More

    ಮಾನಸಿಕ ಅಸ್ವಸ್ಥೆ, ಮಗ ಪುನರ್ವಸತಿ ಕೇಂದ್ರಕ್ಕೆ

    ಆನಂದಪುರ: ಇಲ್ಲಿನ ಮುರುಘಾಮಠದಲ್ಲಿ ಕಳೆದ ಐದು ದಿನಗಳಿಂದ ಆಶ್ರಯ ಪಡೆದಿದ್ದ ಮಾನಸಿಕ ಅಸ್ವಸ್ಥೆ ಮತ್ತು ಅವರ ನಾಲ್ಕು ವರ್ಷದ ಮಗನನ್ನು ಶಿವಮೊಗ್ಗದ ಮಂದಮತಿಯರ ಪುನರ್ವಸತಿ ಕೇಂದ್ರಕ್ಕೆ ಶನಿವಾರ ದಾಖಲಿಸಲಾಗಿದೆ.
    ಮಠಕ್ಕೆ ಕಳೆದ ಮಂಗಳವಾರ ಹುಬ್ಬಳ್ಳಿ ನಿವಾಸಿ ಮನಸ್ವಿನಿ ಹಿರೇಮಠ ಎಂಬ ಮಹಿಳೆ ತನ್ನ ನಾಲ್ಕು ವರ್ಷದ ಗಂಡು ಮಗು ಅದ್ವಿತ್ ಜತೆ ಬಂದಿದ್ದರು. ವಾರ್ಡನ್ ಜಿತೇಂದ್ರ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ನೀಡಿದ್ದರು. ಮನಸ್ವಿನಿ ಕುರಿತು ಅಲ್ಲಲ್ಲಿ ಮಾಹಿತಿ ನೀಡಿದ್ದರು. ಶನಿವಾರದವರೆಗೆ ಮಹಿಳೆಯನ್ನು ಕರೆದುಕೊಂಡು ಹೋಗಲು ಯಾರೂ ಬಾರದ ಕಾರಣ ಜಿತೇಂದ್ರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾನಸಿಕ ಅಸ್ವಸ್ಥೆ ಮಠದಲ್ಲಿ ಆಶ್ರಯ ಪಡೆದಿರುವ ವಿಚಾರ ತಿಳಿದ ಮಾನವ ಹಕ್ಕುಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎಸ್.ಶಶಿಕಾಂತ್, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್‌ನ ಬಿ.ಡಿ.ರವಿಕುಮಾರ್, ಸ್ವಾಮಿರಾವ್ ಗುಡವಿ, ರವೀಂದ್ರ ಪ್ರಸಾದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂತೋಷ್ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ನಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂತೋಷ್ ನೇತೃತ್ವದಲ್ಲಿ ಮಹಿಳೆ ಮತ್ತು ಆಕೆಯ ಮಗನನ್ನು ಪೊಲೀಸರ ಉಪಸ್ಥಿತಿಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ನಂತರ ಮಂದಮತಿಯರ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts