More

    ಮಾದಕ ವಸ್ತು ಪತ್ತೆಯಾದರೆ ಶಿಸ್ತು ಕ್ರಮ

    ಚಿತ್ರದುರ್ಗ: ಮಾದಕ ವಸ್ತುಗಳ ನಿಯಂತ್ರಣ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಪ್ರತಿ ಅಧಿಕಾರಿಯೂ ಕೂಡ ತೀವ್ರ ನಿಗಾ ವಹಿಸಬೇಕೆಂದು ಡಿಸಿ ಟಿ.ವೆಂಕ ಟೇಶ್ ಹೇಳಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಮಾದಕ ವಸ್ತುಗಳ ನಿಯಂತ್ರಣ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಯುವ ಜನರನ್ನು ಗುರಿಯಾಗಿಸಿಕೊಂಡು ಇಂಜಿನಿಯರಿಂಗ್,ಮೆಡಿಕಲ್ ಕಾಲೇಜುಗಳು,ಉನ್ನತ,ವೃತ್ತಿ ಶಿಕ್ಷಣ ಕಾಲೇಜುಗಳು ಸೇರಿ ಇತರೆ ಪ್ರದೇಶಗಳಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ಮಾರಾಟ ನಡೆಯುವ ಸಂಭವ ಹೆಚ್ಚಾಗಿರುತ್ತದೆ.
    ಆದ್ದರಿಂದ ಶಾಲಾ-ಕಾಲೇಜು ಕ್ಯಾಂಪಸ್‌ಗಳ ಬಳಿ ತೀವ್ರ ನಿಗಾ ವಹಿಸಬೇಕು. ಹಾಸ್ಟೆಲ್‌ಗಳಿಗೂ ಭೇಟಿ ನೀಡಿ ತಪಾಸಣೆ ನಡೆಸಬೇಕು. ಹಾಸ್ಟೆಲ್ ಗಳಿಗೆ ಬರುವಂಥ ಸಂಶಯಾಸ್ಪದ ವ್ಯಕ್ತಿಗಳೆಡೆ ನಿಗಾ ವಹಿಸಬೇಕು. ಸಿಸಿ ಕ್ಯಾಮರಾಗಳೊಂದಿಗೆ ಪರಿಶೀಲಿಸಬೇಕು. ಪೊಲೀಸರ ಕಾರ್ಯಾಚರಣೆ ಯಲ್ಲಿ ಶಾಲಾ,ಕಾಲೇಜು ಬಳಿ ಹಾಗೂ ಹಾಸ್ಟೆಲ್‌ಗಳಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆಯಾದರೆ,ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು ಎಂದು ಡಿಸಿ ಎಚ್ಚರಿಸಿದರು.
    ಮಾದಕ ವಸ್ತುಗಳ ಚಟುವಟಿಕೆಗಳೆಡೆ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ ಎಂದು ಎಸ್‌ಪಿ ಧರ್ಮೆಂದರ್‌ಕುಮಾರ್ ಮೀನಾ ಹೇಳಿದರು. ಎನ್‌ಡಿಪಿಎಸ್ ಕಾಯ್ದೆ ಅತ್ಯಂತ ಕಠಿಣವಾಗಿದೆ. ಮಾದಕ ವಸ್ತು ಸೇವನೆ ಸಾಬೀತಾದರೆ ಶಿಕ್ಷೆ ಖ ಚಿತ. ಮಾದಕ ವಸ್ತು ಸೇವನೆ, ಮಾರಾಟ,ಸಾಗಾಣಿಕೆ ಹಾಗೂ ಖರೀದಿಗೆ ಹಣ ಸಹಾಯ ನೀಡಿದವರ ವಿರುದ್ಧವೂ ಎಫ್‌ಐಆರ್ ದಾಖಲಿಸಿ ಶಿಕ್ಷೆಗೆ ಗುರಿ ಪಡಿಸಲು ಅವಕಾಶವಿದೆ ಎಂದರು.
    ಗಾಂಜಾ,ಇತರೆ ಮಾದಕ ವಸ್ತುಗಳ ಹೊರತಾಗಿ,ಸಲೂಷನ್,ವೈಟ್ನರ್,ಕೆಲವು ಕೆಮ್ಮಿನ ಔಷಧಗಳ ಬಳಕೆ ಆಗುತ್ತಿದೆ. ಶಿಕ್ಷಕರು,ಪ್ರಾಂಶುಪಾಲರು ಹಾಗೂ ಪಾಲಕರು ನಿಗಾ ವಹಿಸಬೇಕು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಜಿಲ್ಲೆಗೆ ಗಾಂಜಾ ಸರಬರಾಜು ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಡಿಸೆಂಬರ್‌ನಲ್ಲಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗುವುದು. ಗಾಂಜಾ ಮಾರಾಟ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕೆಂದರು.
    ಕೃಷಿ ಅಧಿಕಾರಿಗಳಿಗೆ ತರಬೇತಿ
    ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ಮಾತನಾಡಿ,ಹಿರಿಯೂರು ಬಬ್ಬೂರು ಫಾರಂನಲ್ಲಿ ಕೃಷಿ ಅಧಿಕಾರಿಗಳು ಹಾಗೂ ಬೆಳೆ ಸಮೀಕ್ಷೆ ಮಾ ಡುವವರಿಗೆ ಗಾಂಜಾ ಬೆಳೆ ಗುರುತಿಸಿ,ಪೊಲೀಸರಿಗೆ ಮಾಹಿತಿ ನೀಡುವ ಕುರಿತಂತೆ ತರಬೇತಿ ನೀಡಲಾಗಿದೆ. ಬೋರ್‌ವೆಲ್ ಸೌಲಭ್ಯ ವಿರುವೆಡೆ ಕೆಲವು ಜಮೀನುಗಳಲ್ಲಿ ಗಾಂಜಾ ಬೆಳೆಯುವ ಸಾಧ್ಯತೆ ಇದೆ. ಕೃಷಿ ಅಧಿಕಾರಿಗಳು ಗಮನ ಹರಿಸಿ,ಕ್ರಮಕ್ಕೆ ಮುಂದಾಗ ಬೇಕೆಂದರು.
    ವೈದ್ಯರ ಶಿಫಾರಸ್ಸಿಲ್ಲದೆ ಕೆಮ್ಮಿನ ಔಷಧ ಮಾರಾಟ ಮಾಡಬಾರದು. ಕಾಲಕಾಲಕ್ಕೆ ಔಷಧ ಅಂಗಡಿಗಳ ಸ್ಟಾಕ್‌ಬುಕ್ ಪರಿಶೀಲಿಸಬೇಕು. ಎಲ್ಲ ಔಷಧ ಅಂಗಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಮಾಲೀಕರಿಗೆ ಸೂಚಿಸುವಂತೆ ಸಹಾಯಕ ಔಷಧ ನಿಯಂತ್ರಕರಿಗೆ ಎಸ್‌ಪಿ ತಿಳಿಸಿದರು. ಅಬ ಕಾರಿ ಇಲಾಖೆ ಉಪಆಯುಕ್ತ ಬಿ.ಮಾದೇಶ್,ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್,ವಿವಿಧ ಕಾಲೇಜುಗಳು ಪ್ರಾಂಶುಪಾಲರು, ಮುಖ್ಯಸ್ಥರು ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts