More

    ಮಾರ್ಗಸೂಚಿಯಂತೆ ಕರೊನಾ ನಿಯಂತ್ರಣಕ್ಕೆ ಕ್ರಮ

    ಶಿಡ್ಲಘಟ್ಟ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನ ಮತ್ತು ಮಾರ್ಗಸೂಚಿಗಳನ್ವಯ ಕರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಪಂ ಸಿಇಒ ೌಜೀಯಾ ತರನ್ನುಮ್ ತಿಳಿಸಿದರು.

    ತಾಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಗೆ ಗುರುವಾರ ಭೇಟಿ ನೀಡಿ ನರೇಗಾ ಅನುಷ್ಠಾನ ಮತ್ತು ಕರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದರು.

    ಜಿಲ್ಲೆಯ ಎಲ್ಲ ತಾಲೂಕು ಕೇಂದ್ರದಲ್ಲಿ ಕರೊನಾ ಕೇರ್ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಹಾಯವಾಣಿ(ಹೆಲ್ಪ್‌ಡೆಸ್ಕ್) ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರು ಮಾಹಿತಿ ನೀಡಿದ ತಕ್ಷಣವೇ ಆಯಾ ವ್ಯಾಪ್ತಿಯ ಆಶಾ ಕಾರ್ಯಕರ್ತರ ಮೂಲಕ ಕ್ರಮ ವಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

    ಸಾರ್ವಜನಿಕರು ಸ್ವಯಂಜಾಗೃತರಾಗಿ ಮನೆಯಿಂದ ವಿನಾಕಾರಣ ಹೊರಬರುವುದು ಬಿಟ್ಟು ಅಗತ್ಯವಿದ್ದರೆ ಮಾತ್ರ ಹೊರಬರಬೇಕು. ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.

    ಅಂತರ್ಜಲಮಟ್ಟ ವೃದ್ಧಿಗೊಳಿಸಲು ಉದ್ಯೋಗಖಾತ್ರಿ ಯೋಜನೆಯಲ್ಲಿ ಕಲ್ಯಾಣಿಗಳ ಪುನಃಶ್ಚೇತನ, ಬದುಗಳ ನಿರ್ಮಾಣ, ಕೆರೆಗಳು ಮತ್ತು ಕಾಲುವೆಗಳ ಅಭಿವೃದ್ಧಿ, ರೈತರ ಜಮೀನುಗಳಲ್ಲಿ ಕೃಷಿಹೊಂಡಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಮಳೆ ನೀರಿನ ಸಂರಕ್ಷಣೆಗೆ ಚೆಕ್‌ಡ್ಯಾಂಗಳ ಜತೆಗೆ ಸೋಕ್‌ಫಿಟ್‌ಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗಿದೆ. ಪೂರ್ವಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಬಲಗೊಳಿಸಲು ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು.

    ವೈ.ಹುಣಸೇನಹಳ್ಳಿ ಪಿಡಿಒ ಸಿದ್ದಣ್ಣ, ಕರವಸೂಲಿಗಾರ ಶ್ರೀನಿವಾಸ್‌ರೆಡ್ಡಿ, ಡಿಇಒ ನಂದಿನಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts