯದ ಭತ್ತ, ನೆಲಗಡಲೆ, ಟೊಮ್ಯಾಟೊ, ಮಾವು, ಕೊಳವೆಬಾವಿ ನಾಶ ಮಾಡಿವೆ.
    ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಮತ್ತು ಕಾಮಸಮುದ್ರ ಹೋಬಳಿ ವ್ಯಾಪ್ತಿಯಲ್ಲಿ ಮೊಕ್ಕಾಂ ಹೂಡಿರುವ ಕಾಡಾನೆಗಳ ಹಿಂಡು, ಗಡಿಭಾಗದ ಗ್ರಾಮಗಳಲ್ಲಿ ಮತ್ತೆ ಪುಂಡಾಟ ಮುಂದುವರಿಸಿವೆ.

    ಭಾನುವಾರ ಬೆಳಗ್ಗೆ ದೋಣಿಮಡಗು ಪಂಚಾಯಿತಿಯ ಗಡಿಭಾಗದ ಕದಿರಿನತ್ತ ಗ್ರಾಮಕ್ಕೆ ಐದು ಆನೆಗಳು ಲಗ್ಗೆ ಇಟ್ಟು ರೈತ ಈಶ್ವರ್ ರಾವ್ ಅವರ ಭತ್ತ, ರಾಮಚಂದ್ರಪ್ಪ ಅವರ ಟೊಮ್ಯಾಟೊ, ಶಿವಾಜಿರಾವ್ ಅವರ ಮಾವಿನ ತೋಟ, ಗೋವಿಂದಪ್ಪ ಎಂಬುವವರ ಬೋರ್ ವೆಲ್, ರವಲೋಜಿ ರಾವ್ ಎಂಬುವವರ ನೆಲಗಡಲೆ ಮತ್ತು ಮಾವಿನ ತೋಟ ನಾಶ ಮಾಡಿವೆ.

    9 ಆನೆಗಳ ಗುಂಪು ನಾಲ್ಕೈದು ಗುಂಪುಗಳಾಗಿದ್ದು, ಬೇರೆ ಬೇರೆ ಭಾಗಗಳಲ್ಲಿ ಬೆಳೆ ನಾಶ ಮಾಡುತ್ತಿವೆ. ಕಾರ್ಯಾಚರಣೆ ಚುರುಕುಗೊಳಿಸಿ ಮಲ್ಲಪ್ಪನ ಬೆಟ್ಟದ ಮಾರ್ಗವಾಗಿ ತಮಿಳುನಾಡು ಅರಣ್ಯಕ್ಕೆ ಓಡಿಸಲಾಗುವುದು. ಸೋಲಾರ್ ಫೆನ್ಸಿಂಗ್ ಅಳವಡಿಸಿರುವ ಕಡೆ ಆನೆ ದಾಳಿ ನಿಯಂತ್ರಣಕ್ಕೆ ಬಂದಿದ್ದು, ಆದಷ್ಟು ಬೇಗ ಅವಶ್ಯವಿರುವೆಡೆ ೆನ್ಸಿಂಗ್ ಅಳವಡಿಸಲಾಗುವುದು.
    ನವೀನ್ ಕುಮಾರ್, ಅರಣ್ಯ ಇಲಾಖೆ ಅಧಿಕಾರಿ, ಬಂಗಾರಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts