More

    ಮಾಧ್ಯಮಗಳು ಸದ್ವಿಚಾರ ವಾಹಕವಾಗಲಿ  -ಬ್ರಹ್ಮಾಕುಮಾರಿ ನಿರ್ಮಲಾ ಹೇಳಿಕೆ – ಮಾಧ್ಯಮ ಮಾಣಿಕ್ಯ ಪ್ರಶಸ್ತಿ ಪ್ರದಾನ 

    ದಾವಣಗೆರೆ: ಆಹಾರ, ಬಟ್ಟೆ, ವಸತಿಯಷ್ಟೇ ಮಾನವ ಜೀವನದ ಉದ್ದೇಶವಲ್ಲ. ಪಂಚೇಂದ್ರಿಯಗಳ ದಾಸ್ಯತೆಯಿಂದ ಮುಕ್ತರಾಗಬೇಕು. ಈ ದಿಸೆಯಲ್ಲಿ ಮಾಧ್ಯಮಗಳು ಸದ್ವಿಚಾರಗಳನ್ನು ಜನರ ಮನಸ್ಸಿಗೆ ಮುಟ್ಟಿಸಬೇಕು ಎಂದು ಹುಬ್ಬಳ್ಳಿ ವಲಯದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ಸಂಚಾಲಕಿ ಬ್ರಹ್ಮಾಕುಮಾರಿ ನಿರ್ಮಲಾ ಹೇಳಿದರು.
    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ನಗರದ ಲಯನ್ಸ್ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸ್ವಾತಂತ್ರೃ ಪೂರ್ವದಿಂದಲೂ ಸಮಾಜದ ಅಗತ್ಯಗಳಿಗೆ ಪತ್ರಿಕೋದ್ಯಮ ಸ್ಪಂದಿಸುತ್ತಿದೆ. ಸಮಾಜ-ದೇಶದ ಪರ ಜಾಗೃತಿ ಮೂಡಿಸುತ್ತ ಬಂದಿದೆ. ಮಹಾತ್ಮ ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಟ ನಡೆಸಿದಾಗ ಸಮಾಚಾರ ಪತ್ರಿಕೆಗಳೂ ನೆರವಾದವು. ನಂತರದಲ್ಲಿ ಮಾಧ್ಯಮಗಳು ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತ ಬಂದಿವೆ ಎಂದು ಹೇಳಿದರು.
    ಯಂತ್ರ-ತಂತ್ರಗಳು ಅಲ್ಪಸುಖ ನೀಡಲಿವೆ. ಶಾಂತಿಯ ಮೂಲಮಂತ್ರದಿಂದ ಮನುಜನಿಗೆ ನೆಮ್ಮದಿ ಸಿಗಲಿದೆ. ಧರ್ಮ ಮಾರ್ಗದ ಮೂಲಕ ಇದನ್ನು ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು.
    ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಮಾತನಾಡಿ ಪತ್ರಿಕೆಗಳು ಸಮಾಜದ ಕೆಡುಕುಗಳನ್ನು ತಿದ್ದಲು ನೆರವಾಗುತ್ತವೆ. ಸಮಸ್ಯೆಗಳನ್ನು ಮಾಧ್ಯಮಗಳು ಬೆಳಕಿಗೆ ತಂದಾಗ ಜನಪ್ರತಿನಿಧಿಗಳು ಅದರಿಂದ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಭಾವಿಸಿ ಕೆಲಸ ಮಾಡಬೇಕೆಂದರು.
    ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಪ್ರತಿಭಾವಂತ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಪ್ರತಿಭೆಗಳನ್ನು ಗುರುತಿಸುವುದರಿಂದ ಉನ್ನತ ಸಾಧನೆಗೆ ನೆರವಾಗಲಿದೆ ಎಂದು ಹೇಳಿದರು.
    ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಮಾತನಾಡಿ, ಜಿಲ್ಲಾ ಘಟಕವು ರಚನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದೆ, ಸದಸ್ಯರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದೆ. 30 ವರ್ಷದ ಬಳಿಕ ಜಿಲ್ಲೆಯಲ್ಲಿ ಮತ್ತೆ ರಾಜ್ಯ ಸಮಾವೇಶ ನಡೆಸುವ ಅವಕಾಶ ದೊರೆತಿದೆ ಎಂದರು.
    ಜವಳಿ ಉದ್ಯಮಿ ಬಿ.ಸಿ. ಉಮಾಪತಿ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ಎಲ್. ರಾಯ್ಕರ್, ತಂಜಿಂ ಮುಸ್ಲಿಮಿನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ದಾದುಸೇಠ್, ಪಾಲಿಕೆ ಸದಸ್ಯ ಕೆ. ಚಮನ್‌ಸಾಬ್, ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ನೀಲಿ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಚಂದ್ರಣ್ಣ, ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್, ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ. ಒಡೆಯರ್, ಶಾಂಭವಿ, ವೀರೇಶ್ ಪ್ರಸಾದ್, ಚಿದಾನಂದ ಇತರರಿದ್ದರು.
    ಪ್ರಶಸ್ತಿ ಪ್ರದಾನ:
    ವಿಜಯವಾಣಿ ಪತ್ರಿಕೆಯ ದಾವಣಗೆರೆ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್, ಪತ್ರಕರ್ತ ಸಿ. ವರದರಾಜು, ಹೇಮಚಂದ್ರ ಜೈನ್, ಎಸ್.ಜೆ. ಹನುಮಂತರಾಜ್, ಕೆ.ವಿ. ಪ್ರದೀಪ್, ಬಿ. ಅಣ್ಣಪ್ಪ, ಎಸ್.ಸುರೇಶ್‌ಬಾಬು, ಕೊಟ್ರೇಶ್ ಸೋಮನಹಳ್ಳಿ, ಬಿ.ಎಂ. ಸಿದ್ದಲಿಂಗಸ್ವಾಮಿ, ಡಿ. ಶ್ರೀನಿವಾಸ್, ಎನ್.ಕೆ. ಆಂಜನೇಯ, ಎಚ್.ವಿ. ನಟರಾಜ್ ಅವರಿಗೆ ಮಾಧ್ಯಮ ಮಾಣಿಕ್ಯ ಪ್ರಶಸ್ತಿ, ನಿವೃತ್ತ ನೌಕರ ಬಿ.ಎಸ್. ಬಸವರಾಜ್ ಅವರಿಗೆ ವಾರ್ತಾ ಮಾಧ್ಯಮ ಪ್ರಶಸ್ತಿ ನೀಡಲಾಯಿತು.
    ಎಸ್ಸೆಸ್ಸೆಲ್ಸಿ-ಪಿಯುಸಿ ಪ್ರತಿಭಾವಂತರು, ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದವರಿಗೆ ವಿದ್ಯಾಸಿರಿ, ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎ. ಫಕೃದ್ದೀನ್ ಸ್ವಾಗತಿಸಿದರು. ಎಚ್.ಅನಿತಾ-ಯಶೋದಾ ಅಗಡಿಮಠ ಕಾರ್ಯಕ್ರಮ ನಿರೂಪಿಸಿದರು. ಸಂಘದ ಖಜಾಂಚಿ ಎನ್.ವಿ. ಬದರಿನಾಥ್ ವಂದಿಸಿದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts