More

    ಮಾದರಿ ಕ್ರೀಡಾ ವ್ಯವಸ್ಥೆಗೆ ಯೋಜನೆ

    ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಡಿ ನಗರದ ವಿವಿಧೆಡೆ 122 ಕೋ. ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಭಾನುವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಚಾಲನೆ ನೀಡಿದರು.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಲ್ಹಾದ ಜೋಶಿ, ಪಿಪಿಪಿ ಮಾದರಿಯಲ್ಲಿ ಕಾರ್ಪೆರೇಟ್ ವಲಯದ ನೆರವಿನೊಂದಿಗೆ ಸುಮಾರು 200 ಕೋ. ರೂ. ವೆಚ್ಚದಲ್ಲಿ ಉಣಕಲ್ ಕೆರೆ ದಂಡೆಯಲ್ಲಿ ಯಾಚಿಂಗ್, ಸರ್ಫಿಂಗ್, ಇತ್ಯಾದಿ ಜಲ ಕ್ರೀಡೆ ಹಾಗೂ ಗೋಕುಲ ರಸ್ತೆಯಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. 2028ರ ಒಲಿಂಪಿಕ್ಸ್ ಗುರಿಯಾಗಿಟ್ಟುಕೊಂಡು ಇಂಥದೊಂದು ಮಾದರಿ ಕ್ರೀಡಾ ವ್ಯವಸ್ಥೆ ರೂಪಿಸಲು ಯೋಚಿಸಿದ್ದೇವೆ ಎಂದು ತಿಳಿಸಿದರು. ಈ ಸಂಬಂಧ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಎಂಡಿ ಶಕೀಲ್ ಅಹ್ಮದ್ ಅವರಿಗೆ ಯೋಜನಾ ವರದಿ ತಯಾರಿಸಲು ಸೂಚಿಸಿದ್ದೇನೆ. 15ದಿನಗಳಲ್ಲಿ ಈ ಕುರಿತು ಪ್ರಗತಿ ಪರಿಶೀಲನೆ ನಡೆಸಲಿದ್ದೇವೆ ಎಂದರು. ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ 26.18 ಕೋ. ವೆಚ್ಚದಲ್ಲಿ ಪಾಲಿಕೆ ಒಡೆತನದ ಚಿಟಗುಪ್ಪಿ ಆಸ್ಪತ್ರೆ ಅಭಿವೃದ್ಧಿ ನವೀಕರಣ ಹಾಗೂ ಆಡಳಿತ ಕಚೇರಿ ನಿರ್ವಣ, 20.26 ಕೋ. .ಲ್ಲಿ ನೆಹರು ಕ್ರೀಡಾಂಗಣದ ಅಭಿವೃದ್ಧಿ, 50.75 ಕೋ. ಯಲ್ಲಿ 5.08 ಕಿ.ಮೀ ಸ್ಮಾರ್ಟ್ ರಸ್ತೆ ನಿರ್ವಣ, 5.38 ಕೋ. ನಲ್ಲಿ ಗಣೇಶ ಪೇಟೆಯ ಮೀನು ಮಾರುಕಟ್ಟೆ ಹೊಸ ಕಟ್ಟಡ, 4.60 ಕೋ. ವೆಚ್ಚದಲ್ಲಿ ಮ್ಯಾದಾರ ಓಣಿಯ ರ್ಪಾಂಗ್ ಹಾಗೂ ಡಿಸ್ಪೆನ್ಸರಿ ಕಾಮಗಾರಿ, 14.83 ಕೋ. ಯಲ್ಲಿ ಉಣಕಲ್ ಕೆರೆ ಅಭಿವೃದ್ಧಿ ಹಂತ-1ರ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಈಗಾಗಲೇ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ವಿವರಿಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ರಂಗಾ ಬದ್ದಿ, ಪ್ರಭು ನವಲಗುಂದಮಠ, ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ, ಸ್ಮಾರ್ಟ್ ಸಿಟಿ ಎಂಡಿ ಶಕೀಲ್ ಅಹ್ಮದ್, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts