More

    ಮಿಶ್ರ ಜಾತಿಗಳ ಸಸಿ ನೆಟ್ಟು ಪೋಷಣೆ ಮಾಡಿ

    ಯಲ್ಲಾಪುರ: ಹೆಚ್ಚು ಹೆಚ್ಚು ಮಿಶ್ರ ಜಾತಿಯ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪ್ರತಿಯೊಬ್ಬರೂ ಉತ್ತಮ ಪರಿಸರ ನಿರ್ವಿುಸಲು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ತಾಲೂಕಿನ ಶೀಗೆಪಾಲದಲ್ಲಿ ಹಬ್ಬನಪಾಲ ಗ್ರಾಮ ಅರಣ್ಯ ಸಮಿತಿಯ ಸದಸ್ಯರಿಗೆ ಅರಣ್ಯ ಇಲಾಖೆ ವತಿಯಿಂದ ಪಾಲಿಸಿದರೆ ಪಾಲು ಅಡಿಯಲ್ಲಿ 3.92 ಲಕ್ಷ ರೂ. ವೆಚ್ಚದಲ್ಲಿ ನೀಡಲಾದ ಸೋಲಾರ್ ಉಪಕರಣಗಳು, ಸಿಮೆಂಟ್ ಬೇಲಿ ಕಂಬಗಳನ್ನು ವಿತರಿಸಿ ಅವರು ಮಾತನಾಡಿದರು.

    ಇಂಧನಕ್ಕಾಗಿ ಕಾಡನ್ನು ಅವಲಂಬಿಸದೇ ಪರ್ಯಾಯ ಇಂಧನ ರೂಪದಲ್ಲಿ ಅನಿಲ ಸಿಲಿಂಡರ ಬಳಕೆ, ಸೋಲಾರ್ ದೀಪ ಮತ್ತು ಹೀಟರ್ ಬಳಕೆ, ಸಿಮೆಂಟ್ ಕಂಬಗಳ ಬಳಕೆ ಮಾಡಬೇಕು ಎಂದರು. ಯಲ್ಲಾಪುರ ಅರಣ್ಯ ವಿಭಾಗದಿಂದ ಪ್ರಸ್ತುತ ಸಾಲಿನಲ್ಲಿ 60.58 ಲಕ್ಷ ರೂ. ಲಾಭಾಂಶವನ್ನು ಗ್ರಾಮ ಅರಣ್ಯ ಸಮಿತಿಗಳಿಗೆ ವಿತರಿಸಲಾಗುವುದು ಎಂದರು.

    ಎಸಿಎಫ್ ಅಶೋಕ ಭಟ್ಟ, ವಲಯ ಅರಣ್ಯಾಧಿಕಾರಿ ಬಾಲಸುಬ್ರಹ್ಮಣ್ಯ, ಅರಣ್ಯ ಸಮಿತಿ ಅಧ್ಯಕ್ಷ ಕೃಷ್ಣ ಗೋಪಾಲ ಭಟ್ಟ, ಕಾರ್ಯದರ್ಶಿ ಅಲ್ತಾಫ್ ಚೌಕಡಾಕ್, ಆನಗೋಡ ಗ್ರಾಪಂ ಸದಸ್ಯ ನರಸಿಂಹ ಬೋಳಪಾಲ, ರಾಮಕೃಷ್ಣ ಭಾಗ್ವತ, ಪ್ರಮುಖರಾದ ವಿಜಯ ಮಿರಾಶಿ, ಅರಣ್ಯ ಇಲಾಖೆಯ ಜಿ. ಡಿ ನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts