More

    ಮಾನವನನ್ನು ಮಾಧವನಾಗಿಸುವ ಮಾತೃಭಾಷೆ

    ಅಜ್ಜಂಪುರ: ಮಾನವನನ್ನು ಮಾಧವನಾಗಿ ರೂಪಿಸುವುದೇ ಮಾತೃಭಾಷೆ ಎಂದು ಸಾಣೇಹಳ್ಳಿ ಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಚಿಕ್ಕಾನವಂಗಲ ಗ್ರಾಮದಲ್ಲಿ ಶನಿವಾರ ನಡೆದ ಮೂರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯವಹಿಸಿ ಮಾತನಾಡಿದರು.

    ಮಾತೃಭಾಷೆಯು ಬದುಕಲು ಧರ್ಮ, ಸಂಸ್ಕೃತಿಯನ್ನು ನೀಡಿದೆ. ನಾಡು ಅನ್ನ, ನೀರು, ಗಾಳಿಯನ್ನು ಕೊಟ್ಟಿದೆ. ಈಮೂಲಕ ಕನ್ನಡ ಹೃದಯದ ಭಾಷೆಯಾಗಿದೆ. ಮಾತೃಭಾಷೆ ಮರೆತರೆ ನಮ್ಮ ಸಂಸ್ಕೃತಿ ಮರೆತಂತೆ. ಇದರ ಉಳಿವಿಗಾಗಿ ಹೋರಾಡಿದರೆ ಅದು ಎಲ್ಲವನ್ನೂ ಕೊಡುತ್ತದೆ ಎಂದು ಹೇಳಿದರು.

    12ನೇ ಶತಮಾನದಲ್ಲಿಯೇ ಶರಣರು ಸಮಾಜದ ಗೊಡ್ಡು ಸಂಪ್ರದಾಯ ಹೋಗಲಾಡಿಸಲು ವಚನಗಳ ಮೂಲಕ ಶ್ರಮಿಸಿದರು. ಜೀವನದಲ್ಲಿ ಅಂತರಂಗ-ಬಹಿರಂಗ ಶುದ್ಧವಾಗಿದ್ದಲ್ಲಿ ಉತ್ತಮ ಮನುಷ್ಯನಾಗಿ ರೂಪುಗೊಳ್ಳಲು ಸಾಧ್ಯ. ಕಥೆ, ಕಾದಂಬರಿ, ಭಾವಗೀತೆ, ಭಕ್ತಿ್ತೕತೆ, ಜಾನಪದ ಗೀತೆಗಳ ಸಮ್ಮಿಲನವೇ ಕನ್ನಡ ಭಾಷೆ. ಮನುಷ್ಯ ಪರಂಪರೆ, ಸಂಸ್ಕೃತಿ ಮರೆತರೆ ಮೃಗವಾಗುತ್ತಾನೆ. ಮಾತೃಭಾಷೆ ಮೇಲೆ ಗೌರವ, ಅಭಿಮಾನ ಹೊಂದಬೇಕಲ್ಲದೆ ಬಳಸುವ ಮೂಲಕ ಸಂಸ್ಕೃತಿಯನ್ನು ಶ್ರೀಮಂತಗೊಳಿಸಬೇಕು ಎಂದು ಸಲಹೆ ನೀಡಿದರು.

    ತಹಸೀಲ್ದಾರ್ ಸುಮಾ ಜೋಷಿ ರಾಷ್ಟ್ರಧ್ವಜವನ್ನು, ಕಸಾಪ ತಾಲೂಕು ಅಧ್ಯಕ್ಷ ಎಚ್.ಆರ್.ಚಂದ್ರಪ್ಪ ಪರಿಷತ್ ಧ್ವಜವನ್ನು, ಪ್ರಾಚಾರ್ಯ ರಾಜಣ್ಣ ನಾಡ ಧ್ವಜಾರೋಹಣ ನೆರವೇರಿಸಿದರು. ಮೆರವಣಿಗೆಗೆ ಢಣಾಯಕಪುರ ಗಂಗಾಧರಪ್ಪ ಚಾಲನೆ ನೀಡಿದರು. ಮಹಾದ್ವಾರವನ್ನು ಸಿ.ಬಿ.ಒಂಕಾರಯ್ಯ, ಮಹಾಮಂಟಪವನ್ನು ಸಿ.ಎಸ್.ವಿರೂಪಾಕ್ಷಪ್ಪ ಉದ್ಘಾಟಿಸಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಶಾ ಕಾರ್ಯಕರ್ತರು, ಭಜನಾ ತಂಡ, ಶಿವ ಮತ್ತು ಬಸವೇಶ್ವರ ಕ್ರೀಡಾ ಸಂಘ, ಗೆಳೆಯರ ಬಳಗ ರಂಗ ತಂಡ, ಕಸಾಪ ಮಹಿಳಾ ಘಟಕ, ಸ್ಪೂರ್ತಿ ಮಹಿಳಾ ಸಂಘ, ರುದ್ರೇಶ್ವರ ಪ್ರೌಢಶಾಲೆ, ಚಿಕ್ಕಾನವಂಗಲ, ಜಾವೂರು, ಜಲಧಿಹಳ್ಳಿ, ಹಿರೇಕಾನವಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮ್ಮೇಳನದ ಯಶಸ್ಸಿಗೆ ಸಹಕಾರ ನೀಡಿದವು. ನಿವೃತ್ತ ಶಿಕ್ಷಕ ಹ.ಪುಟ್ಟಸ್ವಾಮಿ, ಶಿಕ್ಷಕ ಈಶ್ವರಪ, ಎ.ಸಿ.ಚಂದ್ರಪ್ಪ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts