More

    ‘ಮಾರ್ಕ್‌ಎಆರ್’ ಆಪ್ ಮೂಲಕ ಗಾಂಧೀಜಿ ಜೀವನ ಅನುಭವ

    ಬೆಂಗಳೂರು:

    ನಾವು ಸುಧಾರಿತ ತಂತ್ರಜ್ಞಾನ ಯುಗದಲ್ಲಿದ್ದು ಪ್ರತಿಯೊಂದು ಮೊಬೈಲ್-ಫೋನ್ ಪ್ರೇರಿತವಾಗಿದೆ. ಗಾಂಧೀಜಿಯವರ ಜೀವನವನ್ನು ‘ಮಾರ್ಕ್‌ಎಆರ್’ ಮೂಲಕ ಪ್ರಸ್ತುತಪಡಿಸುವ 4ಪಾಯಿಂಟ್2 ಟೆಕ್ನಾಲಜೀಸ್ ಸಂಸ್ಥೆಯು ಪ್ರಯತ್ನ ಉತ್ತಮವಾಗಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

    ಗಾಂಧಿ ಜಯಂತಿ ಅಂಗವಾಗಿ ಎಂ.ಜಿ.ರಸ್ತೆಯ ಮಹಾತ್ಮ ಗಾಂಧಿ ಉದ್ಯಾನದಲ್ಲಿ ಬೆಂಗಳೂರು ಮೂಲದ 4 ಪಾಯಿಂಟ್ 2 ಟೆಕ್ನಾಲಜೀಸ್ ಸಂಸ್ಥೆಯು ಆಯೋಜಿಸಿದ ಗಾಂಧಿಜಯಂತಿ ಕಾರ್ಯಕ್ರಮದಲ್ಲಿ ಸಂಸ್ಥೆ ರೂಪಿಸಿರುವ ‘ಮಾರ್ಕ್‌ಎಆರ್’ ಆಪ್ ಮೂಲಕ ಗಾಂಧಿಜೀ ಸಂದೇಶ, ಭಾಷಣಗಳು, ಚಿತ್ರಗಳನ್ನು ವೀಕ್ಷಿಸಿ ಈ ಕುರಿತು ಮಾತನಾಡಿದರು.

    ‘ಮಾರ್ಕ್‌ಎಆರ್’ ಆಪ್ ಮೂಲಕ ಸಾರ್ವಜನಿಕರು ಮತ್ತು ಮಕ್ಕಳು ಈ ಶ್ರೇಷ್ಠ ನಾಯಕನನ್ನು ಸಂವಹನಪೂರ್ವಕ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಗಾಂಧೀಜಿ ಕುರಿತ ಹಲವು ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿದುಕೊಳ್ಳಲು ಈ ಆೃಪ್ ಸಹಕಾರಿಯಾಗಿದೆ. ಮಹಾತ್ಮ ಗಾಂಧೀಜಿ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳಬೇಕು. ಈ ಆಪ್‌ನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts