More

    ಮಾದಕ ವ್ಯಸನಿಯಿಂದ ಸಮಾಜದ ನೆಮ್ಮದಿ ಹಾಳು : ಪ್ರಾಧ್ಯಾಪಕ ಧರ್ಮೇಶ್ ಬೇಸರ


    ಮೈಸೂರು : ಯುವಸಮೂಹ ಮಾದಕ ವ್ಯಸನಕ್ಕೆ ದಾಸರಾಗುವುದನ್ನು ತಪ್ಪಿಸಲು ಯುವಕರೇ ಮುಂದಾಗಬೇಕು ಎಂದು ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಧರ್ಮೇಶ್ ಸಲಹೆ ನೀಡಿದರು.

    ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವತಿಯಿಂದ ನಶ ಮುಕ್ತ ಭಾರತ ಕುರಿತಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.


    ಆಧುನಿಕ ಜೀವನಶೈಲಿಯನ್ನು ಅಪ್ಪಿಕೊಳ್ಳುವ ಭರಾಟೆಯಲ್ಲಿ ಯುವಸಮೂಹ ಮಾದಕವ್ಯಸನಿಗಳಾಗುತ್ತಿದ್ದಾರೆ. ಮಾದಕ ವ್ಯಸನಿಯೊಬ್ಬ ತನ್ನ ಬದುಕನ್ನು ಮಾತ್ರ ನಾಶ ಮಾಡಿಕೊಳ್ಳುವುದಿಲ್ಲ. ಬದಲಾಗಿ ಇಡೀ ಸಮುದಾಯದ ಸುಖ ಸಂತೋಷ, ಸೌಹಾರ್ದತೆಯನ್ನು ಹಾಳುಗೆಡವುತ್ತಾನೆ. ದೇಶದಲ್ಲಿ ಮಾದಕ ವಸ್ತುಗಳ ಮಾರಾಟದಿಂದ ವಾರ್ಷಿಕ 9 ಸಾವಿರ ಕೋಟಿ ರೂ.ಗಳ ಆದಾಯ ಸರ್ಕಾರದ ಖಜಾನೆ ಸೇರುತ್ತಿದೆ. ಆದರೆ 30 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣ ಮಾದಕ ವ್ಯಸನದಿಂದ ಕ್ಯಾನ್ಸರ್ ಸೇರಿದಂತೆ ಭೀಕರ ರೋಗಗಳಿಗೆ ತುತ್ತಾದವರ ಚಿಕಿತ್ಸೆಗೆ ವ್ಯಯಿಸಲಾಗುತ್ತಿದೆ. ಸಮಾಜದಲ್ಲಿ ಅಶಾಂತಿ, ಕೊಲೆ ಸುಲಿಗೆಯಂತಹ ಪ್ರಕರಣಗಳು ಹೆಚ್ಚಾಗುತ್ತವೆ. ಯುವ ಸಂಘಟನೆಗಳು ಬೀದಿನಾಟಕ, ಅರಿವು, ಜಾಥಾ ಮುಂತಾದವುಗಳನ್ನು ಆಯೋಜಿಸಿ ಜಾಗೃತಿ ಮೂಡಿಸಬೇಕು. ದೇಶದ ದೊಡ್ಡ ಪಿಡುಗನ್ನು ಹೋಗಲಾಡಿಸಲು ಯುವಕರೇ ಮುಂದೆ ಬರಬೇಕೆಂದು ಆಶಿಸಿದರು.


    ಪ್ರಾಂಶುಪಾಲ ಡಾ.ವೆಂಕಟೇಶಯ್ಯ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಸಯ್ಯದ್ ರಿಯಾಜ್ ಪಾಷಾ ಮಾತಾಡಿದರು. ಐಕ್ಯೂಎಸಿ ಸಂಚಾಲಕ ಡಾ.ಬಸವರಾಜು ಸೇರಿದಂತೆ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts