More

    ಮಾನವೀಯತೆಗೆ ದಯೆ ಕಿರೀಟವಿದ್ದಂತೆ

    ಹಾವೇರಿ: ಇತಿಹಾಸದಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಹಲವಾರು ಕ್ರಾಂತಿಗಳು ನಡೆದಿವೆ. ಸತ್ಯ ಮತ್ತು ದಯೆ ಜಗತ್ತನ್ನು ನೋಡುತ್ತಿರುವ ಎರಡು ಕಣ್ಣುಗಳು. ಅದರಲ್ಲೂ ದಯೆ ಮಾನವೀಯ ಮೌಲ್ಯಗಳಿಗೆಲ್ಲ ಕಿರೀಟವಿದ್ದಂತೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

    ನಗರದ ಬಸವಕೇಂದ್ರ ಹೊಸಮಠದಲ್ಲಿ ಶನಿವಾರ ಆಯೋಜಿಸಿದ್ದ ಮಹಾತಪಸ್ವಿ ಶ್ರೀಮುರುಘೕಂದ್ರ ಮಹಾಶಿವಯೋಗಿಗಳ ಜಯಂತಿ ನಿಮಿತ್ತ ಅವರ ಪುತ್ಥಳಿಗೆ ಪುಷ್ಪಾರ್ಚನೆ ಹಾಗೂ ವಚನ ಸಾಹಿತ್ಯ ಪಲ್ಲಕ್ಕಿ ಉತ್ಸವ ಆಚರಣೆಗೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.

    ಪ್ರತಿಯೊಬ್ಬರಲ್ಲಿ ಧಾರ್ವಿುಕ ಮೌಲ್ಯಗಳು ಚಿಗುರೊಡೆಯಬೇಕು. ಪ್ರಾಣವಿಲ್ಲದ ವಸ್ತು ಜಡ. ಅಂತೆಯೇ ದಯೆ ಇಲ್ಲದ ಧರ್ಮವು ಜಡ. ಸತ್ಯ ನಮ್ಮ ನಡೆ ಆಗಬೇಕು. ಧರ್ಮ ನಮ್ಮ ಜೀವನದ ಪದ್ಧತಿಯಾಗಬೇಕು. ಹೀಗೆ ಸತ್ಯ, ಧರ್ಮ, ದಯೆಯನ್ನು ಅಳವಡಿಸಿಕೊಂಡವನು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗುತ್ತಾನೆ ಎಂದರು.

    ಧರ್ಮವು ಮಂದಿರ, ಮಸೀದಿ, ಚರ್ಚ್​ಗಳಲ್ಲಿ ಪಠಿಸುವ ವಸ್ತುವಾಗಬಾರದು. ಸರ್ವಜನಾಂಗದ ಭಾವನೆಗಳಿಗೆ ಸ್ಪಂದಿಸಬೇಕು. ಅದುವೇ ವಿಶ್ವಧರ್ಮ, ಮಾನವಧರ್ಮ, ಕ್ರಿಯಾಶೀಲ ಧರ್ಮವಾಗಿದೆ. ಮೌನದ ಮೂಲಕ ಶಾಂತಿಯ ಕ್ರಾಂತಿ ಮಾಡಿದವರು ಶ್ರೀ ಮುರುಘೕಂದ್ರ ಶಿವಯೋಗಿಗಳು ಎಂದರು.

    ಎಪಿಎಂಸಿ ಸದಸ್ಯ ರುದ್ರೇಶ ಚಿನ್ನಣ್ಣನವರ, ನಾಗೇಂದ್ರ ಕಟಕೋಳ, ಪರಮೇಶ್ವರಪ್ಪ ಮೇಗಳಮನಿ, ರಾಜೇಂದ್ರ ಸಜ್ಜನರ, ಮುರಿಗೆಪ್ಪ ಕಡೆಕೊಪ್ಪ, ಜಯದೇವ ಕೆರೂಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts