More

    ಮುಂದಿನ ದಿನಗಳಲ್ಲಿ ಲಕ್ಷ ರೂ.ಸಾಲ ಸೌಲಭ್ಯ

    ನಂಜನಗೂಡು: ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಒಂದು ಲಕ್ಷ ರೂ.ವರೆಗೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ವೀರಶೈವ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಸಿ.ಬಸವಣ್ಣ ಹೇಳಿದರು.


    ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ 16ನೇ ವರ್ಷದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
    2007ರಲ್ಲಿ ಹಿರಿಯ ವಕೀಲ ಬಿ.ಮಹದೇವಪ್ಪ ಅವರು ಸಂಸ್ಥಾಪಕ ಅಧ್ಯಕ್ಷರಾಗಿ ಸೊಸೈಟಿಯನ್ನು ಅಸ್ತಿತ್ವಕ್ಕೆ ತಂದಿದ್ದು, ಪ್ರಸ್ತುತ ಬೃಹದಾಕಾರವಾಗಿ ಬೆಳೆದಿದೆ. ಅನೇಕರು ಸಂಘದ ಸಹಕಾರದಿಂದ ವಾಣಿಜ್ಯ ಮತ್ತಿತರ ಕ್ಷೇತ್ರಗಳಲ್ಲಿ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಕೊಂಡಿದ್ದಾರೆ ಎಂದರು.


    ಆರಂಭದಲ್ಲಿ ಸಾಲವನ್ನು 10 ಸಾವಿರ ರೂ.ನಿಂದ ಪ್ರಾರಂಭಿಸಿ ಈಗ 50 ಸಾವಿರ ರೂ.ವರೆಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 1 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡುವುದಾಗಿ ಘೋಷಿಸಿದರು. ಸೊಸೈಟಿ ಸಂಸ್ಥಾಪಕರಾದ ಬಿ.ಮಹದೇವಪ್ಪ ಮತ್ತು ಕೆ.ವಿ.ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.


    ಸೊಸೈಟಿ ಉಪಾದ್ಯಕ್ಷ ಎಂ.ವಿ.ಶಿವಕುಮಾರ್, ನಿರ್ದೆಶಕರಾದ ಕೆ.ವಿ.ಶಿವಕುಮಾರ್, ಜಿ.ಚೆನ್ನಬಸಪ್ಪ, ಡಿ.ಎಸ್.ಕೆಂಡಗಣ್ಣಸ್ವಾಮಿ, ಎನ್.ವಿ.ವಿನಯ್‌ಕುಮಾರ್, ಮಂಜುಳಾ ಮಧು, ಇ.ಶಾಂತಕುಮಾರಿ, ಗೀತಾದೇವಿ, ಪಿ.ರಮೇಶ್, ಎನ್.ಮಹೇಶ್, ಎನ್.ಕುಮಾರ್‌ಸ್ವಾಮಿ, ಶಿವಮಲ್ಲಪ್ಪ, ಕಾರ್ಯದರ್ಶಿ ಬಸಪ್ಪ, ಸಿಬ್ಬಂದಿ ಚೈತ್ರಾ, ಪ್ರಸನ್ನ ಕುಮಾರ್, ಎಸ್.ಆರ್.ಪ್ರಭಾಕರ್, ಪೂಜಾ, ಲಿಂಗರಾಜು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts