More

    ಮಾಸಬ ಕಾಲೇಜಿನಲ್ಲಿ ಪ್ರಾಚ್ಯ ವಸ್ತು ಪ್ರದರ್ಶನ 

    ದಾವಣಗೆರೆ: ನಗರದ ಮಾಗನೂರು ಸರ್ವಮಂಗಳಮ್ಮಬಸಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಇತ್ತೀಚೆಗೆ ಪ್ರಾಚ್ಯಾವಶೇಷ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿತ್ತು.
    ರಾಜರ ಕಾಲದ ಕತ್ತಿ ಗುರಾಣಿ, ಪುರಾತನ ಒನಕೆಗಳು, ಎಲುಬಿನ ತುಣುಕುಗಳು, ರಾಜರ ಅವಧಿಯಲ್ಲಿ ಚಲಾವಣೆಯಾಗಿದ್ದ ನಾಣ್ಯಗಳು, ಮೈಸೂರು ಒಡೆಯರಿಗೆ ಸಂಬಂಧಿಸಿದ ಬೆಳ್ಳಿ ಬಟ್ಟಲು, ಮಡಕೆ ಸಾಮಗ್ರಿಗಳು, ಬೀಸುವ ಕಲ್ಲು, ತಾಳೆ ಗರಿಗಳು, ಸೇರು. ಬಳ್ಳ, ಚಟಾಕು ಸೆರಿ ಅಳತೆ ಮಾಪನಗಳು ಮೊದಲಾದವು ಇಲ್ಲಿ ಪ್ರದರ್ಶಿತವಾದವು.
    ಪ್ರದರ್ಶನ ವೀಕ್ಷಿಸಿ ಮಾತನಾಡಿದ ಎವಿಕೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಬಿ.ಪಿ.ಕುಮಾರ್, ಇತಿಹಾಸ ಎಂಬುದು ಒಂದು ದೀಪ. ಅದು ಬೆಳಗಿದಾಗ ಕೊಠಡಿಯಲ್ಲಿ ಬೆಳಕು ಹರಿಯಲಿದೆ. ಇತಿಹಾಸ ಅಧ್ಯಯನ ವಿಷಯದಿಂದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಜೀವನ ಕಟ್ಟಿಕೊಳ್ಳಬಹುದು ಎಂದರು.
    ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಕೆ.ವೈ.ಈಶ್ವರ ಮಾತನಾಡಿ ಪ್ರಾಚ್ಯ ಅವಶೇಷಗಳ ಸಂಗ್ರಹ ಮತ್ತು ಪ್ರದರ್ಶನವು ಇತಿಹಾಸ ಮತ್ತು ಇತಿಹಾಸಕಾರರಿಗೆ ಗೌರವ ಸೂಚಿಸಲಿದೆ ಎಂದರು. ಪ್ರೊ. ಎಂ. ಮಂಜಪ್ಪ, ಕಾಲೇಜಿನ ಪ್ರಾಚಾರ್ಯೆ ಪ್ರೊ.ಜಿ.ಸಿ. ನೀಲಾಂಬಿಕಾ ಮಾತನಾಡಿದರು. ವಿದ್ಯಾರ್ಥಿನಿ ಅಂಕಿತಾ ಪ್ರಾರ್ಥಿಸಿದರು. ಉಪನ್ಯಾಸಕಿ ಕೆ. ಪವಿತ್ರಾ ನಿರೂಪಿಸಿದರು. ಎಚ್.ಪಿ. ಯಶವಂತಕುಮಾರ್ ಸ್ವಾಗತಿಸಿದರು. ಎಸ್. ಪರಮೇಶಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts