More

    ಮಾದರಿ ವಾಲ್ಮೀಕಿ ಭವನ ನಿರ್ವಣಕ್ಕೆ ಸಿದ್ಧತೆ

    ಹಿರೇಕೆರೂರ: ಪಟ್ಟಣದ ವಾಲ್ಮೀಕಿ ಭವನದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಅವರನ್ನು ತಾಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.

    ಸಾನ್ನಿಧ್ಯ ವಹಿಸಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಮೊದಲ ಹಂತದ 1 ಕೋಟಿ ರೂ. ಅನುದಾನದಲ್ಲಿ ವಾಲ್ಮೀಕಿ ಭವನದ ಕಟ್ಟಡ ಕಾಮಗಾರಿ ಮುಗಿದಿದ್ದು, ಈಗ ಮತ್ತೆ 1 ಕೋಟಿ ರೂ. ಮಂಜೂರಾಗಿದೆ. ಇನ್ನೂ 1.50 ಕೋಟಿ ರೂ. ಹೆಚ್ಚವರಿ ಅನುದಾನ ನೀಡಿ ಜಿಲ್ಲೆಯಲ್ಲಿಯೇ ಮಾದರಿ ವಾಲ್ಮೀಕಿ ಭವನ ನಿರ್ವಿುಸಲು ಸಂಬಂಧಪಟ್ಟ ಸಚಿವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ ಹಾಗೂ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಸಹಮತ ಸೂಚಿಸಿದ್ದಾರೆ ಎಂದು ತಿಳಿಸಿದರು.

    ಸಂಘದ ಅಧ್ಯಕ್ಷ ಜಿ.ಎಚ್. ತಳವಾರ ಅಧ್ಯಕ್ಷತೆ ವಹಿಸಿದ್ದರು.

    ಜಿ.ಪಂ. ಸದಸ್ಯ ಎನ್.ಎಂ. ಈಟೇರ, ವಾಲ್ಮೀಕಿ ನಾಯಕ ನೌಕರರ ಸಂಘದ ಅಧ್ಯಕ್ಷ ವೈ.ಪಿ. ಜಿಗಳೂರ, ಕಾರ್ಯದರ್ಶಿ ಪಿ.ಎಸ್. ಸಾಲಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ ಹುಲ್ಯಾಳ, ರಟ್ಟಿಹಳ್ಳಿ ತಾಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ತಳವಾರ, ಲಕ್ಷ್ಮಣ ನಾಯ್ಕರ್, ಹನುಮಂತಪ್ಪ ಮೇಗಳಮನಿ, ಆರ್.ಎಫ್. ಹುಲ್ಲತ್ತಿ, ರಮೇಶ ಚಿಕ್ಕೇರೂರ, ಲಿಂಗರಾಜ ನಾಯ್ಕರ್, ಜಿ.ಎಚ್. ಅಗಸಿಬಾಗಿಲ, ಐ.ಬಿ. ಕಡೇಮನಿ, ಜಿ.ಕೆ. ಸುಳಗನ್ನಿ, ಜಗದೀಶ ಗೋಣಗೇರಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts