More

    ಮೀನು ಮರಿ ಸಾಕಾಣಿಕೆಗೆ ತಯಾರಿ

    ಶಿರಸಿ: ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇಲ್ಲಿನ ಮೀನುಗಾರಿಕೆ ಇಲಾಖೆ ಆವರಣದಲ್ಲಿ ಅಂದಾಜು 5 ಲಕ್ಷ ವೆಚ್ಚದಲ್ಲಿ ಮೀನು ಮರಿ ಬೆಳೆಸಲು ತಯಾರಿ ನಡೆದಿದೆ.

    ಇಲ್ಲಿಯ ಎಸ್​ಬಿಐ ಬ್ಯಾಂಕ್ ಪಕ್ಕದಲ್ಲಿರುವ ಮೀನುಗಾರಿಕೆ ಇಲಾಖೆಯ ಟ್ಯಾಂಕ್​ಗಳಲ್ಲಿ ಮೀನು ಸಾಕಾಣಿಕೆಗೆ ಸಿದ್ಧತೆ ನಡೆಸಲಾಗಿದ್ದು, ಒಟ್ಟು 8 ಟ್ಯಾಂಕ್​ಗಳಲ್ಲಿ 5 ಲಕ್ಷ ರೂಪಾಯಿಗಳ ಮೀನು ಮರಿಗಳನ್ನು ಬೆಳೆಸಲು ಇಲಾಖೆ ಮುಂದಾಗಿದೆ. ಈಗಾಗಲೇ ಮೀನಿನ ಮರಿಗಳಿಗೆ ಅಗತ್ಯವಿರುವ ಜೇಡಿ ಮಣ್ಣು, ಸಗಣಿ ಗೊಬ್ಬರಗಳನ್ನು ಹಾಕಿ ನೀರನ್ನು ಹದ ಮಾಡಿ ಮೀನು ಮರಿಗಳನ್ನು ಬಿಡಲಾಗಿದೆ. ಭದ್ರಾ ಅಣೆಕಟ್ಟಿನ ಮೀನು ಮರಿ ಉತ್ಪಾದನಾ ಕೇಂದ್ರದಿಂದ ಮೀನಿನ ಮರಿಗಳನ್ನು ತಂದು ಇಲಾಖೆಯ ಟ್ಯಾಂಕ್​ಗಳಲ್ಲಿ ಬಿಡಲಾಗಿದೆ.

    ಶಿರಸಿಯು ಮೀನುಗಾರಿಕೆ ಪ್ರದೇಶ ಅಲ್ಲದೇ ಹೋದರೂ ಇಲಾಖೆಯ ಅಡಿಯಲ್ಲಿ 17 ಕೆರೆಗಳು ಬರುವ ಕಾರಣ ಮೀನು ಕೃಷಿ ಚಟುವಟಿಕೆಗಳು ಪ್ರತಿ ವರ್ಷವೂ ಜೋರಾಗಿ ನಡೆಯುತ್ತಿದೆ. ಈ ವರ್ಷ ಬೇಸಿಗೆ ಹೆಚ್ಚಿದ್ದ ಕಾರಣ ಮೀನು ಮರಿ ತರಲು ವಿಳಂಬವಾಗಿದೆ. ಪ್ರಸ್ತುತ ಭದ್ರಾ ಅಣೆಕಟ್ಟು ಮೀನು ಮರಿ ಉತ್ಪಾದನಾ ಕೇಂದ್ರದಿಂದ ಮರಿಗಳನ್ನು ತಂದು ನೀರಿಗೆ ಬಿಡಲಾಗಿದೆ. ಇಲ್ಲಿ ಬೆಳೆಸುವ ಶೇ. 30ರಷ್ಟು ಮೀನು ಮರಿಗಳನ್ನು ಇಲಾಖೆಗೆ ಮರಳಿಸಬೇಕಾಗುತ್ತದೆ. ಉಳಿದಂತೆ ಇಲ್ಲಿನ ಮೀನು ಕೃಷಿ ಮಾಡುವ ರೈತರಿಗೆ ವಿತರಣೆ ಮಾಡಲಾಗುತ್ತದೆ. ಇದೀಗ ಮರಿಗಳನ್ನು ಟ್ಯಾಂಕ್​ಗೆ ಬಿಡಲಾಗಿದ್ದು ಮುಂದಿನ 35ರಿಂದ 40 ದಿನಗಳ ಕಾಲ ಅವುಗಳ ಆರೈಕೆ ನಡೆಯಲಿದೆ.

    ಮೀನಿನ ಮರಿಗಳನ್ನು ತಂದು ಬೆಳೆಸುವ ಮೊದಲು ಟ್ಯಾಂಕ್​ಗಳಲ್ಲಿ ಸಗಣಿ ಗೊಬ್ಬರ ಹಾಗೂ ಜೇಡಿ ಮಣ್ಣನ್ನು ಹಾಕಿ ಮೀನಿನ ದೇಹಕ್ಕೆ ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ. ಹೀಗೆ ಬೆಳೆದ ಮೀನು ಮರಿಗಳನ್ನು ಕೊಂಡೊಯ್ಯಲು ಈಗಾಗಲೇ 100ಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿದ್ದಾರೆ. ಮರಿಗಳು ಬೆಳೆದ ನಂತರ ಗರಿಷ್ಠ 5 ಸಾವಿರ ಒಬ್ಬರಿಗಂತೆ ಮರಿಗಳನ್ನು ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ವಾರ್ಷಿಕ 2 ಲಕ್ಷ ಮೀನು ಮರಿ ಮಾರಾಟದ ಗುರಿಯಿದ್ದು, ಇಲಾಖೆ ವತಿಯಿಂದ ಗುರಿ ಮೀರಿ ಸಾಧನೆ ಮಾಡಲಾಗುತ್ತದೆ. | ವೈಭವ್ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts