More

    ಮೀಸಲಾತಿ ಹೆಚ್ಚಿಸದಿದ್ದರೆ ಹೋರಾಟ

    ಗಜೇಂದ್ರಗಡ: ವಾಲ್ಮೀಕಿ ಸಮುದಾಯಕ್ಕೆ ಸಿಗಬೇಕಿರುವ ಮೀಸಲಾತಿಯನ್ನು ಹೆಚ್ಚಿಸಲು ಸರ್ಕಾರ ಮೀನಮೇಷ ಮಾಡುತ್ತಿದೆ. ಹೀಗಾಗಿ ಮೀಸಲಾತಿ ಹೆಚ್ಚಳಕ್ಕೆ ದಿಟ್ಟ ನಿರ್ಧಾರ ಕೈಗೊಳ್ಳದಿದ್ದರೆ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

    ರಾಜನಹಳ್ಳಿ ಗುರುಪೀಠದಲ್ಲಿ ಫೆ. 8 ಹಾಗೂ 9ರಂದು ಜರುಗಲಿರುವ 3ನೇ ವರ್ಷದ ವಾಲ್ಮೀಕಿ ಜಾತ್ರೆ ಹಾಗೂ ಜನಜಾಗೃತಿ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ರೋಣ ರಸ್ತೆಯ ಜಗದ್ಗುರು ತೋಂಟದಾರ್ಯ ಸಿಬಿಎಸ್​ಸಿ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

    ‘ನಮ್ಮ ಸಮುದಾಯ ಈ ನಾಡಿಗೆ ತನ್ನದೇ ಆದ ಕೊಡುಗೆ ನೀಡಿದೆ. ರಾಮಾಯಣ ಮಹಾಕಾವ್ಯದ ಮೂಲಕ ಇಡೀ ವಿಶ್ವಕ್ಕೆ ಮಾನವೀಯ ಮೌಲ್ಯಗಳನ್ನು ಕೊಟ್ಟ ಇತಿಹಾಸವಿದೆ. ನಮಗೆ ಈ ಹಿಂದೆಯೇ ಸಿಗಬೇಕಾದ ಮೀಸಲಾತಿಯನ್ನು ಹೆಚ್ಚಿಸಲು ಇಂದಿಗೂ ಹಿಂದೇಟು ಹಾಕುತ್ತಿರುವವರಿಗೆ 1857ರ ದಂಗೆಯನ್ನು ನೆನಪಿಸಲು ನಾವು ಹಿಂದೇಟು ಹಾಕುವುದಿಲ್ಲ’ ಎಂದರು.

    ವಾಲ್ಮೀಕಿ ಸೇವಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ ತಳವಾರ ಮಾತನಾಡಿ, ವಾಲ್ಮೀಕಿ ಜಾತ್ರೆ ಕೇವಲ ಒಂದು ಜಾತ್ರೆಯಲ್ಲ. ಸಮುದಾಯದ ಜನರಲ್ಲಿ ಸ್ವಾಭಿಮಾನವನ್ನು ಹುಟ್ಟು ಹಾಕುವ ವೇದಿಕೆಯಾಗಿದೆ ಎಂದರು.

    ಹನುಮಂತಪ್ಪ ಹಟ್ಟಿಮನಿ, ಮೋಹನ ಹುಲ್ಲಣ್ಣವರ, ಪುರಸಭೆ ಸದಸ್ಯ ಶರಣಪ್ಪ ಉಪ್ಪಿನ ಬೇಟಗೇರಿ, ಯಮನೂರಪ್ಪ ತಳವಾರ, ಯಮನೂರ ಅಬ್ಬಿಗೇರಿ, ಮಾಲತಿ ನಾಯಕ, ಲಕ್ಷ್ಮಣ ತಳವಾರ, ಶರಣಪ್ಪ ಸಿಂಗಾಡಿ, ನಾಗರಾಜ ತಳವಾರ, ಪಿ.ಎಸ್. ಕಡಿವಾಲ ಚಂದ್ರಹಾಸ ಹುಲ್ಲಣ್ಣವರ, ಶಿವನಗೌಡ ಪಾಟೀಲ, ದುರಗೇಶ ಗಾಂಧಾಳ ಇತರರಿದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts