More

    ಮುಂದಿನ ಹೋರಾಟಕ್ಕೆ ಸಜ್ಜಾಗಬೇಕಿದೆ

    ಗೋಕಾಕ: ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟಕ್ಕೆ ಒಂದು ಹಂತದ ಜಯ ದೊರಕಿದ್ದು, ಮುಂದಿನ ಹೋರಾಟಕ್ಕೆ ನಾವೆಲ್ಲರೂ ಸಿದ್ಧರಾಗಬೇಕಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ನಗರದ ಬಸವೇಶ್ವರ ಸಭಾಭವನದಲ್ಲಿ ಗೋಕಾಕ ಘಟಕದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಹಾಗೂ ಸಮಸ್ತ ಲಿಂಗಾಯತ ಒಳಪಂಗಡಗಳ ವತಿಯಿಂದ ಸಮುದಾಯಕ್ಕೆ 2ಡಿ ಮೀಸಲಾತಿ ದೊರೆತಿದ್ದಕ್ಕಾಗಿ ಭಾನುವಾರ ಹಮ್ಮಿಕೊಂಡಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಭಕ್ತರಿಂದ ಜಗದ್ಗುರು ವಂದನಾ ಹಾಗು ಗುರುಗಳಿಂದ ಜನತಾ ದೇವರಿಗೆ ಶರಣು ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪಂಚಮಸಾಲಿಗರು ಯಾರಿಗೂ ಅನ್ಯಾಯ ಮಾಡಿಲ್ಲ. ಎಲ್ಲರೊಂದಿಗೆ ಸೌಹಾರ್ದತೆಯಿಂದ ಇದ್ದೇವೆ. ನಮ್ಮ ಹೋರಾಟದಿಂದ ಎಲ್ಲ ಒಳಪಂಗಡಗಳು ಸೇರಿ ಇತರರಿಗೂ ಹಾಗೂ ಅನಾಥ ಮಕ್ಕಳಿಗೂ ಮೀಸಲಾತಿ ದೊರಕಿದೆ. ಸಮುದಾಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕಾಗಿದೆ. ಮೀಸಲಾತಿ ಹೋರಾಟಕ್ಕೆ ಶಕ್ತಿ ತುಂಬಿದ ಜನತಾ ದೇವರಿಗೆ ಅವರಿಗೆ ಶರಣು ವಂದನೆ. ಇನ್ನಷ್ಟು ಸಂಘಟಿತರಾಗಿ ಹೋರಾಡಿ ಭಾವಿ ಸವಾಲುಗಳನ್ನು ಎದುರಿಸಬೇಕಿದೆ ಎಂದರು. ಸೋಮಶೇಖರ ಮಗದುಮ್ಮ, ಎಸ್.ಎಸ್. ಅಂಗಡಿ, ಆನಂದ ಗೋಟಡ್ಕಿ, ಡಾ.ಅಶೋಕ ಮುರಗೋಡ, ಡಾ.ಬಸವರಾಜ ಮದಬಾವಿ, ಮಹಾಂತೇಶ ವಾಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts