More

    ಮಾವಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ಎಂಟಿಬಿ ನಾಗರಾಜ್

    ದೇವನಹಳ್ಳಿ: ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮತ್ತು ಕೋಲಾರ ಜಿಲ್ಲೆಯಲ್ಲಿ ಮಾವು ಉತ್ಪನ್ನಗಳ ಸಂಸ್ಕರಣಾ ಘಟಕಗಳ ಸ್ಥಾಪನೆಗಾಗಿ ಮಾವು ಬೆಳೆಗಾರರು ಆಗ್ರಹಿಸಿದ್ದಾರೆ. ಈ ವಿಷಯವಾಗಿ ಸರ್ಕಾರದ ಜತೆ ಮಾತುಕತೆ ನಡೆಸಿ, ರೈತರಿಗೆ ನೆರವು ನೀಡಲಾಗುವುದು ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

    ಪಟ್ಟಣದ ರಾಣಿ ವೃತ್ತದ ನಂದಿಬೆಟ್ಟ ರಸ್ತೆಯ ತಿರುವಿನಲ್ಲಿ ತೋಟಗಾರಿಕಾ ಇಲಾಖೆ ಹಾಗೂ ಜಿಲ್ಲಾಡಳಿತ ಏರ್ಪಡಿಸಿದ್ದ ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಮಾತನಾಡಿದರು.

    ಮೇಳದಲ್ಲಿದ್ದ ಮಳಿಗೆಗಳಿಗೆ ಭೇಟಿ ನೀಡಿದ ಸಚಿವರು, ಎಲ್ಲ ಮಳಿಗೆಗಳಲ್ಲೂ ಮಾವು ಮತ್ತು ಹಲಸಿನ ಹಣ್ಣು ಖರೀದಿಸಿದರು. ಜತೆಗೆ ಅಧಿಕಾರಿಗಳೊಂದಿಗೆ ಹಣ್ಣು ಸವಿದರು.

    15 ದಿನಗಳ ಬಳಿಕ ಮತ್ತೊಂದು ಮೇಳ: ದೇವನಹಳ್ಳಿ ಭಾಗದಲ್ಲಿ ಇನ್ನೂ 15 ದಿನಗಳ ನಂತರ ಹೆಚ್ಚಿನ ಮಾವಿನ ಸಲು ಬರುತ್ತದೆ. ಆಗ ಮತ್ತೊಮ್ಮೆ ಮಾವು ಮಾರಾಟ ಮೇಳ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ೋಷಿಸಿದರು.
    ಪ್ರಸ್ತುತ ಮೇಳದಲ್ಲಿ ದೇವನಹಳ್ಳಿ ಭಾಗದ ಮಾವು ಬೆಳೆಗಾರರು ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಭಾಗದಲ್ಲಿ ಮಾವಿನ ಸಲು ಬರಲು ಇನ್ನೂ 15 ದಿನಗಳು ಬೇಕಾಗುತ್ತದೆ. ಆದ್ದರಿಂದ, ಆಗ ಮತ್ತೊಮ್ಮೆ ಮೇಳ ಆಯೋಜಿಸುವ ಇರಾದೆ ಇರುವುದಾಗಿ ಸ್ಪಷ್ಟಪಡಿಸಿದರು.

    ವಿಮಾನ ನಿಲ್ದಾಣದಲ್ಲಿ ಶಾಶ್ವತ ಮಳಿಗೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾಶ್ವತವಾಗಿ ಮಾವು, ಹಲಸು, ಚಕ್ಕೋತ ಮಾರಾಟ ಮಳಿಗೆ ಆರಂಭಿಸಲು ಅವಕಾಶ ನೀಡುವಂತೆ ರೈತರು ಮನವಿ ಮಾಡಿಕೊಂಡಿದ್ದಾರೆ. ಆದಷ್ಟು ಬೇಗ ವಿಮಾನ ನಿಲ್ದಾಣದ ಅಧಿಕಾರಿಗಳ ಜತೆ ಮಾತುಕತೆ ನಡೆಸಿ, ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

    ದ್ರಾಕ್ಷಿ ಶೀತಲ ಕೇಂದ್ರ ಸ್ಥಾಪನೆಗೆ ಸೂಚನೆ: ಮಾವು ಮತ್ತು ಹಲಸು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಪ್ರಸ್ತುತ ಆಯೋಜಿಸಿರುವ ಮೇಳ ಮೂರು ದಿನ ನಡೆಯಲಿದೆ. ನೈಸರ್ಗಿಕವಾಗಿ ಮಾಗಿದ ಮಾವು ಮತ್ತು ಹಲಸಿನಹಣ್ಣುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರದರ್ಶನದಲ್ಲಿ 70ಕ್ಕೂ ಹೆಚ್ಚು ಬಗೆಯ ಹಣ್ಣುಗಳನ್ನು ಪ್ರದರ್ಶಿಸಲಾಗಿದೆ ಎಂದು ಹೇಳಿದರು. ಮೇಳ ವೀಕ್ಷಿಸಿದ ಅವರು, ಈ ಭಾಗದಲ್ಲಿ ದ್ರಾಕ್ಷಿ ಶೀತಲ ಕೇಂದ್ರ ಸ್ಥಾಪಿಸುವ ಅವಶ್ಯಕತೆ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದ್ದೇನೆ. ಈ ವಿಷಯದಲ್ಲಿ ಸರ್ಕಾರದ ಮೇಲೂ ಒತ್ತಡ ತರುವುದಾಗಿ ಶಾಸಕ ಹೇಳಿದರು.

    ಎಡಿಸಿ ವಿಜಯಾ ಈ.ರವಿಕುಮಾರ್, ಜಿಪಂ ಸಿಇಒ ರೇವಣಪ್ಪ, ತೋಟಗಾರಿಕಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಗುಣವಂತ, ಸಹಾಯಕ ನಿರ್ದೇಶಕ ಉಮಾಪತಿ, ಅಧಿಕಾರಿ ಮಂಜುಳಾ, ತಾಪಂ ಇಒ ವಸಂತಕುಮಾರ್, ಮುಖ್ಯಾಧಿಕಾರಿ ಎ.ಎಚ್. ನಾಗರಾಜ್, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎಂ. ರವಿಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ನೀಲೇರಿ ಮಂಜುನಾಥ್, ಪುರಸಭೆ ಅಧ್ಯಕ್ಷೆ ಗೋಪಮ್ಮ, ಗ್ರಾಪಂ ಅಧ್ಯಕ್ಷ ಹುರಳಗುರ್ಕಿ ಶ್ರೀನಿವಾಸ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts