More

    ಮೀನುಗಾರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೊಷಿಸುವಂತೆ ಆಗ್ರಹ

    ಕಾರವಾರ: ಮೀನುಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿ ವಿಶೇಷ ಪರಿಹಾರ ಪ್ಯಾಕೇಜ್ ಘೊಷಿಸಬೇಕು. ಕೃಷಿ ಮಾದರಿಯಲ್ಲಿ ಮೀನುಗಾರಿಕೆ ಚಟುವಟಿಕೆಗೂ ಅವಕಾಶ ನೀಡಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಆಗ್ರಹಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 1 ರಿಂದ ಮೀನುಗಾರಿಕೆಗೆ ಅವಕಾಶ ಸಿಕ್ಕರೂ ಪ್ರಕೃತಿ ವಿಕೋಪದ ಕಾರಣದಿಂದ ಬೇಟೆ ಮಾಡಲಾಗದೇ ಮೀನುಗಾರರ ಬದುಕು ಜರ್ಜರಿತವಾಗಿದೆ. ಮೊದಲು ನೆರೆ, ನಂತರ ಬಿರುಗಾಳಿ ಹೀಗೆ ವಿವಿಧ ಕಾರಣಗಳಿಂದ ಮೀನುಗಾರರು ಕಡಲು ನೋಡುತ್ತ ಕುಳಿತುಕೊಳ್ಳುವಂತಾಗಿದೆ. ಸಾಲ ಕಟ್ಟಲಾಗದೇ ಮೀನುಗಾರರ ಕುಟುಂಬಗಳು ಮನೆ, ಬೋಟ್, ಬಲೆಗಳನ್ನು ಮಾರಿಕೊಳ್ಳುವ ಪರಿಸ್ಥಿತಿ ಬಂದಿದೆ. ಇದರಿಂದ ಮೀನುಗಾರರ ಕುಟುಂಬಗಳ ಸಾಲ ಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈಗ ಕರೊನಾ ಲಾಕ್​ಡೌನ್​ನಿಂದ ಮೀನುಗಾರರಿಗೆ ಮತ್ತಷ್ಟು ತೊಂದರೆ ಎದುರಾಗಿದೆ. ಜಿಲ್ಲೆಯವರೇ ಆದ ಶಿವರಾಮ ಹೆಬ್ಬಾರ ಅವರಿಗೆ ಜಿಲ್ಲೆ ಮೀನುಗಾರರ ಸಮಸ್ಯೆ ಅರಿವಿದೆ. ಅವರು ಸಿಎಂ ಜತೆ ಮಾತನಾಡಬೇಕು. ರೈತರಿಗೆ ಘೊಷಿಸಿದ ಹಾಗೇ ಮೀನುಗಾರರಿಗೂ 6 ತಿಂಗಳ ಪ್ಯಾಕೇಜ್ ಘೊಷಣೆ ಮಾಡಬೇಕು. ಕೃಷಿ ಚಟುವಟಿಕೆಗೆ ಅವಕಾಶ ನೀಡಿದ ಹಾಗೇ ಮೀನುಗಾರಿಕೆಗೂ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts