More

    ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಕಿಡ್ನಿ ಕಸಿ ಯಶಸ್ವಿ

    ಹುಬ್ಬಳ್ಳಿ: ಮಿದುಳು ನಿಷ್ಕ್ರಿಯಗೊಂಡ ರೋಗಿಯ ಯಕೃತ್ ಮತ್ತು ಮೂತ್ರಪಿಂಡವನ್ನು ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಹೊರ ತೆಗೆದಿದ್ದು, ವೈದ್ಯರ ತಂಡ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ನೆರವೇರಿಸಿದೆ.ಕಿಮ್ಸ್​ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಹುಬ್ಬಳ್ಳಿ ಮೂಲದ 36 ವರ್ಷದ ರೋಗಿಯೊಬ್ಬರಿಗೆ ಕಿಡ್ನಿ ಕಸಿ ಮಾಡಲಾಯಿತು. ಯಕೃತ್ ಬೆಂಗಳೂರಿಗೆ ರವಾನೆ ಮಾಡಲಾಯಿತು. ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಅಂಗಾಂಗ ಸಾಗಿಸಲು ಹು-ಧಾ ಪೊಲೀಸರು ಹಸಿರು ಕಾರಿಡಾರ್ ರಚಿಸಿದ್ದರು.

    ಇತ್ತೀಚೆಗೆ ಅಪಘಾತದಲ್ಲಿ ಶಿಗ್ಗಾಂವಿಯ 30 ವರ್ಷದ ಯುವಕ ಗಂಭೀರವಾಗಿ ಗಾಯಗೊಂಡಿದ್ದರು. ಬ್ರೇನ್ ಡೆಡ್ ಎಂದು ಘೊಷಣೆ ಆದ ಬಳಿಕ, ಜೀವ ಸಾರ್ಥಕತೆ ಮತ್ತು ವೈದ್ಯರ ತಂಡ, ರೋಗಿಯ ಕುಟುಂಬದ ಜತೆ ವೈದ್ಯಕೀಯ ಸ್ಥಿತಿಗತಿಗಳ ಬಗ್ಗೆ ರ್ಚಚಿಸಿದ್ದರು. ಇದಾದ ಬಳಿಕ ಕುಟುಂಬವು, ಅಂಗಾಂಗ ದಾನ ಮಾಡಲು ಒಪ್ಪಿತು. ಈ ಹಿನ್ನೆಲೆಯಲ್ಲಿ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಹೃದಯ, ಯಕೃತ್, ಮೂತ್ರಪಿಂಡವನ್ನು ಪಡೆಯಲಾಯಿತು.

    ‘ಕಿಡ್ನಿ ಕಸಿ ನಮ್ಮಲ್ಲಿ ನೆರವೇರಿದ್ದು, ಇನ್ನೊಂದು ಕಿಡ್ನಿಯು ಬೇರೆಯವರಿಗೆ ಹೊಂದಾಣಿಕೆಯಾಗಿಲ್ಲ. ಹೃದಯ ಜೋಡಣೆ ಸಾಧ್ಯವಾಗಿಲ್ಲ. ಯಕೃತ್ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ’ ಎಂದು ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ‘ವಿಜಯವಾಣಿ’ಗೆ ತಿಳಿಸಿದರು.

    ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಉಪ ವೈದ್ಯಕೀಯ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ, ಮೂತ್ರಪಿಂಡ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ ಮೊಗೇರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts