More

    ಮೀನುಗಾರಿಕೆಯಲ್ಲೂ ಸರ್ಕಾರದ ರಾಜಕೀಯ

    ಭಟ್ಕಳ: ಮೀನುಗಾರಿಕೆಯಲ್ಲೂ ಸರ್ಕಾರ ರಾಜಕೀಯ ಮಾಡಲು ಹೊರಟಿದೆ. ಬಂಡವಾಳಶಾಹಿಗಳ ಒತ್ತಾಯಕ್ಕೆ ಮಣಿದು ಕೇಂದ್ರದ ಕೃಷಿ ಸಚಿವಾಲಯ ಮೀನುಗಾರಿಕೆ ಅವಧಿ ವಿಸ್ತರಿಸಿ, ಮೀನುಗಾರರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಮೀನುಗಾರರ ಮುಖಂಡ ವಸಂತ ಖಾರ್ವಿ ಆಕ್ರೋಶ ವ್ಯಕ್ತಪಡಿಸಿದರು.

    ಶುಕ್ರವಾರ ಭಟ್ಕಳ ಬಂದರಿನಲ್ಲಿ ನಡೆದ ಮೀನುಗಾರ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

    ಕಳೆದ ವರ್ಷ ಮೀನುಗಾರಿಕೆಯನ್ನು ಜೂ. 1ರಿಂದ ಜುಲೈ 30ರವರೆಗೆ (60ದಿನ) ನಿಷೇಧಿತ ಅವಧಿ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಈಗ ಸರ್ಕಾರ ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದು ಈ ಅವಧಿಯನ್ನು ಜೂ. 14ರಿಂದ (47 ದಿನಗಳು) ರವರೆಗೆ ವಿಸ್ತರಿಸಿದೆ. ಇದಕ್ಕೆ ನಮ್ಮ ಆಕ್ಷೇಪವಿದ್ದು, ಸರ್ಕಾರ ನೀಡಿದ ಈ ಆದೇಶವನ್ನು ಮರು ಪರಿಶೀಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮೀನುಗಳ ಸಂತಾನೋತ್ಪತ್ತಿಗೂ ಅವಕಾಶ ಸಿಗದೆ ಮೀನುಗಾರಿಕೆ ನಶಿಸಲಿದೆ ಎಂದರು.

    ಮೀನುಗಾರರೊಂದಿಗೆ ಚರ್ಚೆ ನಡೆಸದೆ, ಕೇವಲ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿ ಹಾಕಿ ಮೀನುಗಾರಿಕೆ ಅವಧಿ ವಿಸ್ತರಿಸಿ ಪರವಾನಿಗೆ ನೀಡುತ್ತಿರುವುದು ಖಂಡನಾರ್ಹ. ಈಗಾಗಲೆ ಪ್ರಕೃತಿ ವಿಕೋಪ, ಕೇರಳ, ಗೋವಾ ರಾಜ್ಯದವರ ಲೈಟ್ ಫಿಶಿಂಗ್ ಹಾವಳಿ, ಕರೊನಾ ಅಟ್ಟಹಾಸದಂತಹ ಸಮಸ್ಯೆಗಳಿಂದ ಕರಾವಳಿಯ ಮೀನುಗಾರರು ಸಂಕಟದಲ್ಲಿದ್ದಾರೆ. ಇನ್ನೊಂದೆಡೆ ಮೀನುಗಳ ಹಿಡುವಳಿ ಇಲ್ಲದೆ ನಷ್ಟ ಅನುಭವಿಸಿದ್ದಾರೆ. ಬೋಟುಗಳಲ್ಲಿ ದುಡಿಯುತ್ತಿರುವ ಬಹುತೇಕ ಮೀನುಗಾರರು ತಮ್ಮ ಊರಿಗೆ ಮರಳಿದ್ದಾರೆ. ಅಲ್ಲದೆ, ಸತತ ನಷ್ಟದಿಂದ ಕಂಗೆಟ್ಟ ಯಾಂತ್ರಿಕೃತ ಮೀನುಗಾರರು ಮೇ 30ಕ್ಕೆ ಮೀನುಗಾರಿಕೆ ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಮೀನುಗಾರಿಕೆ ನಿಷೇಧಿತ ಅವಧಿಯನ್ನು ಹಿಂದಿನಂತೆಯೇ 60 ದಿನಗಳಿಗೆ ಸೀಮಿತಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.

    ಶ್ರೀಧರ ಮೊಗೇರ, ಪರ್ಸೀನ್ ಬೋಟ್ ಯುನಿಯನ್ ಅಧ್ಯಕ್ಷ ಶ್ರೀಧರ ಮೊಗೇರ, ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಕರಾವಳಿ ಯುನಿಯನ್ ಅಧ್ಯಕ್ಷ ಜಟಕಾ ಮೊಗೇರ, ಶ್ರೀನಿವಾಸ ಖಾರ್ವಿ ವೆಂಕಟ್ರಮಣ ಮೊಗೇರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts