More

    ಮಾತೃಭಾಷೆಯೇ ಅತ್ಯಂತ ಶ್ರೇಷ್ಠ

    ಚಿತ್ರದುರ್ಗ: ಪ್ರತಿಯೊಬ್ಬರಿಗೂ ಮಾತೃಭಾಷೆ ಅತಿಮುಖ್ಯವಾಗಿದ್ದು, ಜೀವನದ ಅಸ್ಮಿತೆಯಾಗಬೇಕು ಎಂದು ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

    ಜೋಗಿಮಟ್ಟಿ ರಸ್ತೆಯಲ್ಲಿ ಜೋಗಿಮಟ್ಟಿ ಗೆಳೆಯರ ಬಳಗದಿಂದ 9ನೇ ವರ್ಷದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ತಾಯಿ ಭುವನೇಶ್ವರಿ ದೇವಿಯ ಮಹಾಪೂಜೆ, ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

    ದೇಶದೊಳಗೆ ಭಾಷೆ ಆಧಾರದಲ್ಲಿ ರಾಜ್ಯಗಳಾಗಿ ವಿಂಗಡಣೆಯಾಗಿದೆ. ನಮ್ಮ ನಾಡಲ್ಲೇ ಕನ್ನಡ ವಿವಿಧ ಶೈಲಿಯಲ್ಲಿದ್ದು. ಮಾತೃಭಾಷೆಗಿಂತ ಶ್ರೇಷ್ಠವಾದುದು ಯಾವುದೂ ಇಲ್ಲ ಎಂದರು.

    ಪ್ರಶಸ್ತಿ ಪ್ರದಾನ: ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನ ಸಹಯೋಗದೊಂದಿಗೆ ಮೈಸೂರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಎಸ್‌ಪಿ ಡಾ.ಬಿ.ಟಿ.ಕವಿತಾ ಅವರಿಗೆ ವೀರವನಿತೆ ಒನಕೆ ಓಬವ್ವ, ಪತ್ರಕರ್ತ ವಿಜಯ್ ಭರಮಸಾಗರ ಅವರಿಗೆ ಮಾಧ್ಯಮ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಇದೇ ವೇಳೆ ಹೃದಯ ತಪಾಸಣೆ, ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ನಡೆಯಿತು. ವಿವಿಧ ಕ್ಷೇತ್ರದ ಸಾಧಕರಾದ ದೊರೆಸ್ವಾಮಿ, ಪೈಲ್ವಾನ್ ಮರಡಪ್ಪ, ಪೈಲ್ವಾನ್ ತಿಪ್ಪೇಶ್, ಟಿ.ಕವನಾ, ಡಿ.ಶ್ರೀಕುಮಾರ್, ಡಾ.ಜೆ.ಸುಜಯ್, ಜಿ.ಬಿ.ಬಸವರಾಜಪ್ಪ, ಪ್ರಕಾಶ್, ನೂನೆಸಂಜನಾ ರೆಡ್ಡಿ, ಸಾವಂತ್ ಹಿಮಗಿರಿ ಅವರನ್ನು ಸನ್ಮಾನಿಸಲಾಯಿತು.

    ಕಾಂಗ್ರೆಸ್ ಮುಖಂಡ ಕೆ.ಸಿ.ನಾಗರಾಜ್, ಉದ್ಯಮಿ ಸುರೇಶ್‌ಬಾಬು, ಚಂದ್ರಣ್ಣ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಜಯ ಕರ್ನಾಟಕ ವೇದಿಕೆ ಅಧ್ಯಕ್ಷ ರಾಜೇಶ್ ಮದರಿ, ಬಿಜೆಪಿ ಮುಖಂಡರಾದ ಎನ್.ಬಿ.ಭಾರ್ಗವಿ ದ್ರಾವಿಡ್, ಡಾ.ಎಂ.ಸಿ.ನರಹರಿ, ಪ್ರಶಾಂತ್, ನಾಗರಾಜ್, ವಕೀಲರಾದ ರವೀಂದ್ರ, ಪ್ರಕಾಶ್, ಮಾಲತೇಶ್ ಅರಸ್, ಬಳಗದ ಅಧ್ಯಕ್ಷ ಎಸ್.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ತಂಡಗ, ಪದಾಧಿಕಾರಿಗಳಾದ ರವಿಕುಮಾರ್, ತಿಪ್ಪೇಶ್, ಉಲ್ಲಾಸ್, ಚಂದ್ರಶೇಖರ ಪಾಟೀಲ, ಸಂದೀಪ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts